ಕಾಲೇಜಿನಲ್ಲಿ ಕಲಿಯುತ್ತಿದ್ದ ಸಮೀರ್ ತಾನು ಸಂಪೂರ್ಣ ಬೆಳೆದಿದ್ದೇನೆಂದು ತನ್ನಷ್ಟಕ್ಕೆ ಭಾವಿಸಿದನು. ಕಾಲೇಜು ಜೀವನದ ಮೋಜನ್ನು ಚೆನ್ನಾಗಿ ಅನುಭವಿಸಿದ ಅವನು ಧೂಮಪಾನ, ಮದ್ಯಪಾನದ ಜತೆಗೆ ಹುಡುಗಿಯರೊಂದಿಗೆ ಚೆಲ್ಲಾಟ ವಾಡಿದನು. ಇವೆಲ್ಲಾ ತನ್ನ ಯೌವ್ವನದ ಸಾಧನೆಗಳೆಂದು ಆತ ತಿಳಿದಿದ್ದ. ಪ್ರತಿರಾತ್ರಿ ಮನೆಗೆ ತಡವಾಗಿ ಬರುತ್ತಿದ್ದ ಅವನು ಅಪ್ಪನು ಪ್ರಶ್ನಿಸಿದಾಗ ನಾಚಿಕೆ ಯಿಲ್ಲದೆ ಸುಳ್ಳು ಸುಬೂಬು ಹೇಳುತ್ತಿದ್ದನು. ಒಂದು ರಾತ್ರಿ ಸಮೀರ್ ಎಂದಿನಂತೆ ಮತ್ತೆ ಮನೆಗೆ ತಡವಾಗಿ ಬಂದಾಗ ಅವನ ಅಪ್ಪ ಮಗನ ಹೆಗಲ ಮೇಲೆ ಕೈ ಹಾಕಿ ಹೀಗೆ ಕೇಳಿದನು. ”ಮಗನೇ, ಒಬ್ಬ ವ್ಯಕ್ತಿ ಬೆಳೆದಿದ್ದಾನೆಂದು ಯಾವಾಗ ನೀನು ಪರಿಗಣಿಸಿವೆ? ”
ಆಗ ಸಮೀರ್ ಗೆ ಧೂಮಪಾನ ಮತ್ತು ಕುಡಿತ ಪ್ರಬುದ್ದತೆಯ ಸಂಕೇತಗಳೆಂದು ಉತ್ತರಿಸಲು ಆಗಲಿಲ್ಲ. ಮಗನ ಮೌನವನ್ನು ಗಮನಿಸಿದ ತಂದೆ ಅವನಿಗೆ ಹೀಗೆ ಹೇಳಿದನು…..
ಪ್ರಶ್ನೆಗಳು
1.ಅಪ್ಪ ಮಗನಿಗೆ ಏನು ಹೇಳಿದನು?
2.ಈ ಕಥೆಯ ಪರಿಣಾಮವೇನು?
ಉತ್ತರಗಳು
1.“ಒಬ್ಬ ವ್ಯಕ್ತಿ ಯಾವುದೇ ವಿಷಯದ ಬಗ್ಗೆ ಯಾರಿಗಾದರೂ ಸುಳ್ಳು ಹೇಳುವುದು ನೀರರ್ಥಕ ಎಂದು ಅರಿತುಕೊಂಡಾಗ ಅವನು ಬೆಳವಣಿಗೆಯಾಗಿದ್ದಾನೆಂದು ಪರಿಗಣಿಸಬಹುದು ”
2. “ಸುಳ್ಳು ಹೇಳುವುದು ಅಪ್ರಬುದ್ಧತೆಯ ಪ್ರತಿಕ. ಅಷ್ಟೇ ಅಲ್ಲದೆ ಅದು ಹೇಡಿತನದ ಲಕ್ಷಣ. ಸತ್ಯ ಹೇಳಲು ಧೈರ್ಯ ಬೇಕಾಗುತ್ತದೆ ಮತ್ತು ಅಂತಹ ಧೈರ್ಯ ಪ್ರಬುದ್ಧತೆಯ ಸಂಕೇತವಾಗಿದೆ. ”