ಮನೆ ಪೌರಾಣಿಕ ದಕ್ಷನ ವಂಶಾಭಿವೃದ್ಧಿ: ಭಾಗ ಒಂದು

ದಕ್ಷನ ವಂಶಾಭಿವೃದ್ಧಿ: ಭಾಗ ಒಂದು

0

 ಚಂದ್ರನ ತೇಜಾಂಶದೊಂದಿಗೆ ಪ್ರಚೇತಸರಿಗೆ ಜನಿಸಿದ ದಕ್ಷ ಪಜಾಪತಿ ವಯೋವಸ್ಥಾಕಾಲ ಕೃತ್ಯಗಳೆಲ್ಲವನ್ನು ನೆರವೇರಿಸಿ ತಪಸ್ಸಿಗೆ ತಕ್ಕ ವೈರಾಗ್ಯವನ್ನು ಉಳ್ಳವನಾಗಿ ತುಂಬಾ ಕಾಲದವರೆಗೂ ಘೋರ ತಪಸ್ಸನ್ನು ಆಚರಿಸಿದನು.ನಾರಾಯಣನು ದಕ್ಷನ ದೀಕ್ಷೆಯನ್ನು ಮೆಚ್ಚಿ  ಸಾಕ್ಷಾತ್ಕರಿಸಿ, ಹಿಂದೆ ಪ್ರಚೇತಸರಿಗೆ ತಾನು ಕೊಟ್ಟ ವರದಂತೆ ಬೂತ ಸೃಷ್ಟಿಯನ್ನು ಸೃಷ್ಟಿಸುವುದಾಗಿ ಅನುಮತಿಯನ್ನು ಪ್ರಸಾಧಿಸಿದನು.ಆಗ ನಾರಾಯಣನ ಆಜ್ಞೆಯನ್ನು ಸ್ವೀಕರಿಸಿ ದಕ್ಷ ಪ್ರಜಾಪತಿಯು ಅನನ್ಯ ತೇಜೋವಿಲಾಸದೊಂದಿಗೆ ಅಪಾರವಾದ ಕಲ್ಪನಾ ಶಕ್ತಿಯನ್ನು ಸಂತರಿಸಿಕೊಂಡು ಸೃಷ್ಟಿಗೆ ಕ್ರಿಯೆಗೆ ಸಂಕಲ್ಪವನ್ನು ತೊಟ್ಟನು. ಜನನ ಮರಣಗಳಿಲ್ಲದ. ತ್ರಿದಶರಾದ ಅನಿಮೇ

Join Our Whatsapp Group

 ದೇವತೆಗಳನ್ನು ಮೊಟ್ಟಮೊದಲಿಗೆ ಸೃಷ್ಟಿಸಿ ಅವರಿಗೆ ಸ್ವರ್ಗಲೋಕ ನಿವಾಸವನ್ನು ಏರ್ಪಡಿಸಿದನು ನರ ಶರೀರವರೂ, ಹಯಗ್ರೀವರೂ, ಪ್ಕವೀಣಾಧರರೂ ಆದ  ಕಿನ್ನರಲನ್ನು, ಗಂಧರ್ವರನ್ನು ಯಕ್ಷ, ರಾಕ್ಷಸ.ಸಿದ್ದ ಸಾಧ್ಯ,ಭೂತ,ಪಿಶಾಚಿ  ಭೂಚರ ಖೇಚರ ಗಣಗಳನ್ನು ಮೃಗ,ಪಕ್ಷಿ ಸರ್ಪ ಮುಂತಾದ ಅಚ್ಚರ ಸಚರಾಚಾರ  ಭೂತ,,ಜಾತಿಯನ್ನು ಸೃಷ್ಟಿಸಿದನು.ಮಾನವರುನ್ನು ಸೃಷ್ಟಿಸಿ

ಅವರನ್ನು ಭೂಮಂಡಳಸ್ಥದ ಮೇಲಿಟ್ಟು ಅನ್ನೋದಕಗಳನ್ನು ಚಿರಾಯುವನ್ನು ಪ್ರಾಸಾಧಿಸಿದನ್ನು. ಪ್ರಕೃತಿ ಶಕ್ತಿಯನ್ನು,ಗ್ರಹ ತಾರಾ ನಕ್ಷತ್ರ ಖಗೋಳವನ್ನೂ, ದೃಶ್ಯಾ ದೃಶ್ಯ  ವಸ್ತುಗಳನ್ನು ತನ್ನ ಸಂಕಲ್ಪ ಬಲದಿಂದ ದಕ್ಷನು ಸೃಷ್ಟಿಸಿದನು.

 ಇಂತಹ ವಿಸ್ತಾರವಾದ  ಪ್ರಮಾಣದ ಭೂತಸೃಷ್ಟಿಯನ್ನು ಮಾಡಿದರೂ ಆತನಿಗೆ ತೃಪ್ತಿಯುಂಟಾಗಲಿಲ್ಲ. ದಕ್ಷಪ್ರಜಾಪತಿಯು ಸೃಷ್ಟಿಸಿದ ಜೀವಿಗಳೆಲ್ಲವೂ ಅಪೂರ್ವ ವಾದವುಗಳೇ, ದರ್ಶನೀಯವಾದವುಗಳೇ ಆಗಿದ್ದು ರೂಪವನ್ನು  ಪಡೆದುಕೊಂಡರೂ, ಸೃಷ್ಟಿಕರ್ತನ ಪ್ರಮೇಯವಿಲ್ಲದೇ ಪ್ರಜಾಭಿವೃದ್ಧಿ ಯಾಗಲಿಲ್ಲ. ಈ ರೀತಿಯಾಗಿ ಸೃಷ್ಟಿಯು ಸ್ತಬ್ದವಾಗಲು ಪ್ರಾಣಿಗಳಿಗೆ ಮಿಥುನ ಕರ್ಮವಿಲ್ಲದೇ ಇರುವುದೆ ಎಂದು ಆತನು ಗ್ರಹಿಸಿದನು ಕೂಡಲೇ ದಕ್ಷನು ವರುಣ ಪ್ರಜಾಪತಿಯ ಮಗಳಾದ ಅಸಿಕ್ನಿಯನ್ನು ವಿವಾಹವಾಗಿ ಆಕೆಯಲ್ಲಿ ಸಂತಾನ ಕಾಮವನ್ನು ಹೊಂದಿ ದಾಂಪತ್ಯ ಧರ್ಮವನ್ನು ನಿರ್ವಹಿಸಿದರು. ಆ ಮೈಥುನಕ್ಕೆ ಹರ್ಯಶ್ವರರು ಎಂಬ 5000 ಗಂಡು ಮಕ್ಕಳಾದರೂ. ದಕ್ಷ ಪ್ರಜಾಪತಿಯು ತನ್ನ ಮಕ್ಕಳೆಲ್ಲರಿಗೂ ಅಮೋಘವಾದ ವೀರ್ಯ ಸಂಪತ್ತನ್ನು ಪ್ರಜಾಪ್ರತಿತ್ವ ಶಕ್ತಿಯನ್ನು ಅನುಗ್ರಹಿಸಿ ಅವರೆಲ್ಲರೂ ವಿವಾಹವಾಗಿ ಸಂತಾನವನ್ನು ಪಡೆಯಬೇಕೆಂದು ನಿಯಮಿಸಿದನು.

      ಈ ರೀತಿಯಾಗಿ ಬ್ರಹ್ಮನಿಗೆ ಸರಿಸಮನಾಗಿ ಪ್ರತಿಸೃಷ್ಟಿಯನ್ನು ಮಾಡುತ್ತಿದ್ದ ಆತನ ಮಹಾಶಕ್ತಿಗೆ ವಿಘ್ನವನ್ನು ಉಂಟು ಮಾಡಬೇಕೆಂದು ತಿಳಿದು ಒಮ್ಮೆ ಬ್ರಹ್ಮಮಾನಸ ಪುತ್ರನಾದ ನಾರದ ಮಹರ್ಷಿ ಹರ್ಯಶ್ವರ ಬಳಿಗೆ ಹೋಗಿ “ಮಕ್ಕಳೇ!ಈ ಲೋಕದಲ್ಲಿ ಸುಖ ಭೋಗಗಳು ಎಂದಿಗೂ ಶಾಶ್ವತವಲ್ಲ.ನಶ್ವರವಾದ ಈ ಶರೀರವನ್ನು ಕ್ಷಣಿಕ ಸುಖಗಳಿಗಾಗಿ ವ್ಯರ್ಥ ಮಾಡುವುದನ್ನು ಪ್ರಾಜ್ಞರಾದವರು ಯಾರೂ ಅಂಗೀಕರಿಸುವುದಿಲ್ಲ ಎಂದು ಉಪ ದೇಶಿಸಿದನು. ನಿಮಗೆ ನಿಜಕ್ಕೂ ಸೌಂದರ್ಯ ದರ್ಶನ್ ಅಂಬಿಲಾಸೆ ಇದ್ದರೆ ನಿಮ್ಮ ದೃಷ್ಟಿಯನ್ನು ರಮಣೀಯ ಶರೀರಕ್ಕಿಂತಲೂ ಮನೋಜ್ಞವಾದ ವಿಷಯಗಳಗಳಿಗೆ ತಿರುಗಿಸಿ.ನಿಮ್ಮ ತಂದೆ ನಿರ್ಮಿಸಿದ ಈ ಬ್ರಹ್ಮಾಂಡದಲ್ಲಿ ಹಲವಾರು ವಿಚಿತ್ರಗಳು ಆಡಗಿವೆ ! ಈ ಲೋಕೋತ್ತರ ವೈಭವವನ್ನು ಕಣ್ಣಾರೆ ಕಣದೆಯೇ ನೀವು ಕಾಲವನ್ನು ಕಳೆಯುತ್ತಿದ್ದೀರಾ.ಈ ವಿಶ್ವವೆಲ್ಲಾ ಪರ್ಯಟನೆ ಮಾಡಿದ ಜಗತ್ತನ್ನೆಲ್ಲಾ ನೋಡಬೇಕಾದ ವಯಸ್ಸಿನಲ್ಲಿ ನಿಮಗೆ ಸಂತಾನ ಬಯಕೆಗಳು,ಕಾಮಾ ಪ್ರಲೋಭವೇಕೆ? ”ಎಂದು ಹೇಳಿ ಅವರನ್ನು ಹರಿದುಂಬಿಸಿದನು. ಆಗ ಹರ್ಯಶ್ವರು ನಾರದನ ಮಾತುಗಳನ್ನು ನಂಬಿ ವಿಶ್ವ ಸಂದರ್ಶನಕ್ಕಾಗಿ ಹೊರಟುಹೋಗಿ ಸಮುದ್ರದೊಳಕ್ಕೆ ಸಂಗಮಿಸಿದ ಕಾಲುವೆಯಂತೆ ಕಾಣಿಸದೇ ಅದೃಶ್ಯರಾದರು. ಎಷ್ಟು ಕಾಲ ಕಳೆದರೂ,ಅವರ ಸುಳಿವೇ ಸಿಗಲಿಲ್ಲ. ನಂತರ ದಕ್ಷನು ಸ್ವಲ್ಪ ಕಾಲದ ಬಳಿಕ ವೈತರಣಿಯನ್ನು ವಿವಾಹವಾಗಿ ಆಕೆಯ ಸಾವಿರ ಗಂಡು ಮಕ್ಕಳನ್ನು ಹೆತ್ತನು. ಅವರಿಗೆ ಶಬಲಾಶ್ವರೆಂದು ಹೆಸರನ್ನಿಟ್ಟು,  ಎಂದಿನಂತೆಯೇ ಅವರಿಗೂ ಪ್ರಜಾಭಿವೃದ್ಧಿ ಕಾರ್ಯಕ್ಕೆ ನಿಯೋಜಿಸಿದನು. ಈ ಸಲವೂ ಸಹ ನಾರದನು ಮತ್ತೆ ಸೃಷ್ಟಿ ಕ್ರಿಯೆಗೆ ಅಡ್ಡಿಯನ್ನುಂಟುಮಾಡಬೇಕೆಂದು ಸಂಕಲ್ಪಿಸಿ ಶಬಲಾಶ್ವರಿಗೂ ಹರ್ಯಶ್ವರೊಂದಿಗೆ ಹೇಳಿದ ಮಾತುಗಳನ್ನೇ ಹೇಳಿ ಪ್ರ ಲೋಭಪಡಿಸಿದನು.ದಕ್ಷ ಪ್ರಜಾಪತಿಯ ದ್ವಿತೀಯ ಸಂತತಿಯವರೂ ಸಹ ಅದೇ ರೀತಿಯಾಗಿಯೇ ದೇಶಾಂತರ ಹೋಗಿ ಅವರೂ ವಾಪಸ್ಸು ಬರಲಿಲ್ಲ.