ಮನೆ ರಾಜ್ಯ ಪ್ರಜ್ವಲ್, ಸೂರಜ್ ಆ ಕೆಲಸ ಮಾಡಿಲ್ಲವೆಂದು ಎಚ್ ಡಿ ಕುಮಾರಸ್ವಾಮಿ ಹೇಳಲಿ: ಸಚಿವ ತಿಮ್ಮಾಪುರ

ಪ್ರಜ್ವಲ್, ಸೂರಜ್ ಆ ಕೆಲಸ ಮಾಡಿಲ್ಲವೆಂದು ಎಚ್ ಡಿ ಕುಮಾರಸ್ವಾಮಿ ಹೇಳಲಿ: ಸಚಿವ ತಿಮ್ಮಾಪುರ

0

ಬಾಗಲಕೋಟೆ: ಮಾನಗೇಡಿ ಕೆಲಸ ಮಾಡು ಎಂದು ನಾವು ಹೇಳಿದ್ದೆವಾ? ಪ್ರಜ್ವಲ್ ಮತ್ತು ಸೂರಜ್ ಆ ಕೆಲಸ ಮಾಡಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಅವರಾದರೂ ಹೇಳಲಿ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಹೇಳಿದರು.

Join Our Whatsapp Group

ನಗರದಲ್ಲಿ ಕೆಡಿಪಿ ಸಭೆಯ ಮುಂಚೆ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ ಎಚ್ ಡಿಡಿ ಕುಟುಂಬ ಮುಗಿಸಲು ಹುನ್ನಾರ ನಡಿತಿದೆಯೆಂಬ ಎಚ್ ಡಿಕೆ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಎಚ್ ಡಿಕೆ ಕೇಂದ್ರ ಸಚಿವರಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ದೇವೆಗೌಡರ ಮೊಮ್ಮಕ್ಕಳಿಗೂ ಅಷ್ಟೆ, ನಮ್ಮ ಮಕ್ಕಳಿಗೂ ಅಷ್ಟೆ, ಬಿಎಸ್ ವೈ, ಸಿದ್ದರಾಮಯ್ಯ ಮಕ್ಕಳಿಗೂ ಒಂದೇ ಕಾನೂನು ಎಂದ ಹೇಳಿದ ಸಚಿವರು, ಪೊಲೀಸರು ಕಾನೂನು ಪ್ರಕಾರ ತನಿಖೆ ಮಾಡುತ್ತಿದ್ದಾರೆ. ಅದಕ್ಕೆ ದೇವೆಗೌಡರ ಪ್ಯಾಮಿಲಿಯನ್ನು ಮುಗಿಸಿಬಿಡುತ್ತಾರೆಂದು ಹೇಳುವುದು ಸರಿಯಲ್ಲ ಎಂದರು.

ಅವರು ಯಾವಾಗಲೂ ಅದೆ ಸಿಂಪತಿಗೆ ಏನ್ ಮಾಡಬೇಕು. ಅದರಲ್ಲಿ ಲಾಭ ಹೇಗೆ ಪಡಿಬೇಕೆಂದು ಯೋಚನೆ ಮಾಡುತ್ತಾರೆ ಎಂದು ಸಚಿವರು, ಕೇಂದ್ರ ಸಚಿವರಾಗಿ ಎಚ್ ಡಿಡಿ ಕುಟುಂಬ ರಾಜಕಾರಣ ಮುಗಿಲು ಹುನ್ನಾರ ಎಂದು ಹೇಳಬಾರದು. ರಾಜಕೀಯ ಷಡ್ಯಂತರ ಎನ್ನುತ್ತಾರೆ. ಯಾವುದರಲ್ಲಿ ಇದೆ ರಾಜಕೀಯ ಷಡ್ಯಂತರ ಎಂದರು.

ಮಾನಗೇಡಿ ಕೆಲಸ ಮಾಡಿದವರನ್ನ ಬಿಟ್ಟರೆ ಅವರು ದೃಷ್ಠಿಯಲ್ಲಿ ಸರ್ಕಾರ ಒಳ್ಳೆಯದು. ಪ್ರಜ್ವಲ್, ಸೂರಜ್ ಮಾಡಿದ್ದು ತಪ್ಪೋ ಸರಿಯೋ ಎಂದು ಹೇಳಲಿ. ನಮ್ಮ ಹುಡುಗರು ಒಳ್ಳೆ ಕೆಲಸ ಮಾಡಿದ್ದರು. ಅವರ ಮೇಲೆ ಕೇಸ್ ಹಾಕಲಾಗಿದೆ ಎಂದು ಹೇಳಲಿ ಎಂದು ಪ್ರಶ್ನೆ ಹಾಕಿದ ಸಚಿವರು, ಜನ ಏನಂತಾರೆ ಎನ್ನುವುದನ್ನಾದರೂ ಯೋಚನೆ ಮಾಡಬೇಕಲ್ಲ, ಹೀಗೆಲ್ಲ ಮಾತನಾಡಿದರೆ ಜನಾ ಏನ್ ಅಂದಾರು ಎನ್ನೊದಾದರೂ ಯೋಚನೆ ಎಚ್ ಡಿಕೆಗೆ ಇರಬೇಕು ಎಂದರು.

ಇದೇ ಸಮಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರವಾಗಿ ಸಚಿವ ರಾಜಣ್ಣ ಹೇಳಿಕೆ ಸಮರ್ಥಿಸಿಕೊಂಡ ಸಚಿವ ತಿಮ್ಮಾಪೂರ ಅವರು, ಅದು ನನಗೆ ಏನೇನು ಗೊತ್ತಿಲ್ಲ. ಅದು ನಮ್ಮ ಪಕ್ಷ ತೆಗೆದುಕೊಳ್ಳುವಂತ ತಿರ್ಮಾನ. ಎಐಸಿಸಿ, ಕೆಪಿಸಿಸಿ ತೆಗೆದುಕೊಳ್ಳುತ್ತದೆ. ಆ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ನೀವು ಡಿಸಿಎಂ ರೇಸ್ ನಲ್ಲಿ ಇದ್ದೀರಾ ಎಂಬ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿ, ಕರೆದು ಕೊಟ್ಟರೆ ಯಾರು ಒಲ್ಲೆ ಅಂತಾರ ಹೇಳಿ. ಮುಖ್ಯಮಂತ್ರಿ ಆಗಲು ಯಾರು ಒಲ್ಲೆ ಎನ್ನುತ್ತಾರೆ ಹೇಳಿ? ಎಲ್ಲರಿಗೂ ನಿಭಾಯಿಸುವಂಥ ಶಕ್ತಿ ಇದೆ. ಎಲ್ಲಾ ಜಾತಿ ಜನಾಂಗದವರು ಅಧಿಕಾರದಲ್ಲಿರಬೇಕು. ತನ್ನ ಮೂಲಕ ಜಾತಿ ಜನಾಂಗದವರಿಗೆ ನ್ಯಾಯ ಕೊಡಿಸುವಂತಹ ಶಕ್ತಿಯಿದೆ. ಸಿದ್ಧರಾಮಯ್ಯ ಸರ್ಕಾರದಲ್ಲಿ ಸರ್ವ ಜನಾಂಗಕ್ಕೂ ಅವಕಾಶಗಳಿದ್ದು, ಅದರ ಜೊತೆಗೆ ಪವರ್ ಬೇಕೆಂಬುದು ತಪ್ಪಲ್ಲ. ಕೊಡುವುದು ಬಿಡುವುದು ಹೈಕಮಾಂಡ್ ಬಿಟ್ಟ ವಿಚಾರ ಎಂದು ಸಚಿವ ಆರ್ ಬಿ ತಿಮ್ಮಾಪೂರ ತಿಳಿಸಿದರು.

ಇದೇ ಸಮಯದಲ್ಲಿ ಕಾಂಗ್ರೆಸ್ ಶಾಸಕರು ಎಚ್ ಡಿಕೆ ಸಂಪರ್ಕ, ಎಚ್ ಎಡಿಕೆ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಮಾನ ಮರ್ಯಾದೆ ಇಲ್ಲದ ಮಾತುಗಳು ಇವೆಲ್ಲ, ಸರ್ಕಾರ ಬಿದ್ದು ಹೊಗುತ್ತದೆ ಸರ್ಕಾರ ತಂದು ಬಿಡುತ್ತೇವೆ ಎನ್ನುವುದು ಪ್ರಜಾಪ್ರಭುತ್ವದ ವಿರೋಧಿ ಮಾತುಗಳು ಎಂದು ಕಿಡಿಕಾರಿದರು. ತನ್ನದ ತಾನೇ ಸರ್ಕಾರ ಬಿದ್ದು ಹೊಗುತ್ತದೆ ಎಂದರೆ ಏನು, ಇವರೇನು ಮಾಡುತ್ತಿದ್ದಾರೆ. ಹಂಗಾದರೆ, ಇವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಮಂತ್ರಿಗಳಾದರವರು ಹೀಗೆ ಮಾತನಾಡಬಾರದು. ಜನತೆ ತಿರಸ್ಕರಿಸಿದ ನಂತರ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂಬ ದುರಾಸೆಯಾಗಿದೆ. ಬಿಜೆಪಿ ಮಿತ್ರ ಪಕ್ಷ ಅಧಿಕಾರದ ಭ್ರಮೆಯಲ್ಲಿದ್ದಾರೆ. ಇವರಿಗೆ ಒಮ್ಮೆಯೂ ಪೂರ್ಣ ಬಹುಮತ ನೀಡಿಲ್ಲ.‌ ಯಾವಾಗಲೂ ಅಡ್ಡ ದಾರಿ ಹಿಡಿದೆ ಸರ್ಕಾರ ರಚನೆ ಮಾಡಿದ್ದು, ಹೇಗಾದರೂ ಮಾಡಿ ಅಧಿಕಾರ ತನ್ನದಾಗಿಸಿಕೊಳ್ಳಬೇಕು. ಪವರ್ ತನ್ನದಾಗಿಸಿಕೊಳ್ಳಬೇಕು ಎಂಬ ದುರಾಸೆ ಇದೆ ಎಂದು ಸಚಿವ ಆರ್ ಬಿ ತಿಮ್ಮಾಪೂರ ಟಾಂಗ್ ನೀಡಿದರು.