ಮನೆ ರಾಜ್ಯ 17 ನೂತನ ವಿಧಾನಪರಿಷತ್ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

17 ನೂತನ ವಿಧಾನಪರಿಷತ್ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

0

ಬೆಂಗಳೂರು: ಇತ್ತೀಚೆಗೆ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾದ ಹಾಗೂ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾದ ನೂತನ ವಿಧಾನ ಪರಿಷತ್ ಸದಸ್ಯರು ಇಂದು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

Join Our Whatsapp Group

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜರುಗಿತು. ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಡಾ.ಕೆ. ಗೋವಿಂದರಾಜು, ಐವನ್ ಡಿಸೋಜಾ, ಬಲ್ಕಿಸ್ ಬಾನು, ಜಗದೇವ್ ಗುತ್ತೇದಾರ್, ಎನ್.ಎಸ್.ಬೋಸರಾಜು, ಡಾ. ಯತೀಂದ್ರ ಹಾಗೂ ಎ. ವಸಂತ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ ಪ್ರತಿಪಕ್ಷ ಬಿಜೆಪಿಯಿಂದ ಮುಲೆ ಮಾರುತಿರಾವ್, ಸಿ.ಟಿ. ರವಿ, ಎನ್.ರವಿಕುಮಾರ್ ಹಾಗೂ ಜೆಡಿಎಸ್ ನಿಂದ ಟಿ.ಎನ್.ಜವರಾಯಿಗೌಡ ಪ್ರಮಾಣ ವಚನ ಸ್ವೀಕರಿಸಿದರು.

ಈಶಾನ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಡಾ.ಚಂದ್ರಶೇಖರ ಬಸವರಾಜ ಪಾಟೀಲ, ಬೆಂಗಳೂರು ಪದವೀಧರ ಕ್ಷೇತ್ರದ ರಾಮೋಜಿಗೌಡ, ಅಗ್ನೇಯ ಶಿಕ್ಷಕರ ಕ್ಷೇತ್ರದ ಡಿ.ಟಿ. ಶ್ರೀನಿವಾಸ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕ್ಷರ ಕ್ಷೇತ್ರದಿಂದ ಜೆಡಿಎಸ್ ನ ಎಸ್.ಎಲ್. ಭೋಜೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದ ಕೆ. ವಿವೇಕನಾಂದ, ಅಗ್ನೇಯ ಶಿಕ್ಷಕರ ಕ್ಷೇತ್ರದ ಡಿ. ಟಿ. ಶ್ರೀನಿವಾಸ ಪ್ರಮಾಣ ವಚನ ಸ್ವೀಕರಿಸಿದರು.

ಸಮಾರಂಭದಲ್ಲಿ, ಪರಿಷತ್ ನೂತನ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿ.ಟಿ ರವಿ ಬಳಿಕ ಸಿಎಂ ಕಾಲಿಗೆ ನಮಸ್ಕರಿಸಿದರು. ಇದೇ ವೇಳೆ ನಗುಮೊಗದಿಂದಲೇ ಸಿ.ಟಿ ರವಿ ಬೆನ್ನು ತಟ್ಟಿ, ಕಿವಿ ಹಿಂಡಿ ಬೀಳ್ಕೊಟ್ಟರು. ಸಿ.ಟಿ ರವಿ ಪ್ರತಿಜ್ಞಾವಿಧಿ ಸ್ವೀಕಾರದ ವೇಳೆ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಮಳೆಗರೆದರು. ಜೈ ಶ್ರೀರಾಮ್ ಘೋಷಣೆ ಕೂಗಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಎಚ್. ಕೆ. ಪಾಟೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.