ಮನೆ ಆರೋಗ್ಯ ತಲೆನೋವು: ಭಾಗ ಒಂದು

ತಲೆನೋವು: ಭಾಗ ಒಂದು

0

   ತಲೆ ಇರುವ ಯಾರಿಗೇ ಆದರೂ,  ನೋವು ಬರದೇ ಇರದು. ಅದನ್ನೇ ‘ತಲೆನೋವು’ ಎನ್ನುತ್ತಾರೆ.

Join Our Whatsapp Group

    ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 20 ರಿಂದ 40 ಮಂದಿ ಆಗಾಗ ತಲೆನೋವಿನಿಂದ ತೊಂದರೆ ಪಡುತ್ತಾರೆಂಬ ಒಂದು ಅಂದಾಜಿದೆ ಹೃದಯ ರೋಗಗಳು, ಕ್ಯಾನ್ಸರ್, ಪಾಶ್ವ ವಾಯು,ಏಡ್ಸ್ ತರಹದ ಭಯಾನಕ ರೋಗಗಳಿಗಿಂತ ಹೆಚ್ಚಾಗಿ,ಸಾಧಾರಣ ತಲೆನೋವುಗಳ ಕಾರಣದಿಂದ ಅನೇಕ ‘ಕೆಲಸದ ದಿನಗಳು’, ‘ವಿಶ್ರಾಂತಿ ಕಲ’ವ್ಯರ್ಥವಾಗುತ್ತವೆ.

    ತಲೆನೋವು ಎಂದಿಗೂ ಮಿದುಳಿನಲ್ಲಿ ಬರದು. ಏಕೆಂದರೆ ಮಿದುಳಿನ ಜ್ಞಾನವಾಹಿ ನರಗಳು ಇಲ್ಲದಿರುವುದರಿಂದ Meninges ಎಂಬ ಮಿದುಳಿನ ಸುತ್ತಲೂ ಇರುವ ತೆಳುಪೊರಗಳಿಂದ (Membranes)ಮೇಲ್ಬಾಗದಿಂದ ಅಲ್ಲಿರುವ ರಕ್ತನಾಳಗಳಿಂದ,ಸ್ನಾಯುಗಳಿಂದ ತಲೆನೋವು ಬರುತ್ತದೆ. ಈ ಭಾಗಗಳು ಒತ್ತಡಕ್ಕೊಳಗಾಗುವುದರಿಂದ,ವಿಕಸನಗೊಳ್ಳುವುದರಿಂದ ತಲೆನೋವು ಉಂಟಾಗುತ್ತದೆ.

    ತಲೆನೋವು ತಲೆಯ ಇಡೀ ಭಾಗದಲ್ಲಿರಬಹುದು, ತಲೆಯಲ್ಲಿ ಯಾವ ಒಂದು ಭಾಗದಲ್ಲಾದರೂ, ಉದಾಹರಣೆಗೆ ಕುತ್ತಿಗೆಯ ಹಿಂದೆ,ಹಣೆಯ ಭಾಗದಲ್ಲಿ ತಲೆಯ ಒಂದು ಪಾರ್ಶ್ವಭಾಗದಲ್ಲಿ,ಈ ರೀತಿಯಾಗಿ…ಒಮ್ಮೊಮ್ಮೆ ನೋವು ತಲೆಯ ಒಂದು ಪಾರ್ಶ್ವದಿಂದ ಮತ್ತೊಂದು ಪಾರ್ಶ್ವಕ್ಕೆ ವ್ಯಾಪಿಸಬಹುದು ಕೂಡಾ.

    ತಲೆನೋವು ಸ್ವಲ್ಪವೇ ಇರಬಹುದು, ಸುತ್ತಿಗೆಯಿಂದ ಹೊಡೆಯುತ್ತಿರುವಂತೆ ತೀವ್ರವಾಗಿಯೂ ಇರಬಹುದು, ಚುರುಗುಟ್ಟುವ ಇರಿತದಂತೆಯೂ ಇರಬಹುದು.ಒಮ್ಮೊಮ್ಮೆ ತಲೆನೋವಿನೊಂದಿಗೆ ಹೊಟ್ಟೆ ತೊಳೆಸುವ ಹಾಗೆ ವಾಂತಿ, ದೃಷ್ಟಿಗೆ ಸಂಬಂಧಿಸಿದ ಗೊಂದಲದಂತ ಲಕ್ಷಣಗಳು ಕೂಡಾ ಕಾಣಿಸಿಕೊಳ್ಳ ಬಹುದು.

    ತಲೆನೋವಿನಲ್ಲಿ ಅನೇಕ ಬಗೆಗಳಿವೆ ಟೆನ್ಷನ್ ತಲೆ ನೋವುಗಳು, ಪಾರ್ಟಿ ತಲೆನೋವುಗಳು, ಆಲ್ಕೋಹಾಲ್ ಹ್ಯಾಂಗೋವರ್, ಮೈಗ್ರೇನ್, ಇತ್ಯಾದಿಯಾಗಿ ಸುಮಾರು ನೂರಕ್ಕೂ ಹೆಚ್ಚು ತಲೆನೋವು ಗಳಿರುವುದೆಂಬ ಅಂದಾಜಿದೆ.

    ಅವುಗಳಲ್ಲಿ ಮೈಗ್ರೇನ್ ಬಹಳ ಮುಖ್ಯವಾದದ್ದು, ವಿಚಿತ್ರವಾದದ್ದು. ಡಾಕ್ಟರುಗಳ ಬಳಿಗೆ ತಲೆನೋವಿನಿಂದಾಗಿ ಬರುವ ರೋಗಿಗಳಿಗೆ ಶೇಕಡ 50 ರಿಂದ 65 ಮಂದಿ ಮೈಗ್ರೇನ್ ಗೆ ಸಂಬಂಧಿಸಿದ ರೋಗಿಗಳೇ ಇರುವವರೆಂದು ಅತಿಶಯೋಕ್ತಿಯಲ್ಲ.

    ವಿವಿಧ ತಲೆನೋವುಗಳು,ಅವುಗಳ ಲಕ್ಷಣಗಳು,ಅವು ಏಕೆ ಬರುತ್ತವೆ,ಬಂದಾಗ ವಹಿಸಬೇಕಾದ ಜಾಗರೂಕತೆಗಳೇನು, ಮೊದಲಾದ ವಿವರಗಳನ್ನು ಕುರಿತು ಇದೇ ಅಧ್ಯಾಯದಲ್ಲಿ ಸಂಗ್ರಹವಾಗಿ ಕೊಟ್ಟಿರುವ ಪಟ್ಟಿಯಲ್ಲಿ ನೋಡಬಹುದು.

     ಈ ಪಟ್ಟಿಯಲ್ಲಿ ವಿವರಿಸಿರುವ ತಲೆನೋವುಗಳಲ್ಲದೆ  ಮತ್ತೊಂದು ಅಪಾಯಕಾರಿಯಾದ ತಲೆನೋವಿದೆ. ಅದನ್ನು Secondary Inflammatory Headache ಎನ್ನುತ್ತಾರೆ ಮರುಚಲ ಉರಿಯೂತ ತಲೆನೋವು ಬಹಳ ಅಪರೂಪದ ತಲೆನೋವಿದು. ಶರೀರದಲ್ಲಿ ಎಲ್ಲೋ ಉಂಟಾದ ಗಾಯಕ್ಕೆ ಅಥವಾ ವ್ಯಾದಿಗೆ ಸೂಕ್ತವಾಗಿರುತ್ತದೆ.ಕೂಡಲೇ ವೈದ್ಯರಿಗೆ ತೋರಿಸಿಕೊಳ್ಳುವುದು ಅಗತ್ಯ.

   ಪಟ್ಟಿಯಲ್ಲಿ ಸೂಚಿಸಿರುವ ಎಲ್ಲ ತಲೆನೋವುಗಳನ್ನು ಕುರಿತು ವಿವರಿಸಬೇಕೆಂದರೆ ಈ ಪುಸ್ತಕದ ವ್ಯಾಪ್ತಿಮೀರುತ್ತದೆ. ಆದ್ದರಿಂದ ಮುಖ್ಯವಾದ ಈ ಕೆಳಗಿನ ಎರಡು ತಲೆನೋವುಗಳನ್ನು ಕುರಿತು ಮಾತ್ರ ವಿವರವಾಗಿ ನೋಡೋಣ.

 1.ಟೆನ್ಷನ್ (ಒತ್ತಡದ )ತಲೆನೋವು (Tension Headache)

 2.ಮೈಗ್ರೇನ್ (ಅರೆತಲೆ ನೋವು ) (Migraine)