ಮನೆ ರಾಜ್ಯ ರೈತರಿಗೆ ಲಾಭ ಸಿಗಲೆಂದು ಹಾಲಿನ ದರ ಏರಿಕೆ: ಪ್ರಿಯಾಂಕ್ ಖರ್ಗೆ

ರೈತರಿಗೆ ಲಾಭ ಸಿಗಲೆಂದು ಹಾಲಿನ ದರ ಏರಿಕೆ: ಪ್ರಿಯಾಂಕ್ ಖರ್ಗೆ

0

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೆ ಹಾಲಿನ ದರವನ್ನೂ ಸಹ ಹೆಚ್ಚಿಸಿರುವ ರಾಜ್ಯ ಸರ್ಕಾರದ ನಡೆಗೆ ವಿಪಕ್ಷಗಳು ಮತ್ತು ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಈ ಬೆನ್ನಲ್ಲೆ ಇಂದು ಮಾತನಾಡಿರುವ ಗ್ರಾಮೀಣಾಭಿವೃದ್ದಿ ಸಚಿವ  ಪ್ರಿಯಾಂಕ್ ಖರ್ಗೆ, ಹಾಲು ದರ ಏರಿಕೆಯಿಂದಾಗಿ ರೈತರಿಂದ ಹಾಲು ಖರೀದಿಗೆ ಅನುಕೂಲ ಆಗಲಿದೆ ರೈತರಿಗೆ ಲಾಭ ಸಿಗಲೆಂಬ ಉದ್ದೇಶದಿಂದ ಏರಿಕೆ ಮಾಡಲಾಗಿದೆ ಎಂದಿದ್ದಾರೆ.

ಇಂದಿನಿಂದ ಹಾಲಿನ ದರ ಏರಿಕೆ ಜಾರಿಗೆ ಬರಲಿದೆ. ಇಂದಿನ ದರ ಹೆಚ್ಚಳದ ಜತೆ ಕ್ವಾಂಟಿಟಿ ಕೂಡ ಹೆಚ್ಚಾಗಲಿದೆ ಎಂದು ಹಾಲಿನ ದರ ಏರಿಕೆಯನ್ನ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ  ಮಾಡಿಕೊಂಡಿದ್ದಾರೆ.