ಮನೆ ಕಾನೂನು ಉಡುಪಿಯಲ್ಲಿ ನಾಲ್ವರ ಕೊಲೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ

ಉಡುಪಿಯಲ್ಲಿ ನಾಲ್ವರ ಕೊಲೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾ

0

ಉಡುಪಿ: ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ 2023 ನವೆಂಬರ್ 12 ರಂದು ಗಗನಸಖಿ ಸೇರಿ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಜಾಮೀನು ಅರ್ಜಿಯನ್ನು  ವಜಾಗೊಳಿಸಿ ನ್ಯಾಯಮೂರ್ತಿ ಎಂ.ಜಿ ಉಮಾ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.

Join Our Whatsapp Group

ಮಲ್ಪೆ ಠಾಣೆಯ ನೇಜಾರು ಎಂಬಲ್ಲಿ ಒಂದೇ ಕುಟುಂಬದವರಾದ ಐನಾಜ್, ಹಸೀನಾ, ಅಫ್ನಾನ್ ಹಾಗೂ ಅಸೀಮ್ ಎಂಬುವರರನ್ನ ಹತ್ಯೆ ನಡೆಸಿದ್ದ. ಈ ಕುರಿತು ಸಾಂದರ್ಭಿಕ ಸಾಕ್ಷಿ, ಸಿಸಿಟಿವಿ ದೃಶ್ಯ, ಆರೋಪಿ ಕೂದಲಿನ DNA ಆಧರಿಸಿ ಹೆಚ್ಚುವರಿ ಎಸ್​ಪಿಪಿ ಬಿ.ಎನ್.ಜಗದೀಶ್ ಅವರು ಇಂದು(ಗುರುವಾರ) ವಾದ ಮಂಡಿಸಿದ್ದರು. ಅದರಂತೆ ಬರ್ಬರ ಹತ್ಯೆ ಆರೋಪಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಇನ್ನು ಈ ಪ್ರಕರಣದ ಕುರಿತು ಅಂದು ಮಾತನಾಡಿದ್ದ ಎಸ್​ಪಿ ಡಾ.ಅರುಣ್, ‘​ ನಾಲ್ವರ ಹತ್ಯೆಯನ್ನು ಮಾಡಿರುವುದಾಗಿ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಒಪ್ಪಿಕೊಂಡಿದ್ದಾನೆ.. ಮೇಲ್ನೋಟಕ್ಕೆ ಹತ್ಯೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆಯಿದೆ. ಸಂಪೂರ್ಣ ತನಿಖೆ ಮಾಡದೆ ಕಾರಣ ಏನು ಹೇಳಲು ಸಾಧ್ಯವಿಲ್ಲ. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ. ಅವನ ಉದ್ದೇಶ ಆಯ್ನಾಸ್ ಕೊಲೆ ಮಾಡುವುದಾಗಿತ್ತು. ಆದರೆ, ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಮತ್ತು ಸಾಕ್ಷಿ ನಾಶ ಮಾಡಲು ಉಳಿದವರನ್ನು ಕೊಲೆ ಮಾಡಿರುವ ಬಗ್ಗೆಯೋ ಒಪ್ಪಿಕೊಂಡಿದ್ದಾನೆ ಎಂದಿದ್ದರು.