ಮನೆ ಸುದ್ದಿ ಜಾಲ ರೈಲ್ವೆ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ವಂಚನೆ: ಪ್ರಶ್ನಿಸಿದ್ದಕ್ಕೆ 14 ಪೌರ ಕಾರ್ಮಿಕರು ವಜಾ

ರೈಲ್ವೆ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ವಂಚನೆ: ಪ್ರಶ್ನಿಸಿದ್ದಕ್ಕೆ 14 ಪೌರ ಕಾರ್ಮಿಕರು ವಜಾ

0

ಮೈಸೂರು (Mysuru)- ರೈಲ್ವೆ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ವಂಚಿಸುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ 14 ಪೌರ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ನಿಯಮ ಬಾಹಿರ ವಜಾ ಖಂಡಿಸಿ ಪೌರಕಾರ್ಮಿಕರು ಇಂದು ರೈಲ್ವೆ ವಿಭಾಗೀಯ ಮುಖ್ಯಸ್ಥರ ಕಚೇರಿ ಮುಂದೆ ಐ.ಎನ್.ಟಿ.ಯು.ಸಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಲೇಬರ್ ಕಂಟ್ರಾಕ್ಟರ್ ನಿಂದ ಪೌರಕಾರ್ಮಿಕರಿಗೆ ವೇತನ ವಂಚನೆಯಾಗಿದ್ದು, ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ನೀಡಲಾಗಿದೆ. ದೂರಿನನ್ವಯ ಕಾರ್ಮಿಕ ಇಲಾಖೆ ಕಂಟ್ರಾಕ್ಟರ್ ವಿಚಾರಣೆ ನಡೆಸಿದ್ದರು. ಈ ನಡುವೆ ದೂರು ನೀಡಿದ್ದ ಕಾರ್ಮಿಕರನ್ನು ರೈಲ್ವೆ ಇಲಾಖೆ ಏಕಾಏಕಿ ವಜಾಗೊಳಿಸಿದೆ. ಅಲ್ಲದೆ, ಬದಲಿ ಪೌರಕಾರ್ಮಿಕರ ನೇಮಕ ಮಾಡಿಕೊಳ್ಳಲಾಗಿದೆ.

ರೈಲ್ವೆ ಅಧಿಕಾರಿಗಳ ಈ ನಡೆಯನ್ನು ಖಂಡಿಸಿ ಪೌರಕಾರ್ಮಿಕರಿಗೆ ನ್ಯಾಯಕೊಡಿಸುವಂತೆ ಒತ್ತಾಯಿಸಿದ್ದಾರೆ.