ಯೋಗ ಮುದ್ರೆಯ ಭದ್ರ ಮೂರ್ತಿಯ ||
ಈ ಅಂದ ನೋಡಿ ಬನ್ನೀ ||
ಧರ್ಮಶಾಸ್ತ್ರನ ಸನ್ನಿಧಾನಕ್ಕೆ ||
ಆ ಹರಕೆ ಎಲ್ಲಾ ತನ್ನಿ || ಯೋಗ ||
ಹತ್ತಲು ಮೆಟ್ಟಿಲು ಹದಿನೆಂಟು
ಅದರಲ್ಲಿ ಅರ್ಥ ನೂರುಂಟು ||
ನಮ್ಮ ಪುರಾಣ ಹದಿನೆಂಟು ||
ಅದರಾಚೆ ಇದರ ಈ ಗುಟ್ಟು ||ಯೋಗ ||
ಶಬರಿ ಬೆಟ್ಟದ ಕೊನೆಯಲ್ಲಿ
ಕುಳಿತಿಹ ಮಾರುತಿ ಪ್ರಭ ಚೆಲ್ಲಿ ||
ಭಕ್ತರ ಬಂಧು ಅಯ್ಯಪ್ಪ ||
ಪ್ರೇಮದ ಸಿಂಧು ನಮ್ಮಪ್ಪ ||ಯೋಗ ||
ಸ್ವಾಮಿಯೇ ಶರಣಂ ಅಯ್ಯಪ್ಪ
ಕರುಣಾ ಮೂರ್ತಿಯೇ ಅಯ್ಯಪ್ಪ ||
ಭಕ್ತ ವತ್ಸಲ ಅಯ್ಯಪ್ಪ ||
ಭಾಗ್ಯನಿಧಿಯೆ ನಿನ್ನಪ್ಪ|| ಯೋಗ ||