ಮನೆ ದೇವರನಾಮ ಎತ್ತಲೋ ಮಾಯವಾದ ಮುತ್ತಿನ

ಎತ್ತಲೋ ಮಾಯವಾದ ಮುತ್ತಿನ

0

ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ||
ಎತ್ತಿ ತಂದೆ ಎಲ್ಲಿಂದ ರಾಯ ಮುಚಕ್ರ ರಾಯ ||
ಸಪ್ತ ಶ್ರೀ ಸಮ್ಯನ ಮುದ್ದು ಮೊಗದಲ್ಲಿ ಮಧ್ಯೆ
ನಗೆಯ ತಂದೆಯ ಮಹಾನೀಯಾ |
ಮಾರುತಿರಾಯ || ಎತ್ತಲೋ ||

ಸೀತಮ್ಮ ಸ್ಥಾನ ಮಾಡಿ ಮೂಗುತಿಯ ಹುಡುಕಾಡಿ ||
ನಿನ್ನ ಕೂಗಿದಳೇನು ಹನುಮಂತರಾಯ ||
ನೀರಲ್ಲಿ ಬಾಣ ಬಿಟ್ಟು ನದಿಯನ್ನೇ ಶೋಧಿಸಿದೆ
ಎಂಥ ಶ್ರದ್ಧೆಯೋ ಮಹಾನೀಯಾ |
ಹನುಮಂತರಾಯ || ಎತ್ತಲೋ ||

ಅಮ್ಮ ಸೀತಮ್ಮ ನಿನ್ನ ಭಕ್ತಿಗೆ ಮೆಚ್ಚಿ ||
ಮುಚಕ್ರ ರಾಯನೆಂದು ಆರಸಿ ದಳೇನು ||
ನಿನ್ನಿಂದ ದಾಸನನ್ನು ಪಡೆದ ಆ ರಾಮನು
ಎಂಥ ಭಾಗ್ಯವಂತನಯ್ಯಾ |ಮಾರುತಿರಾಯ || ಎತ್ತಲೋ ||

ನಿನ್ನಂತೆ ಭಕ್ತಿ ಇಲ್ಲ ನಿನ್ನಂತೆ ಶಕ್ತಿ ಇಲ್ಲ ||
ಏನು ಇಲ್ಲದೆ ಜೀವನ ನನ್ನದು ಸ್ವಾಮಿ |
ನೀನೆ ನಾ ನಂಬಿ ಬಂದೆ
ನೀನೆ ನನ್ನ ತಾಯಿ ತಂದೆ
ಕಾಪಾಡುವ ಹೊಣೆಯು ನಿನ್ನದು |
ತಂದೆ ನಿನ್ನದು || ಎತ್ತಲೋ ||
ಮುಚಕ್ರ ರಾಯ ಮುರ್ಚಕ್ರ ರಾಯ |