ಮನೆ ಯೋಗಾಸನ ಕ್ರೌಂಚಾಸನ

ಕ್ರೌಂಚಾಸನ

0

 ‘ಕೌಂಚ’ವೆಂದರೆ ಕೊಕ್ಕರೆ ಜಾತಿಗೆ ಸೇರಿದ ಒಂದು ಪಕ್ಷಿ ‘ಕ್ರೌಂಚ’ವೆಂಬುದು ಒಂದು ಪರ್ವತದ ಹೆಸರು ಹೌದು. ಪೌರಾಣಿಕಕಥೆಯಂತೆ,ಈ ಪರ್ವತವು ಹಿಮವಂತನ ಮೊಮ್ಮಗನ ದೇವಸೇನಾನಾಯಕನಾದ ಷಣ್ಮುಖನು ಇದನ್ನು  ಇದನ್ನು ಕಾರಣಾಂತರದಿಂದ ತನ್ನಲ್ಲಿದ್ದ ‘ಶಕ್ತಿ’ ಯೆಂಬ ವಿಶೇಷ ಆಯುಧದಿಂದ ಸೀಳಿ, ‘ಕ್ರೌಂಚಧಾರಣಾ’ವೆಂಬ ಅಶ್ವರ್ಥನಾಮವನ್ನು ಗಳಿಸಿದನು. ಅಲ್ಲದೆ ಈ ಪರ್ವತವನ್ನು ವಿಷ್ಣುವಿನ ಆರನೆಯ ಅವತಾರವೆನಿಸಿದ ಪರಶುರಾಮನೂ ಕೂಡ ಭೇದಿಸಿದಂತೆ ಕುಳಿತು ಅಭ್ಯಾಸಿಸ ಬೇಕಾದ ಈ ಆಸನದಲ್ಲಿ ಒಂದು ಕಾಲನ್ನು ಮಂಡಿಯಲ್ಲಿ ಮಂಡಿಸಿ ಹಿಂಡಿಟ್ಟು,ಈ ಪಾದವನ್ನು ಟೋಂಕದ ಕೀಲಿಗೆ ಸರಿಯಾಗಿ ಒತ್ತಿಟ್ಟು ಮತ್ತೊಂದು ಕಾಲನ್ನು ನೇರವಾಗಿ ಮೇಲೆತ್ತಿ. ಅದರ ಪಾದವನ್ನು ಎರಡೂ ಕೈಗಳಲ್ಲಿ ಹಿಡಿದು,ಬಳಿಕ ಗದ್ದವನ್ನು ಎತ್ತಿದ ಕಾಲಮಂಡಿಯೆಡೆಯಲ್ಲಿ ಒತ್ತಿಡಬೇಕಾಗಿದೆ.ಎತ್ತಿದ ಕಾಲು ನೀಳವಾಗಿ ಕತ್ತನ್ನು ಮೇಲೆತ್ತಿದ್ದ ಕ್ರೌಂಚಪಕ್ಷಿಯನ್ನು ಹೋಲುತ್ತದೆ.ಅಲ್ಲದೆ ಪರ್ವತ ಶಿಖರದಂತೆಯೂ ಕಾಣ ಬರುತ್ತದಾದುರಿಂದ ಆಸನಕ್ಕೆ ಈ ಹೆಸರು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ನೆಲದಮೇಲೆ ಕುಳಿತು, ಮುಂಗಡೆಗೆ ಕಾಲುಗಳನ್ನು ನೀಳವಾಗಿ ಚಾಚಿಡಬೇಕು.

2. ಬಳಿಕ ಬಲಗಾಲನ್ನು ಮಂಡಿಯಲ್ಲಿ ಬಗ್ಗಿಸಿ, ಬಲಪಾದವನ್ನು ಹಿಂದಕ್ಕೆ ಸರಿಸಿ,ಬಲಟೊಂಕದ ಪಕ್ಕಕ್ಕೆ ಅಂಟುವಂತೆ ಅದನ್ನು ಹಿಟ್ಟು ಕಾಲ್ಬೆರಳುಗಳನ್ನು ಹಿಂಬಾಗಕ್ಕೆ ತುದಿಗೊಳಿಸಿ ಅವೆಲ್ಲವನ್ನೂ ನೆಲದ ಮೇಲೆ ಉರಿಡಬೇಕು. ಆಗ ಬಲಗಾಲ ಮೀನ ಖಂಡದ ಒಳಬದಿಯು ಬಲತೊಡೆಯ ಹೊರಬದಿಯನ್ನು ಮುಟ್ಟಿರುತ್ತದೆ ಆಮೇಲೆ ಮಂಡಿಗಳೆರಡನ್ನು  ಜೊತೆಗೂಡಿಸಬೇಕು.

3. ಅನಂತರ ಉಸಿರನ್ನು ಹೊರ ಹೋಗಿಸಿ ಎಡ ಮಂಡಿಯನ್ನು ಸ್ವಲ್ಪ ಮಂಡಿಸಿ, ಎಡದಂಗಾಲನ್ನು ಎರಡು ಕೈಗಳಿಂದ ಹಿಡಿದು, ಆ ಕಾಲನ್ನು ನೇರವಾಗಿ ಮೇಲೆತ್ತಬೇಕು.

4. ಇದಾದ ಬಳಿಕ ಎಡಗಲನ್ನು ನೀಳಲವಾಗಿ ಹಿಗ್ಗಿಸಿ.ಬೆನ್ನನ್ನು ನೆಟ್ಟಗೆ ನಿಲ್ಲಿಸಿಟ್ಟು ಭಂಗಿಯ ಸ್ಥಿತಿಯಲ್ಲಿ ಕೆಲವು ಸಲ ಉಸಿರಾಟ ನಡೆಸಿ, ಬಳಿಕ ಉಸಿರನ್ನು ಹೊರದೂಡಿ ತಲೆ ಮತ್ತು ಮುಂಡವನ್ನು ಮುಂಭಾಗಿಸುವಂತೆಯೇ ಎತ್ತಿದ ಕಾಲನ್ನು ಹತ್ತಿರ ಹತ್ತಿರ ಸರಿಸುತ್ತ ಗದ್ದವನ್ನು ಮೊಣಕಾಲ ಬಳಿ ಒತ್ತಿಡಬೇಕು.

5. ಈ ಭಂಗಿಯಲ್ಲಿ ಆಳವಾಗಿ ಉಸಿರಾಟ ನಡೆಸುತ್ತ 23-30 ಸೆಕೆಂಡುಗಳಕಾಲ ನೆಲೆಸಬೇಕು. ಗದ್ದವು ಎತ್ತಿದ ಕಾಲಿನ ಮಂಡಿಯನ್ನು ಮುಂಟಿಸುತ್ತಿರುವಾಗ,ಬಗ್ಗಿದ ಮಂಡಿಯನ್ನು ಎಂದಿಗೂ ನೆಲದಿಂದ ಮೇಲೆತ್ತಬಾರದು.

6. ಈಗ ಉಸಿರನ್ನು ಒಳಕ್ಕೆಳೆದು ತಲೆ ಮುಂಡವನ್ನು ಹಿಂಗಡೆಗೆ ಸರಿಸಿ ಎಡಗಾಲನ್ನು ಕೆಳಕ್ಕಿಳಿಸಿ, ಕೈಗಳ ಬಿಗತವನ್ನು ಸಡಲಿಸಿ,ಬಲಗಾಲನ್ನು ನೇರ ಮಾಡಿ ಒಂದನೇ ಸ್ಥಿತಿಗೆ ಮತ್ತೆ ಬರಬೇಕು.

7. ಈ ಭಂಗಿಯನ್ನು ಮೇಲೆ ವಿವರಿಸಿದ ಕ್ರಮದಲ್ಲಿ ಇನ್ನೊಂದು ಕಡೆಯೂ ಅಭ್ಯಸಿಸಬೇಕು. ಇಲ್ಲಿ ಎಡಗಾಲ ಮಂಡಿಯನ್ನು ಹಿಂದಕ್ಕೆ ಮಂಡಿಸಿ,ಆ ಪಾದವನ್ನು ಎಡಟೊಂಕದ ಕೀಲಿನೆಡೆಗೆ ಒತ್ತಿಟ್ಟು ಬಳಿಕ ಬಲಗಾಲನ್ನೆತ್ತಿ  ಭಂಗಿಯಲ್ಲಿಯೂ ಅಷ್ಟೇಕಾಲ ನೆಲೆಸಿರಬೇಕು.

ಪರಿಣಾಮಗಳು  

 ಈ ಆಸನದ ಭಂಗಿಯನ್ನು ‘ತ್ರ್ಯಂಗ ಮುಖೈಪಾದಪಶ್ಚಿಮೋತ್ತಾ ನಾಸನ’ವನ್ನು ಮುಂದುವರಿಸಿ ಅಭ್ಯಸಿಸಬಹುದು.ಈ ಆಸನವು “ಪಶ್ಚಿಮೋತ್ತಾನಾಸನ’ಕ್ಕಿಂತಲೂ ಕ್ಲಿಷ್ಟ ವಾದುದರಿಂದ ಇದರ ಪರಿಣಾಮಗಳು ಅದಕ್ಕಿಂತಲೂ ಹೆಚ್ಚು ಇದು ಕಾಲುಗಳನ್ನು ಸಂಪೂರ್ಣವಾಗಿ ಹಿಗ್ಗಿಸುವುದಲ್ಲದೆ,ಕಾಲಿನ ಮಾಂಸ ಖಂಡಗಳಿಗೆ ಒಳ್ಳೆಯ ವ್ಯಾಯಾಮ