ಮನೆ ಕಾನೂನು ಬೆಂಗಳೂರು: ಜಾಮೀನಿಗಾಗಿ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ: ಆರೋಪಿಗಳ ವಿರುದ್ಧ ಎಫ್​ಐಆರ್​

ಬೆಂಗಳೂರು: ಜಾಮೀನಿಗಾಗಿ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ: ಆರೋಪಿಗಳ ವಿರುದ್ಧ ಎಫ್​ಐಆರ್​

0

ಬೆಂಗಳೂರು: ಜಾಮೀನು ಪಡೆಯುವ ವೇಳೆ ನಕಲಿ ಶ್ಯೂರಿಟಿ ಸಲ್ಲಿಸಿ ನ್ಯಾಯಾಲಯಕ್ಕೆ ಮೋಸ ಮಾಡಿರುವುದು ದಾಖಲೆ ಪರಿಶೀಲನೆ ವೇಳೆ ತಿಳಿದ್ದಿದ್ದು, ಆರೋಪಿಗಳ ವಿರುದ್ಧ ಸಿಸಿಬಿಯಲ್ಲಿ ಎಫ್​ಐಆರ್​ ದಾಖಲಾಗಿದೆ.

Join Our Whatsapp Group

2021ರಲ್ಲಿ ಕಾಡುಗೋಡಿ ಪೊಲೀಸರು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ ಆದಿತ್ಯಮ್ ಎಂಬುವುನನ್ನು ಬಂಧಿಸಿದ್ದರು. ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಆರೋಪಿ ಆದಿತ್ಯಮ್​ ಕಡೆಯವರು ಜಾಮೀನಿಗಾಗಿ ನ್ಯಾಯಾಲಯಕ್ಕೆ ನಕಲಿ ಶ್ಯೂರಿಟಿ ಸಲ್ಲಿಸಿದ್ದರು.

ಚಿಕ್ಕಬಳ್ಳಾಪುರ ಮೂಲದ ಓರ್ವ ರೈತರ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ಜಮೀನು ದಾಖಲೆಗಳನ್ನು ಸೃಷ್ಟಿಸಿದ್ದರು. ನಕಲಿ ದಾಖಲೆಗಳಲ್ಲದೆ ಈತನೇ ಜಮೀನು ಮಾಲಿಕ ಅಂತ ನಕಲಿ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವಿಚಾರ ತಿಳಿದ ಚಿಕ್ಕಬಳ್ಳಾಪುರ‌ ಮೂಲದ ರೈತ ಸಿಸಿಬಿಗೆ ದೂರು ನೀಡಿದ್ದರು. ಪೊಲೀಸರ ತಪಾಸಣೆ ವೇಳೆ ದಾಖಲೆ ಪತ್ರಗಳು ನಕಲಿ ಎಂದು ತಿಳಿದು ಬಂತು. ಸದ್ಯ ಸಿಸಿಬಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದೇ ರೀತಿ ನಿವೃತ ಎಎಸ್​ಐ ಅಧಿಕಾರಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಶ್ಯೂರಿಟಿ ಸಲ್ಲಿಸಲಾಗಿತ್ತು. ಸಿದ್ದಾಪುರ ಪೊಲೀಸರು ಫೋಕ್ಸೋ ಪ್ರಕರಣದಲ್ಲಿ ನವೀದ್ ಪಾಷ ಎಂಬಾತನನ್ನು ಬಂಧಿಸಿದ್ದರು. ಆರೋಪಿ ಕಡೆಯವರು ಜಾಮೀನು ವೇಳೆ ನಕಲಿ ಶ್ಯೂರಿಟಿ ಸಲ್ಲಿಸಿದ್ದರು. ನಿವೃತ್ತ ಎಎಸ್​ಐ ಅಧಿಕಾರಿ ಹೆಸರಿನ ನಕಲಿ ಆಧಾರ್ ಕಾರ್ಡ್, ಜಮೀನು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಶ್ಯೂರಿಟಿ ಸಲ್ಲಿಸಿದ್ದರು. ಪೊಲೀಸ ತಪಾಸಣೆ ನಡೆಸಿದಾಗ ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ಬಯಲಾಗಿದೆ.