ಮನೆ ಅಪರಾಧ ಪಡೆದುಕೊಂಡಿದ್ದ ಹಣವನ್ನು ದರ್ಶನ್​ಗೆ  ವಾಪಸ್ ಕೊಟ್ಟಿದ್ದೆ: ಬಿಬಿಎಂಪಿ ಮಾಜಿ ಉಪಮೇಯರ್ ಮೋಹನ್ ರಾಜ್

ಪಡೆದುಕೊಂಡಿದ್ದ ಹಣವನ್ನು ದರ್ಶನ್​ಗೆ  ವಾಪಸ್ ಕೊಟ್ಟಿದ್ದೆ: ಬಿಬಿಎಂಪಿ ಮಾಜಿ ಉಪಮೇಯರ್ ಮೋಹನ್ ರಾಜ್

0

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಬಿಎಂಪಿ ಮಾಜಿ ಉಪಮೇಯರ್ ಮೋಹನ್ ರಾಜ್ ತಿಳಿಸಿದ್ದಾರೆ.

Join Our Whatsapp Group

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟ ದರ್ಶನ್ ಅವರಿಗೆ 40 ಲಕ್ಷ ರೂ ಹಣ ನೀಡಿದ್ದ ಆರೋಪದಡಿ ಶುಕ್ರವಾರ ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ಮೋಹನ್ ರಾಜ್ ಮಾತನಾಡಿದರು.

ಶುಕ್ರವಾರದಂದು ಬಸವೇಶ್ವರ ನಗರ ಠಾಣೆಗೆ ಆಗಮಿಸಿದ್ದ ಮೋಹನ್ ರಾಜ್, ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್‌ ನೇತೃತ್ವದಲ್ಲಿ ವಿಚಾರಣೆ ಎದುರಿಸಿದರು.

ಸುಮಾರು 4 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿ ಹೊರಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಸಿದ ಅವರು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ನಟ ದರ್ಶನ್ ಅವರು ನನಗೆ ಪರಿಚಿತರು. ಅವರಿಂದ ಪಡೆದುಕೊಂಡಿದ್ದ ಹಣವನ್ನು ವಾಪಸ್ ಕೊಟ್ಟಿದ್ದೆ. 12 ಗಂಟೆಗೆ (ಶುಕ್ರವಾರ) ನೋಟಿಸ್ ನೀಡಿದ್ದ ಪೊಲೀಸರು, ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ವಿಚಾರಣೆಗೆ ಬಂದಿದ್ದೆ. ಎಸಿಪಿ ಸೇರಿದಂತೆ ನಾಲ್ವರು ಅಧಿಕಾರಿಗಳು ವಿಚಾರಣೆ ನಡೆಸಿ ಒಂದಷ್ಟು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದೇನೆ. ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಹೆಚ್ಚೇನು ಹೇಳುವುದಿಲ್ಲ ಎಂದು ತಿಳಿಸಿದರು.

ಹತ್ಯೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ 40 ಲಕ್ಷ ರೂ. ನೀಡಿದ್ದ ಹಿನ್ನೆಲೆ ಮೋಹನ್ ರಾಜ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಮೊದಲ ಬಾರಿ ನೀಡಿದ್ದ ನೋಟಿಸ್​​​ಗೆ ಗೈರಾಗಿದ್ದ ಮೋಹನ್ ರಾಜ್ ಅವರಿಗೆ ಮತ್ತೊಮ್ಮೆ ನೋಟಿಸ್‌ ನೀಡಲಾಗಿತ್ತು. ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.