★ ಪ್ಯಾನ್ ಕ್ರಿಯಾಸ್, ಇನ್ಸುಲಿನ್ ನ್ನು ಸಾಕಷ್ಟು ಉತ್ಪತ್ತಿ ಮಾಡಲಾಗದೆ ಹೋಗುವುದು. ಇಲ್ಲವೇ ಉತ್ಪತ್ತಿಯಾದ ಇನ್ಸುಲಿನ್ ಶರೀರ ಕೋಶಗಳಿಂದ ಸರಿಯಾಗಿ ಉಪಯೋಗಿಸಲ್ಪಡದೆ ಹೋಗುವುದು. ಈ ಎರಡು ಕಾರಣಗಳಲ್ಲಿ ಯಾವುದೋ ಒಂದು ಕಾರಣದಿಂದ ಡಯಾಬಿಟಿಸ್ ಬರುತ್ತದೆ.
★ ಈ ಎರಡು ಕಾರಣಗಳಲ್ಲಿ ಯಾವುದರಿಂದ ಬಂದರೂ, ಡಯಾಬಿಟಿಸ್ ಕಾರಣದಿಂದ ನಾವು ತಿನ್ನುವ ಆಹಾರವನ್ನು ಶಕ್ತಿಯಾಗಿ (Energy)ಶರೀರ ಪರಿವರ್ತಿಸಲಾರದೆ ಹೋಗುತ್ತದೆ.
(a) ಇನ್ಸುಲಿನ್ ಸಾಲದೇ ಹೋಗುವುದು.
(b)ಇನ್ಸುಲಿನ್ ಸಕ್ರಮವಾಗಿ ಉಪಯೋಗಿಸಲ್ಪಡದೆ ಹೋಗುವುದು. ಡಯಾಬಿಟಿಸ್‌ನ ಈ ಎರಡು ಪರಿಸ್ಥಿತಿಗಳಲ್ಲೂ ಶರೀರದ ಮೇಲೆ ಎರಡು ರೀತಿಯಲ್ಲಿ ಪ್ರಭಾವತೋರಿಸುತ್ತವೆ.
ಈ ಎರಡು ಕಾರಣಗಳನ್ನು ಆಧಾರವಾಗಿಟ್ಟುಕೊಂಡು ಡಯಾಬಿಟಿಸ್ ನ್ನು ಎರಡು ಬಗೆಯಾಗಿ ವಿಭಜಿಸಿದ್ದಾರೆ.
1. ಟೈಪ್ -1 ಡಯಾಬಿಟಿಸ್. ಇದನ್ನು ಇನ್ಸುಲಿನ್ ಅವಲಂಬಿತ ಡಯಾಬಿಟೀಸ್ (Insulin Dependent Diabetes Mellitus) ಎನ್ನುತ್ತಾರೆ ಬಾಲಿಶ (Juvenile) ಡಯಾಬಿಟಿಸ್ ಎಂದೂ ಕರೆಯುತ್ತಾರೆ.
2. ಟೈಪ್ -ಡಯಾಬಿಟಿಸ್.ಇದನ್ನು ಇನ್ಸುಲಿನ್ ಮೇಲೆ ಅವಲಂಬಿಸಿದ ಡಯಾಬಿಟಿಸ್ (Non Insulin Dependent Mellitus )ಎನ್ನುತ್ತಾರೆ ಮೆಚ್ಚುರಿಟಿ ಅನ್ ಸೆಟ್ ಡಯಾಬಿಟೀಸ್ ಅಂಡ್ ಫುಡ್ ಡಯಾಬಿಟೀಸ್ (Maturity onset Mellitus ) ಅಡಲ್ಟ್ ಹುಡ್ ಡಯಾಬಿಟಿಸ್(Adulihood Diabetes- ವಯಸ್ಕ ಡಯಾಬಿಟಸ್ )ಎಂದು ಕೂಡಾ ಕರೆಯುತ್ತಾರೆ.
ಡಯಾಬಿಟಿಸ್ ಲಕ್ಷಣಗಳು
★ ಅತಿಯಾಗಿ ಮೂತ್ರ ವಿಸರ್ಜನೆ
★ ಅತಿಯಾದ ಬಾಯರಿಕೆ
★ಮಿತಿಮೀರಿದ ಹಸಿವು
★ತೂಕ ಕಡಿಮೆಯಾಗುವಿಕೆ
★ದೃಷ್ಟಿ ಮಂದಾಗುವುದು
★ಬೇಗನೆ ಆಯಾಸಗೊಳ್ಳುವುದು
★ಸಿಡಿಮಿಡಿ ಗೊಳ್ಳುವಿಕೆ
★ಹುಣ್ಣುಗಳು ಗಾಯಗಳು ಬೇಗ ವಾಸಿಯಾಗದಿರುವುದು
★ಕಾಲುಗಳು, ಕೈಗಳುಜೋಮು ಹಿಡಿಯುವುದು
★ನಿರುತ್ಸಾಹ ನಿಶ್ಯಕ್ತಿ
★ನವೆಯಾಗುವುದು
★ಚರ್ಮರೋಗಗಳು
★ಮೂತ್ರ ವಿಸರ್ಜನೆ ಮಾಡುವಾಗ ಉರಿ
★ಸ್ತ್ರೀಯರಲ್ಲಿ ಮಿತಿಮೀರಿದ ಬಿಳಿ ಸೆರಗು
ರಕ್ತದಲ್ಲಿ ಷುಗರ್ ಎಷ್ಟಿರಬೇಕು
ಯಾವ ರೋಗವೂ ಇಲ್ಲದ ಸಾಧಾರಣ ವ್ಯಕ್ತಿಗಳಿಗೆ ಬೆಳಿಗ್ಗೆ ಏನೂ ತಿನ್ನದೇ, ಕುಡಿಯದೆ ಖಾಲಿಹೊಟ್ಟೆಯಲ್ಲಿರುವಾಗ ಬ್ಲಡ್ ಷುಗರ್( ಇದನ್ನು Fasting Blood sugar ಎನ್ನುತ್ತಾರೆ )80mg ಇಂದ 120 mgವರೆಗೆ ಇರಬಹುದು.
★ಊಟ ಮಾಡಿದ ಎರಡು ಗಂಟೆಗಳ ನಂತರ ( ಇದನ್ನುPost Paradial ಎನ್ನುತ್ತಾರೆ ) ರಕ್ತದ ಸಕ್ಕರೆಯ ಪ್ರಮಾಣ ಮೀರಬಾರದು.
★ಮೇಲೆ ಹೇಳಿದ ಉಳಿದ ಲಕ್ಷಣಗಳ ಜೊತೆಗೆ ರಕ್ತ ಪರೀಕ್ಷೆಯಲ್ಲಿ ರಕ್ತದ ಸಕ್ಕರೆಯ ಮಟ್ಟ ಮೀರಿದರೆ ಆ ವ್ಯಕ್ತಿಗೆ ಡಯಾಬಿಟಿಸ್ ಇದೆಯೆಂದರ್ಥ.
★ ರಕ್ತದಲ್ಲಿ ಸಕ್ಕರೆ ಇರಬೇಕಾದ ಪ್ರಮಾಣಕ್ಕಿಂತ ಹೆಚ್ಚಾದಾಗ ಅದು ಮೂತ್ರದ ಮೂಲಕ ಹೊರಗೆ ಬರಲು ಪ್ರಾರಂಭಿಸುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.