ಮನೆ ಯೋಗಾಸನ ಮರೀಚ್ಯಾಸನ

ಮರೀಚ್ಯಾಸನ

0

ಅಭ್ಯಾಸ ಕ್ರಮ

Join Our Whatsapp Group

  1. ಮೊದಲು ನೆಲದಮೇಲೆ ಕುಳಿತು ಕಾಲುಗಳನ್ನು ಮುಂಚಾಚಿಬೇಕು.
  2. ಬಳಿಕ ಎಡಗಾಲನ್ನು ಮಂಡಿಯಲ್ಲಿ ಮಂಡಿಸಿ, ಎಡಪಾದವನ್ನು ಬಲತೊಡೆಯ ಮೂಲಕ್ಕೆ ಸೇರಿಸಬೇಕು ಅಲ್ಲದೇ ಹಿಮ್ಮಡಿಯು ನಾಭಿ ಪ್ರದೇಶವನ್ನು ಒತ್ತುವಂತೆ, ಕಾಲ್ವೆರಡುಗಳನ್ನು ಹಿಗ್ಗಿಸಿ ತುದಿಗಾಣಿಸಬೇಕು.ಈಗ ಎಡಗಾಲು ‘ಅರ್ಧ ಪದ್ಮಾಸನ’ದಲ್ಲಿರುತ್ತದೆ.
  3. ಆಮೇಲೆ ಬರಗಾಲನ್ನು ಮಂಡಿಯಲ್ಲಿ ಬಗ್ಗಿಸಿ, ಬಲಪಾದದ ಅಂಗಾಲು ಹಿಮ್ಮಡಿಗಳನ್ನು ನೆಲದ ಮೇಲೆ ಚಪ್ಪಟೆಗೆಯಾಗಿ ಉರಿಟ್ಟು ಬಲಕಣಗಳನ್ನು ನೆಲಕ್ಕೆ ಲಂಬವಾಗಿ ನಿಲ್ಲಿಸಿ, ಆ ಮೂಲಕ ಬಲತೊಡೆ ಬಲ ಮೀನಖಂಡಗಳು ಒಂದೊಂದು ಒತ್ತುವಂತೆಯೂ, ಬಲ ಹಿಮ್ಮಡಿಯು ಗುದಗುಹ್ಯಸ್ಥಾನಗಳ ನಡುವಣೆಯನ್ನು ಮುಟ್ಟುವಂತೆಯೂ ಅಳವಡಿಸಬೇಕು.
  4. ತರುವಾಯ ಸ್ವಲ್ಪ ಮುಂಬಾಗಿ, ಬಲಹೆಗಲನ್ನು ಮುಚಾಚಿ, ಬಲಕಂಕುಳನ್ನು ಲಂಬವಾಗಿರಿಸಿದ ಬಲಕಣಕಾಲಿಗೆ ಮುಟ್ಟುವಂತಿರಬೇಕು. ಆ ಬಳಿಕ ಉಸಿರನ್ನು ಹೊರ ಹೋಗಿಸುತ್ತ, ಬಲತೋಳನ್ನು ಬಲಕಣಗಳು ತೊಡೆಗಳಿಗೆ ಸುತ್ತುಸಿಟ್ಟು, ಬಲಮೊಣ ಕೈಯನ್ನು ಬಗ್ಗಿಸಿ,ಬಲ ಮುಧೋಳನ್ನು ಸೊಂಟದ ಮಟ್ಟಕ್ಕೆ ಬರುವಂತೆ ಬೆನ್ನ ಹಿಂದೆ ತಿರುಗಿಸಿಟ್ಟ ಮೇಲೆ,ಎಡಗೈಯನ್ನು ಬೆನ್ನ ಹಿಂದೆ ಸರಿಸುತ್ತ. ಬಲಗೈ ಮಣಿಕಟ್ಟನ್ನು ಬಿಗಿಗೊಳಿಸಿಡಬೇಕು.
  5. ಆನಂತರ ಬೆನ್ನನ್ನು ಮೇಲಕ್ಕೆ ಹಿಗ್ಗಿಸಿ,ಆಳವಾಗಿ ಉಸಿರಾಟ ನಡೆಸುತ್ತ. ಭಂಗಿಯಲ್ಲಿ ಕೆಲವು ಸೆಕೆಂಡುಗಳಕಾಲ ನೆಲೆಸಬೇಕು.
  6. ಇದಾದಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ತಲೆ ಮುಂಡವನ್ನು ಮುಂದಕ್ಕೆ ಸರಿಸಿ, ತಲೆಯನ್ನು ಬಾಗಿಸಿದ ಎಡಮುಂಡಿಯ ಮೇಲಿರಬೇಕು. ಆ ಬಳಿಕ ಕತ್ತನ್ನು ಹಿಗ್ಗಿಸಿ ನೀಳಮಾಡಿ, ಗದ್ದವನ್ನು ಎಡಮಂಡಿಯ ಮೇಲೆರಿಸಬೇಕು.ಈ ಭಂಗಿಯ ಚಲನವಲನಗಳನ್ನು ಮೂರು ನಾಲ್ಕು ಸಲ ಮತ್ತೆ ಮತ್ತೆ ಅಭ್ಯಸಿಸುವಸಮಯದಲ್ಲಿ ತಲೆ ಮುಂಡಗಳನ್ನು ಮೇಲೆತ್ತುವಾಗ ಉಸಿರನ್ನು ಒಳೆಕ್ಕೆಳೆಯುತ್ತ, ಕೆಳತಗ್ಗಿಸುವಾಗ ಉಸಿರನ್ನು ಹೊರಕ್ಕೆ ಬಿಡುತ್ತ ಇರಬೇಕು.
  7. ಕೊನೆಯಲ್ಲಿ ಉಸಿರನ್ನು ಒಳಕ್ಕೆಳೆದು, ತಲೆ ಮುಂಗಾಲುಗಳನ್ನು ಮೇಲೆತ್ತಿ ಕೈಗಳನ್ನು ಸಡಿಲಿಸಿ, ಕಾಲುಗಳನ್ನು ನೀಳ ಮಾಡಬೇಕು.ಈ ಭಂಗಿಯನ್ನು ಇದೇ ಕ್ರಮದಲ್ಲಿ ಇನ್ನೊಂದು ಕಡೆಯೂ ಅಭ್ಯಸಿಸಬೇಕು.