ಮನೆ ದೇವರ ನಾಮ ಯಡೆಯೂರ ಯತಿವರ

ಯಡೆಯೂರ ಯತಿವರ

0

ಎಡೆಯೂರು ಯತಿವರ ಇವನೆ ಸಿದ್ಧಲಿಂಗೇಶ್ವರ ಇವನೇ |
ತುಂಗ ಮಹಿಮ ಯೋಗಿ ಶಿವನ ದೂತನಾಗಿ ಭಕ್ತರಡೆಗೆ ಸಾಗಿ |
ದೂರಿತವ ನೀಗಿಸಲು ಬಂದಾ ಬಂದ |
ತನ್ನ ಜ್ಞಾನ ಮುನಿವರ ಇವನೆ ದೋಂಟದ ಸದ್ಗುರು ಇವನೇ |
ಸಿದ್ದಿಪುರುಷನಾಗಿ ಹರುಷದಿಂದ ಸಾಗಿ ಚಿಂತನೆಗಳು ನೀಗಿ |
ಶರಣರ ಸಲಹುತ ನಿಂದಾ ನಿಂದ,||ಯಡೆಯೂರ ||

ತ್ಯೆಜಿಸಲೆಂದು ಸುಖದ ರಾಗತ್ಯೆಜಿಸಿ ನಿಂದು ಸಕಲ ಭೋಗ ||
ಘೋರ ತಪವ ಮಾಡಿದ ಸಾಧುಸುತ ನಿಯೋಗವ
ಪ್ರಾಣದಾನ ಮಾಡಿದ ಯಡೆಯೂರ್ ಒಡೆಯ ||ಯಡೆಯೂರು ||

ಮಾನ ಜ್ಞಾನವನ್ನು ಧನವನು ಸುರಿಸಿ ಬೇಡಿ ಬಂದ ಜನರು ಹರಸಿ ||
ಮರೆತುಹೋದ ಮಳೆಯ ಕರೆಸಿ ಭೋರ್ಗಗರೆಸಿದ
ಹೊಟ್ಟೆ ತುಂಬಾ ಅನ್ನಯಿಟ್ಟು ಯಡೆಯೂರ್ ಒಡೆಯ| ||ಯಡೆಯೂರ ||

ಬೀತಿ ಭ್ರಾಂತಿಯ ಬಿಡಿಸುವಂತ ರೀತಿ ನೀತಿಯ ಬಿಡಿಸುವಂಥ ||
ಕಾಮ ಕ್ರೋದ ಸುಡಿಸಿದ ನಿರ್ವಿಕಲ್ಪ ಶರಣರ
ಸತ್ಯರೂಪನಾಗಿ ನಿಂತ ಯಡಿಯೂರ್ ಒಡೆಯ ||ಯಡೆಯೂರ ||