ಮನೆ ಪೌರಾಣಿಕ ದಕ್ಷನ ವಂಶಾಭಿವೃದ್ಧಿ : ಭಾಗ ಮೂರು

ದಕ್ಷನ ವಂಶಾಭಿವೃದ್ಧಿ : ಭಾಗ ಮೂರು

0

 ಅಷ್ಟವಸುವರಲ್ಲಿ  ಕೊನೆಯವನಾದ ಪ್ರಭಾಸನ್ನು ಬೃಹಸ್ಪತಿ ತಂಗಿಯಾದ ಯೋಗ ಸಿದ್ದಳನ್ನು ವಿವಾಹವಾದನು. ಅವರಿಬ್ಬರಿಗೂ ಶಿಲ್ಪವಿದ್ಯಾಧಿ ದೇವನಾದ ವಿಶ್ವಕರ್ಮನು ಜನಿಸಿದನು.ವಿಶ್ವಕರ್ಮ ಸಂತಾನದಲ್ಲಿನ ಸಂಜ್ಞ, ಚಿತ್ರಾಂಗದ, ಸುರೂಪ, ಬಹಿಷ್ಮತಿಯರು  ಪ್ರಮುಖರಾದವರು.ವಿಶ್ವಕರ್ಮನ ಮಗಳಾದ ಸಂಜ್ಞಳನ್ನು ಸೂರ್ಯನನ್ನು ವಿವಾಹವಾಗಿ ಮನವು,ಯಮನು,ಯಾಮಿನಿ ಯರನ್ನು ಹೆತ್ತನು. ಚಾಕ್ಷುಷ ಮನುವಿನ ವಂಶದಲ್ಲಿ ಉತ್ಥಾನಪಾದ ಮಹಾರಾಜನ ತಮ್ಮನಾದ ಪ್ರಿಯವ್ರತನು ಸರೂಪ ಮತ್ತು  ಬಹಿಷ್ಮತಿಯನ್ನು ವಿವಾಹವಾದನು. ಸುರೂಪಳಿಗೆ ಅಗ್ನೀದ್ರನು, ಇದ್ಮಜಿಹ್ವ, ಯಜ್ಞಬಾಹು, ಮಹಾವೀರ, ರುಕ್ಮ ಶುಕ್ರ, ಘೃತ ಪೃಷ್ಠ  ಸವನ, ಮೇಧಾತಿಧಿ, ವೀತಿಹೋತ್ರ, ಕವಿ ಎಂಬ ಹತ್ತು ಜನ ಗಂಡುಮಕ್ಕಳು ಹಾಗೂ ಊರ್ವಸ್ವತೀ ಎಂಬ ಮಗಳು ಜನಿಸಿದಳು. ಬಹಿಸ್ಮತಿಗೆ ಉತ್ತಮನು, ತಾಪಾಸನು ಹಾಗೂ ರೈವತನು ಎಂಬುವವರು  ಜನಿಸಿದರು . ಪ್ರಿಯವ್ರತನ ಸಂತಾನವೂ ಸಹ ಯುಕ್ತ ವಯಸ್ಸಿಗೆ ಬರುತ್ತಲೇ ವಿವಾಹ ಮಾಡಿಕೊಂಡು ವಂಶಾಭಿವೃದ್ದಿಯನ್ನು ಮಾಡಿದರು. ಅಗ್ನಿದ್ರನ್ನು ಪೂರ್ವಚಿತ್ತಿ ಎಂಬ ಅಪ್ಸರೆಯನ್ನು ವಿವಾಹವಾದನು.ಅವರಿಗೆ ಒಂಬತ್ತು ಜನ ಗಂಡುಮಕ್ಕಳು,ನಾಭೀ ಕಿಂ ಪುರುಷ, ಹರಿ, ಇಳಾವರ್ತೆ, ರಮ್ಯಕ, ಹಿರಂಚಯ, ಕುರು, ಭದ್ರಾಶ್ವ, ಕೇತು ಮಾಲ ಅವರಲ್ಲಿ ಕುರು ಎಂಬುವನಿಂದಲೇ ಕುರು ವಂಶಾಭಿವೃದ್ಧಿಯಾಯಿತು. ಅಗ್ನೀದ್ರ ನ ತಮ್ಮಂದಿರಲ್ಲಿ ಸವನನು ಸುನಾಭನ ಮಗಳಾದ ಸುಮೇದಳನ್ನು ವಿವಾಹವಾದನು.ಅವನು ತನ್ನ ಹೆಂಡತಿ ಗರ್ಭಿಣಿಯಾಗಿದ್ದಾಗ ಸಾವನಪ್ಪಿದನು.

Join Our Whatsapp Group

    ಪ್ರಿಯವ್ರನ ಮಹಾರಾಜನು ಮರಣ ಹೊಂದಿದ ಮೇಲೆ ಫ್ಲಕ್ಷದ್ವಿಪಕ್ಕೆ ಮೇಧಾತಿಧಿ ಮಹಾರಾಜನಾದನು.ಅವನ ಮಕ್ಕಳಲ್ಲಿ ಶಾಂತಹಯನು ಶಾಂತಾಹಯ ವರ್ಷಕ್ಕೂ, ಶಿಶಿರನು ಶಿಶಿರ ವರ್ಷಕ್ಕೂ, ಸುಖೋದಯನು  ಸುಖೋದಯ ಖಂಡಕ್ಕೂ, ಆನಂದನು ಆನಂದಖಂಡಕ್ಕೂ, ಶಿವನು ಶಿವನಖಂಡಕ್ಕೂ,ಕ್ಷೇಮಕನು ಕ್ಷೇಮಕ ಖಂಡಕ್ಕೂ ಧ್ರುವನನ್ನು ದ್ರುವ ಖಂಡಕ್ಕೂ ಚಕ್ರವರ್ತಿಗಳಾದರು  .

      ವಿಶ್ವಕರ್ಮ ಪ್ರಜಾಪತಿಯ ಮೂರನೇ ಮಾಗಳಾದ ಚಿತ್ರಾಂಗದಳು, ಸುದೇವ ಮಹಾರಾಜನ ಜೇಷ್ಠ ಪುತ್ರನಾದ ಸುರಥನು ನೈಮಿಷಾರಣ್ಯ  ಪರಿಸರಗಳಲ್ಲಿ ಮೃಗಾಯಾ  ವಿನೋದಕ್ಕೆಂದು  ಸಂಚರಿಸುತ್ತಿರಲು ಅವನ್ನನ್ನು ನೋಡಿದಳು. ಅವರಿಬ್ಬರ ಭೇಟಿಯು ಪ್ರೀತಿಯಾಗಿ ಪರಿಣಮಿಸಿತು. ಅವರಿಬ್ಬರೂ ಇಷ್ಟಪಟ್ಟು ಪ್ರೇಮಿಗಳಾದರು.ಈ ವಿಷಯ ವಿಶ್ವಕರ್ಮನಿಗೆ ತಿಳಿಯಿತು. ತನ್ನ ಮಗನ ಪ್ರಣಯವಾರ್ತೆಯು ರುಚಿಸದೇ ಅವನು ಆಕೆಯ ತನ್ನ ರಾಜ್ಯದಿಂದ ಬಹಿಷ್ಕರಿಸಿದನು. ವಿಶ್ವಕರ್ಮನಿಗೆ ಸುರಭಿ ಗರ್ಭದಲ್ಲಿ ನಾಲ್ವರು ಗಂಡು  ಮಕ್ಕಳಾದರು. ಅವರು ಅಜೈಕಪಾದ, ಅಹಿರ್ಬುದ್ಯ,ತ್ವಷ್ಟ ಹಾಗೂ ರುದ್ರ. ತ್ವಷ್ಟನಿಗೆ ತಪೋಧನವಾದ ವಿಶ್ವರೂಪನು ಜನಿಸಿದನು. ಈತನನ್ನೇ ತ್ರಿಶಿರಸ್ಸನೆಂದೂ  ಸಹ ಕರೆಯುತ್ತಾರೆ. ಅವನಿಗೆ ಏಕಾದಶರುದ್ರರಾದ ಹರನು, ಬಹುರೂಪಿ, ತ್ರ್ಯಂ,ಬಕ ಅಪರಾಜಿತ,ವೃಷಾಕಪಿ, ಶುಭ,ಕಪರ್ಥೀ, ರೇವತ,ಮೃಗ ವ್ಯಾಧ,ಶರ್ವ ಮತ್ತು ಕಪಾಲಿ ಎಂಬುವವರು ಜನಿಸಿದರು .