ಮನೆ ಮನೆ ಮದ್ದು ಚೆನ್ನಾಗಿ ನಿದ್ದೆ ಬರಲು

ಚೆನ್ನಾಗಿ ನಿದ್ದೆ ಬರಲು

0

 ಇದೊಂದು ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ದಿನ ಅನುಭವಿಸಿರುವ ತೊಂದರೆ. ಆದರೆ ಮೆದುಳಿನಲ್ಲಿರುವ ನಿದ್ರಾ ಕೇಂದ್ರ ಚೇತನಗೊಂಡಾಗ ನಿದ್ದೆ ಬರುವುದಿಲ್ಲ ಚಿಂತೆ ದುಗುಡ ಆತಂಕ ಆ ವೇಗ ಉದ್ವೇಗಗಳಿಂದ ನಿದ್ದೆ ಬರುವುದಿಲ್ಲ.ಈ ಕಾರಣದಿಂದ ಎಲ್ಲರೂ ಚಿಂತೆ ಬಿಟ್ಟು ಶಾಂತಚಿತ್ತರಾಗಬೇಕು.

Join Our Whatsapp Group

1. ಪ್ರತಿದಿನವೂ ದಿನಕ್ಕೆ ಎರಡು ಸಲ ಭಾವಾತ್ತಿತಜಿ ಧಾನ್ಯವನ್ನು ಕೇವಲ 20 ನಿಮಿಷಗಳ ಕಾಲ ಆಚರಿಸಬೇಕು ಆಗ ನಿದ್ದೆ ತನ್ನಷ್ಟಕ್ಕೆ ತಾನೇ ಬರುತ್ತದೆ

2. ಸಮ್ಮೋಹನ ಚಿಕಿತ್ಸೆಗೆ ತನ್ನನ್ನು ತಾನೇ ಒಳಪಡಿಸಿಕೊಂಡು ನಾಟಕ ಮಾಡುವುದರಿಂದ ನಿದ್ದೆ ಖಂಡಿತ ಬಿರುವುದು.

3. ಹೆಸರು ಕಾಳನ್ನು ಮೊಳಕೆ ಬರಸಿ, ಕೋಸಂಬರಿ ಮಾಡಿ,ಕರಿಬೇವು, ಕೊತ್ತಂಬರಿ,  ಇಂಗು,ನಿಂಬೇ ರಸ ಕಾಲು ಮೆಣಸಿನ ಪುಡಿ,ಸೌತೆಕಾಯಿ ಚೂರು ಹಾಕಿ ಸೇವಿಸಿದರೆ ನಿದ್ದೆ ಬರುತ್ತದೆ..

4. ಹುರುಳಿ ಕಾಳು ಮೊಳಕೆ ಸಾರನ್ನು ಸೇವಿಸುವುದರಿಂದ ನಿದ್ದೆ ಚೆನ್ನಾಗಿ ಬರುವುದು.

5. ಅಭ್ಯಂಜನ ಸ್ಥಾನ ಈಗ ಜನಗಳಿಗೆ ಗೊತ್ತಿಲ್ಲ ವಾರಕ್ಕೆ ಒಂದ ಸಾರಿ ಅಭ್ಯಂಝನ  ಸ್ನಾನ ಮಾಡುವುದರಿಂದ ನಿದ್ದೆ ಚೆನ್ನಾಗಿ ಬರುವುದು..

6. ಗಸಗಸೆ ಪಾಯಸ ಮಾಡಿ ಸೇವಿಸಿದರೆ ಚೆನ್ನಾಗಿ ನಿದ್ದೆ ಬರುವುದು..

7. ಹೆಸಿರು ಬೇಳೆ ಪಾಯಸ ಮಾಡಿ ಸೇವಿಸಿದರೂ ನಿದ್ದೆ ಬರುತ್ತದೆ.

8. ಸಬ್ಬಸಿಗೆ ಸೊಪ್ಪಿನ ಸಾರು, ಹುಳಿ,ಪಲ್ಯ,ತುಂಬುಳಿ ಸೇವಿಸಿದರೆ ನಿದ್ದೆ ಹತ್ತುವುದು

9. ಸೌತೆಕಾಯಿ ತಿರುಳನ್ನು ಅಂಗಾಲಿಗೆ ಹಚ್ಚಿ ಉಜ್ಜಿಕೊಂಡರೆ ನಿದ್ದೆ ಬರುವುದು.

10. ಹಸಿ ಅಲಸಂದಿ ಕಾಳನ್ನು ಬೆಲ್ಲದ ಜೊತೆಯಲ್ಲಿ ಚೆನ್ನಾಗಿ ಅಗಿದುಸೇವಿಸಿದರೆ ನಿದ್ರೆ ಬರುವುದು

11. ಐದು ಗ್ರಾಂ ಅಶ್ವಗಂಧಿ ಚೂರ್ಣಕ್ಕೆ ಸಕ್ಕರೆ, ತುಪ್ಪ ಬೆರಸಿ, ಬಿಸಿ ಹಾಲಿನಲ್ಲಿ ಸೇವಿಸಿ ಮಲಗಿದರೆ ಚೆನ್ನಾಗಿ ನಿದ್ದೆ ಬರುವುದು.