ಮನೆ ಯೋಗಾಸನ ಉಪವಿಷ್ಠಕೋನಾಸನ

ಉಪವಿಷ್ಠಕೋನಾಸನ

0

 ‘ಉಪವಿಷ್ಟ’ವೆಂದರೆ ಕುಳಿತುಕೊಳ್ಳುವುದು ; ‘ಕೋನ’ವೆಂದರೆ ಮೂಲೆ.

Join Our Whatsapp Group

 ಅಭ್ಯಾಸ ಕ್ರಮ:-

1. ಮೊದಲು ನೆಲದಮೇಲೆ ಕುಳಿತು, ಕಾಲುಗಳನ್ನು ನೀಳವಾಗಿ ಮುಂಚಾಚಿಡಬೇಕು.

2. ಬಳಿಕ ಕಾಲುಗಳನ್ನು ಒಂದೊಂದಾಗಿ ಪಕ್ಕಕ್ಕೆ ಸರಿಸುತ್ತ ಅವುಗಳ ಅಂತರವನ್ನು ಸಾಧ್ಯವಾದಷ್ಟು ಹೆಚ್ಚಿಸಬೇಕು ಒಂದೇ ಸಮವಾಗಿ ಕಾಲುಗಳನ್ನು ಹಿಗ್ಗಿಸಿಟ್ಟು, ಕಾಲುಗಳ ಹಿಂಬದಿಯೆಲ್ಲವೂ ನೆಲವನ್ನು ಅಂಟಿಕೊಂಡಿರುವಂತೆ ಇರಬೇಕು .

3. ಆಮೇಲೆ ಕಾಲ್ ಹೆಬ್ಬೆರಳುಗಳನ್ನು ಆಯಾ ಕೈಹೆಬ್ಬೆರಳು, ತೊರು ಬೆರಳು ಮತ್ತು ನಡುಬೆರಳುಗಳಿಂದ ಹಿಡಿದುಕೊಳ್ಳಬೇಕು.

4. ಬಳಿಕ ಬೆನ್ನುಮೂಳೆಯನ್ನು ನೆಟ್ಟಗೆ ನಿಲ್ಲಿಸಿ ಪಕ್ಕೆಲುಬುಗಳನ್ನು ಹಿಗ್ಗಿಸಬೇಕು.ಆಮೇಲೆ ವಪೆಯನ್ನು ಮೇಲಕ್ಕೆ ಸೆಳೆದಿಟ್ಟು ಈ ಭಂಗಿಯಲ್ಲಿ ಆಳವಾದ ಉಸಿರಾಟದಿಂದ ಕೆಲವು ಸೆಕೆಂಡುಗಳಕಾಲ ನೆಲೆಸಬೇಕು.

5. ಅನಂತರ ಉಸಿರನ್ನು ಹೊರಕ್ಕೆ ಬಿಟ್ಟು ಮುಂಬಾಗಿ ತಲೆಯನ್ನು ನೆಲದ ಮೇಲಿರಬೇಕು ಆ ಬಳಿಕ ಕತ್ತನು ಹಿಗ್ಗಿಸಿ,ಗದ್ದವನು ನೆಲದ ಮೇಲೆ ಇರಿಸಬೇಕು.

6. ಇದಾದಮೇಲೆ,ಪಾದಗಳನ್ನು ಕೈಗಳಿಂದ ಹಿಡಿದು ಎದೆಯನ್ನು ನೆಲದ ಮೇಲಿರಿಸಲು ಯತ್ನಿಸಬೇಕು ಈ ಭಂಗಿಯಲ್ಲಿ 30 ರಿಂದ 60 ಸೆಕೆಂಡುಗಳ ಕಾಲ ಸಾಮಾನ್ಯ ಉಸಿರಾಟದಿಂದ ನಿಲೆಸಬೇಕು .

7. ಕೊನೆಯಲ್ಲಿ ಎಡಪಾದಗಳನ್ನು ಎರಡು ಕೈಗಳಿಂದಲೂ ಹಿಡಿದು ಉಸಿರನ್ನು ಹೊರಬಿಟ್ಟು ಗದ್ದವನ್ನು ಎಡಮಂಡಿಯ ಮೇಲಿರಬೇಕು,ಆಮೇಲೆ ಉಸಿರನ್ನು ಒಳಕ್ಕೆಳೆದು ತಲೆ ಮುಂಡವನ್ನು ಮೇಲೆತ್ತಬೇಕು. ಈಗ ಬಲಪಾದವನ್ನು  ಹಿಡಿದು ಉಸಿರನ್ನು ಹೊರಹೋಗಿಸುತ್ತ ಗದ್ದವನ್ನು ಬಲ ಮಂಡಿಯ ಮೇಲೆರಿಸಬೇಕು. ಅನಂತನ ಉಸಿರನ್ನು ಒಳಕ್ಕೆಳೆದು, ತಲೆ ಮಂಡಿಗಳನ್ನು ಮೇಲೆತ್ತಿ, ಕೈಗಳನ್ನು ಸಡಿಲಿಸಿ,ಪಾದಗಳೆರಡನ್ನು ಜೊತೆಗೂಡಿಸಿ ವಿಶ್ರಾಂತಿ ಪಡೆಯಬೇಕು.

ಪರಿಣಾಮಗಳು :-

ಈ ಆಸನದ ಭಂಗಿಯು ಜಾನು ರಜ್ಜುಗಳನ್ನು ಜಗ್ಗಿ ಹಿಗ್ಗಿಸುವುದರಿಂದ,ವಸ್ತಿಕುಹರದ ಸುತ್ತ  ರಕ್ತವು ಸರಿಯಾದ ಕ್ರಮದಿಂದ ಪರಿಚಲಿಸಿ ಆ ಭಾಗವನ್ನು ಆರೋಗ್ಯ ಸ್ಥಿತಿಯಲ್ಲಿಡುತ್ತದೆ. ಈ ಆಸನವು ಅಂಡ ವಾಯುವಿನ ವೃದ್ಧಿಯಾಗದಂತೆ ತಡೆ ಯೊಡ್ಡುವುದು ಮಾತ್ರವಲ್ಲದೆ,ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಈ ರೋಗವನ್ನು ಗುಣಪಡಿಸುತ್ತದೆ, ಮತ್ತು ಸೊಂಟ ನೋವಿದ್ದರೆ ಅದನ್ನು ಗುಣಪಡಿಸುತ್ತದೆ.ಸ್ತ್ರೀಯರ ವಿಷಯದಲ್ಲಿ ಈ ಆಸನವು,ಅವರು ಬಹಿಷ್ಠರಾದಾಗ ರಜೋಸ್ರಾವವನ್ನು

ಹತೋಟಿಯಲ್ಲಿಡುವುದಲ್ಲದೆ, ಅದನ್ನು ಕ್ರಮಪಡಿಸಿ ಅಂಡಾಶಯವನ್ನು ಪ್ರಚೋದನೆಗೊಳಿಸುವುದರಿಂದ ಈ ಆಸನವು ಅವರಿಗೆ ಒಂದು ವರೆವೇ ಸರಿ.