ಮನೆ ಕ್ರೀಡೆ ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ಮುಂಬೈನ 10 ವರ್ಷದ ಬಾಲಕಿ

ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ಮುಂಬೈನ 10 ವರ್ಷದ ಬಾಲಕಿ

0

ಮುಂಬೈ(ಮಹಾರಾಷ್ಟ್ರ): ಆಟವಾಡುವ ವಯಸ್ಸಿನಲ್ಲಿ ಹಿಮಾಲಯ ಪರ್ವತ ಶ್ರೇಣಿಯ ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ರಾಜ್ಯದ ಹತ್ತು ವರ್ಷದ ಬಾಲಕಿ ಇತಿಹಾಸ  ನಿರ್ಮಿಸಿದ್ದಾಳೆ.

ಚಾಂಪಿಯನ್ ಸ್ಕೇಟರ್ ‘ರಿದಂ ಮಮಾನಿಯಾ’ ಹಿಮಾಲಯ ಪರ್ವತ ಶ್ರೇಣಿಯ ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಏರಿದ ‘ಮೊಟ್ಟಮೊದಲ ಅತ್ಯಂತ ಕಿರಿಯ ಭಾರತೀಯ ಪರ್ವತಾರೋಹಿ’ ಎಂಬ ಹೆಗ್ಗಳಿಕಗೆ ಪಾತ್ರಳಾಗಿದ್ದಾಳೆ.

ಬಾಂದ್ರಾ ಋಷಿಕುಲ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿನಿ ರಿದಂ ಯಾವುದೇ ವಿಶೇಷ ತರಬೇತಿಯನ್ನು ಪಡೆಯದೆ ಸತತ ಪ್ರಯತ್ನದ ಮೂಲಕ ಈ ಸಾಧನೆ ಮಾಡಿದ್ದಾಳೆ. ಪ್ರತಿದಿನ ಕಡಿದಾದ ಮೆಟ್ಟಿಲುಗಳನ್ನು ಹತ್ತುವ ಮೂಲಕ ಅಭ್ಯಾಸ ಮಾಡುತ್ತಿದ್ದಳಂತೆ.

ಈ ಸಾಧನೆ ಕುರಿತು ಮಾತನಾಡಿರುವ ರಿದಂ, ಮೇ 6ರಂದು ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ತಮ್ಮ ಪೋಷಕರಾದ ಊರ್ಮಿ ಮತ್ತು ಹರ್ಷಲ್ ಜತೆಗೆ ಶೃಂಗದ ತುದಿ ತಲುಪಿದಳು.’ಇಬಿಸಿ ಶೃಂಗ ತಲುಪುವುದು ನನ್ನ ಗುರಿಯಾಗಿತ್ತು. ಆದ್ದರಿಂದ ಚಳಿ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಅಪರೂಪದ ಆಲಿಕಲ್ಲು ಮಳೆ ನನಗೆ ಹೊಸದು. ಬೇಸ್ ಕ್ಯಾಂಪ್ 5,364 ಮೀಟರ್‌ನಲ್ಲಿದ್ದು, ನನ್ನ ಗುರಿಯನ್ನು ಪೂರ್ಣಗೊಳಿಸಲು 11 ದಿನಗಳು ಬೇಕಾಯಿತು’ ಎಂದು ಹೇಳಿದ್ದಾಳೆ.