ಮನೆ ಅಪರಾಧ ಬೆಂಗಳೂರು: ಗ್ಯಾಸ್‌ ಕಟ್ಟರ್‌ ನಿಂದ ಎಟಿಎಂ ಯಂತ್ರ ಕತ್ತರಿಸಿ 16.56 ಲಕ್ಷ ರೂ. ದರೋಡೆ

ಬೆಂಗಳೂರು: ಗ್ಯಾಸ್‌ ಕಟ್ಟರ್‌ ನಿಂದ ಎಟಿಎಂ ಯಂತ್ರ ಕತ್ತರಿಸಿ 16.56 ಲಕ್ಷ ರೂ. ದರೋಡೆ

0

ಬೆಂಗಳೂರು: ಮುಖಕ್ಕೆ ಬೆಡ್‌ ಶೀಟ್‌ ಸುತ್ತಿಕೊಂಡು ಎಟಿಎಂ ಕೇಂದ್ರಕ್ಕೆ ನುಗ್ಗಿರುವ ದರೋಡೆಕೋರರು ಎಟಿಎಂ ಯಂತ್ರ ಧ್ವಂಸಗೊಳಿಸಿ 16.56 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Join Our Whatsapp Group

ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ಆಕ್ಸಿಸ್‌ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಭಾನುವಾರ ಮುಂಜಾನೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಸಿಸಿ ಕ್ಯಾಮೆರಾಗಳಿಗೆ ಕಪ್ಪು ಸ್ಪ್ರೇ: ಭಾನುವಾರ ಬೆಳಗ್ಗೆ ಕಾರಿನಲ್ಲಿ ನಗರಕ್ಕೆ ಬಂದಿರುವ ಇಬ್ಬರು ದರೋಡೆಕೋರರು, ಮುಂಜಾನೆ 6 ಗಂಟೆಗೆ ಮುಖಕ್ಕೆ ಬೆಡ್‌ಶೀಟ್‌ ಸುತ್ತಿಕೊಂಡು ಎಟಿಎಂ ಕೇಂದ್ರಕ್ಕೆ ನುಗ್ಗಿದ್ದಾರೆ. ಬಳಿಕ ಕೇಂದ್ರದಲ್ಲಿರುವ ಎರಡು ಸಿಸಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ ಸಿಂಪಡಿಸಿದ್ದಾರೆ. ನಂತರ ಗ್ಯಾಸ್‌ ಕಟರ್‌ನಿಂದ ಎಟಿಎಂ ಯಂತ್ರದ ಕ್ಯಾಶ್‌ ಬಾಕ್ಸ್‌ ಕತ್ತರಿಸಿ, 16.56 ಲಕ್ಷ ರೂ. ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ಆರೋಪಿಗಳು ಬೆಡ್‌ಶೀಟ್‌ ಸುತ್ತಿಕೊಂಡು ಎಟಿಎಂ ಕೇಂದ್ರಕ್ಕೆ ನುಗ್ಗಿರುವುದು, ಸಿಸಿ ಕ್ಯಾಮೆರಾಕ್ಕೆ ಆರೋಪಿಗಳು ಕಪ್ಪು ಬಣ್ಣದ ಸ್ಪ್ರೆà ಸಿಂಪಡಿಸಿರುವ ದೃಶ್ಯಗಳು ಕೇಂದ್ರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ ಕಾರಿನಲ್ಲಿ ಆರೋಪಿಗಳು ನಗರ ತೊರೆದು ಹೋಗಿರುವ ದೃಶ್ಯಗಳು ರಸ್ತೆ ಮಾರ್ಗದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹರಿಯಾಣ ಗ್ಯಾಂಗ್‌ ನಿಂದ ಕೃತ್ಯ?:

 ಪ್ರಾಥಮಿಕ ಮಾಹಿತಿ ಪ್ರಕಾರ, ಹರಿಯಾಣ ಅಥವಾ ಉತ್ತರ ಭಾರತ ಮೂಲದ ವ್ಯಕ್ತಿಗಳು ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ. ಅಲ್ಲದೆ, ಕಾರಿನ ಮಾಹಿತಿ ಪತ್ತೆ ಹಚ್ಚಿದಾಗ, ಅದು ಕೂಡ ಕಳವು ಮಾಡಿರುವ ಕಾರು ಎಂಬುದು ತಿಳಿದು ಬಂದಿದೆ. ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.