ಮನೆ ವ್ಯಕ್ತಿತ್ವ ವಿಕಸನ ಜ್ಞಾನಕ್ಕೆ ವಯಸ್ಸಿನ ಹಂಗಿಲ್ಲ

ಜ್ಞಾನಕ್ಕೆ ವಯಸ್ಸಿನ ಹಂಗಿಲ್ಲ

0

      ಇದು ಪುರಾಣದಲ್ಲಿ ಬರುವ ಒಂದು ಕಥೆ ಮಹೀಸಾಗರ ಸಂಗಮದ ಒಂದು ಆಗ್ರಹಾರದಲ್ಲಿ ಹಾರೀತ ಎಂಬ ತಪಸ್ವಿ ಇದ್ದನು. ಅವನ ಮಗ ಕಮಠ. ಕಮಠನು ಬಹುಬೇಗನೇ ವಿದ್ಯಾರ್ಜನೆಯನ್ನು ಮಾಡಿದನು.  ಹೀಗಿರುವಾಗ ಒಮ್ಮೆ ನಾರದನು ಬ್ರಹ್ಮಲೋಕಕ್ಕೆ ಹೋದನು. ಬ್ರಹ್ಮನು ಮಹೀಸಾಗರ ದಲ್ಲಿ ಸೂರ್ಯನನ್ನ ವಿಗ್ರಹ ರೂಪದಲ್ಲಿ ಸ್ಥಾಪಿಸುವಂತೆ ನಾರದನಿಗೆ ತಿಳಿಸಿದನು. ನಾರದನು ವಿಷಯವನ್ನು ಸೂರ್ಯನಿಗೆ ತಿಳಿಯಬೇಕೆಂದು ಸೂರ್ಯನ ಬಳಿಗೆ ಹೋದನು. ಸೂರ್ಯನು ನಾರಾದನನ್ನು ಸತ್ಕರಿಸಿ ಬಂದ ಕಾರಣವನ್ನು ಕೇಳಿದನು.ನಾರದನು ಬ್ರಹ್ಮನ ವಿಚಾರವನ್ನು ತಿಳಿಸಿದನು. ಸೂರ್ಯನಿಗೆ ಈಗ ಕುತೂಹಲ ಉಂಟಾಯಿತು.ತಾನು ವಹೀ ಸಾಗರವನ್ನು ನೋಡಿ ಅಲ್ಲಿರುವ ವ್ಯಕ್ತಿಗಳೊಂದಿಗೆ ಮಾತನಾಡಿ ಬರಬೇಕೆಂದು ಒಬ್ಬ ವಿರುದ್ಧ ಬ್ರಾಹ್ಮಣನ ರೂಪದಲ್ಲಿ ಸೂರ್ಯನು ಮಹೀಸಾಗರಕ್ಕೆ ಹೊರಟನು.

Join Our Whatsapp Group

    ಸೂರ್ಯನು ಹಾರೀತನ ಮನೆಗೆ ಬಂದನು. ಹಾರೀತನು ವೃದ್ದ ಬ್ರಾಹ್ಮಣನನ್ನು ಸತ್ಕರಿಸಿ ಮಧ್ಯಾಹ್ಯದ ಊಟಕ್ಕೆ ನಿಲ್ಲಲು ಹೇಳಿದನು. ಆಗ ಸೂರ್ಯನು, “ನನಗೆ ಆ ಕ್ಷಣದ ತೃಪ್ತಿಯನ್ನಷ್ಟೆ ಕೊಡುವ ಅನ್ನ ಸಾಂಬಾರುಗಳ ಊಟ ಬೇಡ.ಶಾಶ್ವತವಾದ ತೃಪ್ತಿಯನ್ನು ಕೊಡುವ ಜ್ಞಾನ ಮಂಥನದ ಆಹಾರವು ಬೇಕು” ಎಂದು ಕೇಳಿದರು. ಈಗ ಹರೀತನಿಗೆ ಪೇಚಿಗಿಟ್ಟುಕೊಂಡಿತು. ಆಗ ಸೂರ್ಯನು “ ಜ್ಞಾನದಾಹವನ್ನು ಹೋಗಲಾಡಿಸುವ ಸ್ಥಳದ ಹೊರತಾಗಿ ಬೇರೆ ಕಡೆ ನಾನು ಆರೆಕ್ಷಣವೂ ನಿಲ್ಲುವುದಿಲ್ಲ” ಎಂದು ಹೊರಡಲನುವಾದನು. ಗೊಂದಲಕ್ಕೆ ಸಿಲುಕಿದ ತಂದೆಯನ್ನು. ಕಂಡು ಕಮಠನ್ನು ನಾನಿದ್ದೇನೆಲ್ಲ.ಜ್ಞಾನದ ಆಹಾರವನ್ನು ಉಣಪಡಿಸಲು  ಕೆಲಸಕ್ಕೆ ನನ್ನನ್ನು ನೇವಿಸುವ ಎಂದನು.ಕಮಠನು ಹುಡುಗಾಟಕೆಯಿಂದ ಹೇಳುತ್ತಿದ್ದಾನೆಂದು ಹಾರೀತನು ಯೋಚಿಸುತ್ತಿರುವಾಗಲೇ ಸೂರ್ಯನು ಮನೆಯನ್ನು ದಾಟಿ ಹೊರ ಹೊರಟಿದ್ದನು  “ಬನ್ನಿ ಪೂಜ್ಯರೇ, ನಾನು ನಿಮಗೆ ಜ್ಞಾನದ ಭೋಜನವನ್ನು ಉಣಬಡಿಸುತ್ತೇನೆ” ಎಂಬ ಧ್ವನಿಯನ್ನು ಕೇಳಿ ಸೂರ್ಯನು ತಿರುಗಿ ನೋಡಿದನು.ಬಾಲಕನೊಬ್ಬ ತನ್ನನ್ನು  ಕರೆಯುತ್ತಿದ್ದದು ಕಂಡಿತು. ಸೂರ್ಯನು ಹಿಂದಿರುಗಿದನು.ಕಮಠನ್ನು ಸೂರ್ಯನಿಗೆ ಜ್ಞಾನ ಭೋಜನವನ್ನು ಉಣಬಡಿಸಲು ತೊಡಗಿದನು. ಜ್ಞಾನದ ಆಕರವೇ ಆದ ಸೂರ್ಯನು ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಕಮಠನಿಗೆ ಕೇಳತೊಡಗಿದನು. ಕಮಠನು ಧೈರ್ಯಗೆಡದೆ  ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದನು. ಸುಪ್ರೀತನಾದ  ಸೂರ್ಯನು ತನ್ನ ನಿಜರೂಪದಲ್ಲಿ ಕಾಣಿಸಿಕೊಂಡು ಕಮಠನನ್ನು ಆಶೀರ್ವದಿಸಿನದನು.ಅಲ್ಲೇ ನೆಲೆಸಿದನು. ಮುಂದೆ ಕಮಠನು ಬಾಲ್ಯದಿತ್ಯನೆಂದು ಖ್ಯಾತನಾದನು.

     ಸಾಕಷ್ಟು ಸಂದರ್ಭದಲ್ಲಿ ನಾವು ಜ್ಞಾನವನ್ನು ವಯಸ್ಸಿನ ಹಂಗಿನಲ್ಲಿ ಬಂಧಿಸಿಬಿಡುತ್ತವೆ.ಕಿರಿಯರು ನಮ್ಮ ವಯಸ್ಸಿಗೆ ಇಷ್ಟೇನ್ನೆಲ್ಲ ಕಲಿಯಲು ಆಗುತ್ತದಾ ಎಂದುಕೊಳ್ಳುವುದು,ಹಿರಿಯರು ನಮ್ಮದೀಗ.ಕಲಿಯುವ ವಯಸ್ಸಾ ಎಂದು ಭಾವಿಸುವುದು ಇದೆ. ಶಂಕರಾಚಾರ್ಯ 12ನೇ ವರ್ಷ ವಯಸ್ಸಿಗೆ ಬರುವಾಗಲೇ ಕಠಿಣಾತಿ ಕಠಿಣ ವಿಚಾರಗಳನ್ನು ಕಲಿತಿದ್ದರು. ಕವಿ ರನ್ನನು ವಯಸ್ಸಾದ ನಂತರ ಕಲಿಕೆಯನ್ನು ಪ್ರಾರಂಭಿಸಿ ಕವಿ ಚಕ್ರವರ್ತಿಯಾದನು ನಿಜವಾಗಿ ಜ್ಞಾನಕ್ಕೆ ವಯಸ್ಸಿನ ಹಂಗಿಲ್ಲ ಕಲಿಯುವ ಮನಸ್ಸಿದೆಯೋ ಇಲ್ಲವೋ ಎನ್ನುವುದಷ್ಟೇ ಅಲ್ಲಿ ಮುಖ್ಯ.ಆದರೆ ಜ್ಞಾನಗಳಿಕೆಯ ಪಕ್ವತೆ ಇರಬೇಕಾಗುತ್ತದೆ .