ಮನೆ ರಾಜಕೀಯ ಮುಡಾ ಹಗರಣ: ಯಾರೇ ಎಷ್ಟೇ ದೊಡ್ಡವರಿದ್ದರೂ ಕ್ರಮ ಆಗಬೇಕು- ಬಿ ಕೆ ಹರಿಪ್ರಸಾದ್

ಮುಡಾ ಹಗರಣ: ಯಾರೇ ಎಷ್ಟೇ ದೊಡ್ಡವರಿದ್ದರೂ ಕ್ರಮ ಆಗಬೇಕು- ಬಿ ಕೆ ಹರಿಪ್ರಸಾದ್

0

ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

Join Our Whatsapp Group

 ಈ ನಡುವೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, ಸಿಎಂ , ಡಿಸಿಎಂ ಬಹಳ ದೊಡ್ಡ ನಾಯಕರು ಅವರಿಗೆಲ್ಲ ಸಲಹೆ ನೀಡಲು ಆಗತ್ತಾ ನಾವು? ಮುಡಾ ಹಗರಣ, ವಾಲ್ಮೀಕಿ ಹಗರಣದಲ್ಲಿ ದನಿ ಎತ್ತಬೇಕು. ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮೆಲ್ಲರ ನಾಯಕ ರಾಹುಲ್ ಝೀರೋ ಟಾಲರೆನ್ಸ್ ಅಂತ ಹೇಳಿದ್ದಾರೆ. ಅದು ಯಾರೇ ಎಷ್ಟೇ ದೊಡ್ಡವರಿದ್ದರೂ ಸಹ ಕ್ರಮ ಆಗಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಜುಲೈ 09) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆ ಹರಿಪ್ರಸಾದ್, ಭೂಮಿ ವಿಚಾರದಲ್ಲಿ ಮಾತಾನಾಡುವುದಕ್ಕೆ ಹೋದರೆ ಫಂಡಾರಸ್ ಬಾಕ್ಸ್ ಇದ್ದ ಹಾಗೆ. ಯಾರೂ ಸಹ ಅದರಿಂದ ಹೊರಗೆ ಇಲ್ಲ. ಬಹುತೇಕ ರಾಜಕಾರಣಿಗಳು ಭೂಮಿ ವಿಚಾರದಿಂದ ಹೊರಗಿಲ್ಲ. ಒಂದಲ್ಲ ಒಂದು ರೀತಿ ಅದರೊಳಗೇ ಇದ್ದಾರೆ. ಅಷ್ಟು ಸುಲಭವಾಗಿ ಮುಡಾ ಅಂತ ಅದನ್ನು ಮುಚ್ಚಿ ಹಾಕಲು ಆಗುವುದಿಲ್ಲ. ಭೂಮಿ ಎನ್ನುವುದು ಕೂಲಂಕಷವಾಗಿ ನೋಡಿದ್ರೆ ಗೊತ್ತಾಗುತ್ತದೆ ಚರ್ಚೆಯೇ ಆಗುವುದಿಲ್ಲ ಎಂದರು.

ಬಡವರಿಗೆ ಜಾಗ ಕೊಡುತ್ತೇವೆ ಅಂದ್ರೆ ಚರ್ಚೆ ಆಗುತ್ತೆ, ಇಲ್ಲದಿದ್ದರೆ ಇಲ್ಲ/ ಮೈಸೂರು ಮಾತ್ರವಲ್ಲ, ಬೆಂಗಳೂರಿನಲ್ಲಿ ಎಷ್ಟೆಲ್ಲ ಡಿನೋಟಿಫೈ ಆಗಿದೆ. ಯಾರ ಯಾರ ಕಾಲದಲ್ಲಿ ಎಷ್ಟೆಲ್ಲ ಡಿನೋಟಿಪೈ ಆಗಿದೆ ನೋಡಿ. ಬೆಂಗಳೂರು ಪ್ಯಾಲೇಸ್​ಗೆ ಜಾಗ ಕೊಡಲು ಎಷ್ಟು ವರ್ಷ ಆಗ್ತಿದೆ. ದೊಡ್ಡವರಿಗೆ ಒಂದು ಕಾನೂನು ಬಡವರಿಗೆ ಇನ್ನೊಂದು ಕಾನೂನು. ಎಲ್ಲರಿಗೂ ಒಂದೇ ಕಾನೂನು ಇರಬೇಕು. 135 ಸೀಟು ಬಂದಿದೆ ಅಂದ್ರೆ, ಅದಕ್ಕೆ ದುರ್ಬಲ ವರ್ಗದವರೇ ಕಾರಣ. SC, ST, ಅಲ್ಪಸಂಖ್ಯಾತರಿಮದಲೇ ಕಾಂಗ್ರೆಸ್​ಗೆ ಹೆಚ್ಚು ಮತ ಬಂದಿದೆ. ದುರ್ಬಲ ವರ್ಗದವರಿಗೆ ಅನ್ಯಾಯ ಆಗಬಾರದು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಗೆ ಕಿವಿ ಮಾತು ಹೇಳಿದರು.

ವಾಲ್ಮೀಕಿ ನಿಗಮದಲ್ಲಿ ಯಾರದ್ದೇ ತಪ್ಪಿದ್ದರೂ ಕ್ರಮ ಆಗಬೇಕ. ಇದರಲ್ಲಿ ವಿರೋಧ ಪಕ್ಷಗಳು ವಿಫಲವಾದ್ರೂ ಸಹ ನಾವು ಬಿಡುವುದಿಲ್ಲ. ಸಮುದಾಯಕ್ಕೆ ಅನ್ಯಾಯ ಆಗಬಾರದು. ವಾಲ್ಮೀಕಿ ಸಮಾಜ ಮುಂದೆ ಬರುವುದೇ ಕಷ್ಟ, ಎಂದು ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ರೆ ಸಹಿಸಲು ಸಾಧ್ಯವಿಲ್ಲ. ಸಾಕ್ಷಿ ಸಮೇತ ತಪ್ಪು ಹೊರ ಬಂದರೆ ನಾವೂ ಸಹ ಚರ್ಚೆ ಮಾಡಲು ತಯಾರಿದ್ದೇವೆ. ಸಾಕ್ಷಿ ಸಮೇತ ಹೊರ ಬರಬೇಕು. ವಾಲ್ಮೀಕಿ ಸಮುದಾಯ ಸೇರಿ ಯಾವುದೇ ದುರ್ಬಲ ವರ್ಗಕ್ಕೆ ಅನ್ಯಾಯ ಆಗಿದ್ರೆ ವಿರೋಧ ಪಕ್ಷದವರಿಗಿಂತ ಹೆಚ್ಚು ನಾವೇ ಧ್ವನಿ ಎತ್ತುತ್ತೇವೆ. ಬಹಳ ಗಂಭೀರ ಆಪಾದನೆ ಇದು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ವಿಚಾರಣೆ ಪಾರದರ್ಶಕವಾಗಿ ನಡೆಯಬೇಕು ಎಂದು ಹೇಳಿದರು.