ಮನೆ ಮನೆ ಮದ್ದು ಜ್ಞಾಪಕಶಕ್ತಿ ಹೆಚ್ಚಲು

ಜ್ಞಾಪಕಶಕ್ತಿ ಹೆಚ್ಚಲು

0

1. ಕೊತ್ತಂಬರಿ ಬೀಜದ ಚೂರ್ಣ ಜೇನಿನೋಡನೆ ರಾತ್ರಿ ಮಲಗುವಾಗ ಸೇವಿಸಿ ಜ್ಞಾಪಶಕ್ತಿ ಹೆಚ್ಚುತ್ತದೆ.

Join Our Whatsapp Group

2. ಗೋಡಂಬಿಯನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ನೆನಪಿನ ಶಕ್ತಿ ಹೆಚ್ಚುತ್ತದೆ.

3. ಡಾಲ್ಚಿ ನ್ನಿಯ ಚೂರ್ಣವನ್ನು ಜೇನುತುಪ್ಪದಲ್ಲಿ ಸೇವಿಸಲು ಜ್ಞಾಪಕ ಶಕ್ತಿ ಹೆಚ್ಚುತ್ತದೆ.

4. ಅಲಸಂದೆ ಹಸಿಕಾಳನ್ನು ಒಂದು ಹಿಡಿಯಷ್ಟು ತಿನ್ನುತ್ತಾ ಬಂದರೆ ನೆನಪಿನ ಶಕ್ತಿ ಹೆಚ್ಚುವುದು.

5. ಬಜೆಚೂರ್ಣವನ್ನು ಜೇನಿನಲ್ಲಿ ಮಿಶ್ರ ಮಾಡಿ ನೆಕ್ಕುತ್ತಿದ್ದರೆ ಜ್ಞಾಪಕಶಕ್ತಿ ಹೆಚ್ಚುತ್ತದೆ.

6. ಬಳುಕು ವೃಕ್ಷದ ಚಕ್ಕೆ ಕಷಾಯವನ್ನು ಕುಡಿಯುತ್ತಾ ಬಂದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

7. ಕುಂಬಳಕಾಯಿಯನ್ನು ಆಹಾರದಲ್ಲಿ ಸೇವಿಸುತ್ತಾ ಬಂದರೆ ಬುದ್ಧಿ ಬೆಳೆಯುತ್ತದೆ.

8. ಒಂದೆಲಗದ ಸ್ವರಸ ಪ್ರತಿದಿನವೂ ಸೇವಿಸುತ್ತಾ ಬಂದರೆ ನೆನಪು ಹಾರುವುದು ಕಡಿಮೆಯಾಗುತ್ತದೆ.

9. ಗಜ್ಜುಗದ ಎಲೆ ರಸಕ್ಕೆ ಶುಂಠಿ ರಸ ಹಾಕಿ ಮೂಗಿನ ಹೊಳ್ಳೆಯಲ್ಲಿ ಬಿಡುತ್ತಿದ್ದರೆ,ಮಂಕುತನ ಹರಿದು ಜ್ಞಾನವು ಬರುತ್ತದೆ.

10. ಬಕುಳ ವೃಕ್ಷ ಅಂದರೆ ಪಗಡೆ ಮರದ ಚಕ್ಕೆ, ಕಷಾಯ ಸೇವಿಸುತ್ತಾ ಬರಲು ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ

11. ಮೆಂತ್ಯದ ಸೊಪ್ಪನ್ನು ಬೇಯಿಸದೇ ಹಾಗೆಯೇ ಒಂದು ಮಂಡಲ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

12. ಅಶ್ವಗಂಧಿ ಲೇಹ ಸೇವಿಸಿ ಹಾಲು ಕುಡಿಯುತ್ತಾ ಬಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ.

13. ಜೇನುತುಪ್ಪ,ಯಾಲಕ್ಕಿ ಪುಡಿಯನ್ನು ಬಿಸಿಯಾದ ಹಾಲಿನಲ್ಲಿ ಹಾಕಿ ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ.