ಮನೆ ಯೋಗಾಸನ ಪರವೃತ್ತ ಪಶ್ಚಿಮೋತ್ತಾನಾಸನ

ಪರವೃತ್ತ ಪಶ್ಚಿಮೋತ್ತಾನಾಸನ

0

 ‘ಪ್ರರಿವೃತ್ತ’ ವೆಂದರೆ ಸುತ್ತಲೂ ತಿರುಗಿಸಿದ : ಪಶ್ಚಿಮ = ಪಶ್ಚಿಮ ದಿಕ್ಕು, ದೇಹದ ಪಶ್ಚಿಮ ಭಾಗ ಅಂದರೆ ತಲೆಯಿಂದ ಬೆನ್ನ ಹಿಂದೆ ಹಿಮ್ಮಡಿಯವರೆಗೂ ಇರುವ ಭಾಗ ; ಉತ್ತಾನ  ಚೆನ್ನಾಗಿ ಸೆಳೆದಿಟ್ಟ ಹಿಗ್ಗಿಸಿಟ್ಟ ‘ಪಶ್ಚಿಮೋತ್ತಾನಾನ’ದ ವ್ಯತ್ಯಾಸದಿಂದಾಗುವ ಈ ಆಸನದಲ್ಲಿ ಮುಂಡವನ್ನು ಒಂದು ಕಡೆಗೆ ತಿರುಚಿಡಬೇಕು ಈ ಕಾರಣದಿಂದ ಆಸನಕ್ಕೆ ಹೆಸರು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ನೆಲದ ಮೇಲೆ ಕುಳಿತು, ಕಾಲುಗಳನ್ನು ಮುಂಗಡಗೆ ಚಾಚಿಡಬೇಕು, ಬಳಿಕ ಮಂಡಿಗಳನ್ನು ಬಿಗಿಗೊಳಿಸಿ,ಅವನ್ನೂ ಗಿಣ್ಣುಗಳನ್ನು ಹಿಮ್ಮಡಿಗಳನ್ನು ಮತ್ತು ಕಾಲ್ಬೆರಳುಗಳನ್ನೂ ಒಂದನ್ನೊಂದು ಮುಟ್ಟುವಂತೆ ಅಳವಡಿಸಬೇಕು.

2. ಆಮೇಲೆ ಉಸಿರನ್ನು ಹೊರ ಹೋಗಿಸಿ,ಬಲ ;ತೋಳನ್ನು ಎಡಪಾದದೆಡೆಗೆ ಚಾಚಿ ಬಳಿಕ ಬಲಮುಂದೋಳು ಮತ್ತು ಬಲಮಣಿಕಟ್ಟನ್ನು ತಿರುಚಿ, ಕೈಹೆಬ್ಬೆರಳು ನೆಲದ ಕಡೆಗೂ, ಕಿರುಬೆರಳು ಮೇಲ್ಗಡೆಗೂ ಬರುವಂತಿಟ್ಟು ಅನಂತರ ಬಲಗೈಯಿಂದ ಎಡಪಾದದ ಹೊರಬದಿಯನ್ನು ಹಿಡಿದುಕೊಂಡು,ಒಂದು ಸಲ ಉಸಿರನ್ನು ಒಳಕ್ಕೆ ಎಳೆಯಬೇಕು.3.  ಆ ಬಳಿಕ ಉಸಿರನ್ನು ಮತ್ತೆ ಹೊರಕ್ಕೆ ಬಿಟ್ಟು, ಎಡತೋಳನ್ನು ಬಲ ಮುಂದೋಳಿನ ಮೇಲೆ ಚಾಚಿಟ್ಟು ಡೆಗೈಮಣಿಕಟ್ಟನ್ನು ಮೇಲ್ಗೊಗ ಮಾಡಿಡಬೇಕು. ಆಮೇಲೆ ಎಡಗೈ ಮಣಿಕಟ್ಟು ಮುಂದೋಳಗಳನ್ನು ತಿರುಚಿ,ಹೆಬ್ಬೆರಳು ನೆಲದಕಡೆಗೆ, ಕಿರುಬೆರಳು ಮೇಲ್ಗಡೆಗೆ ತೋರುವಂತಿಟ್ಟು,ಅನಂತರ ಬಲ ಪಾದದ ಹೊರಬದಿಯನ್ನು ಹಿಡಿದುಕೊಂಡು ಒಂದು ಸಲ ಉಸಿರನ್ನು ಒಳಕ್ಕೆಳೆದುಕೊಳ್ಳಬೇಕು.

4. ಇದಾದಮೇಲೆ,ಉಸಿರನ್ನು ಹೊರಕ್ಕೆಬಿಟ್ಟು ಬಾಗಿ,ಮೊಣ ಕೈಗಳನ್ನಗಲಿಸಿ, ಮುಂಡವನ್ನು ಎಡಗಡೆಗೆ ಸುಮಾರು 90 ಡಿಗ್ರಿಗಳಷ್ಟು ತಿರುಗಿಸಬೇಕು ಅನಂತನ ಒಂದು ಸಲ ಉಸಿರೆಳೆದು, ಮತ್ತೆ ಅದನ್ನು ಹೊರಕ್ಕೆಬಿಟ್ಟು ತೋಳುಗಳ ನಡುವೆ ತಲೆಯನ್ನು ಸರಿಸುತ್ತಾ ಮೇಲ್ದಿಕ್ಕಿಗೆ ನಿಟ್ಟಿಸಬೇಕು.ಆಮೇಲೆ ಬಲಗೈ ಮೇಲ್ದೋಳಿನ ಹಿಂಬದಿಯನ್ನು ಕಂಕಳಿನ ಬಳಿ ಎಡ ಮಂಡಿಯ ಮೇಲೆ ಹಾಯಿಸಿಡಬೇಕು ಮತ್ತು ಬಲಗಡೆಯ ಪಕ್ಕೆ ಲುಬುಗಳನ್ನು ಎಡತೊಡೆಯ ಮೇಲೆ ಒರಗಿಸಲು ಯತ್ನಿಸಬೇಕು ಮುಂಡವನ್ನು ಪಕ್ಕಕ್ಕೆ ತಿರುಚುವುದರಿಂದ ಉಸಿರಾಟದ ವೇಗ ಹೆಚ್ಚಾತ್ತದೆ. ಈ ಭಂಗಿಯಲ್ಲಿ ಸುಮಾರು 20 ಸೆಕೆಂಡುಗಳ ಕಾಲ ನೆಲಸಬೇಕು.

5. ತರುವಾಯ ಉಸಿರನ್ನು ಒಳಕ್ಕೆಳೆದು, ಕೈಗಳನ್ನು ಸಡಿಲಿಸಿ,ಮುಂಡವನ್ನು ಹಿಂದಕ್ಕೆ ಸರಿಸಿ, ಮೊದಲಿನ ಸ್ಥಿತಿಗೆ ಮತ್ತೆ ಬರಬೇಕು.

6. ಕಡೆಯಲ್ಲಿ ಮುಂಡವನ್ನು ಬಲಗಡೆಗೆ ತಿರುಚಿ, ಮೇಲೆ ವಿವರಿಸಿದ ಕ್ರಮವನ್ನೇ ಅನುಸರಿಸಿ, ‘ಬಲ’ಕ್ಕೆ ‘ಎಡ’ ‘ಎಡಕ್ಕೆ’ ‘ಬಲ’ ಎಂಬ ಪದಗಳನ್ನ ಳವಡಿಸಿ ಹೀಗೆ ಭಂಗಿಯನ್ನು ಅಷ್ಟೇ ಕಾಲ ಈ ಭಾಗದಲ್ಲಿಯೂ ಅಭ್ಯಸಿಸಬೇಕು.

ಪರಿಣಾಮಗಳು

    ಚೇತನಗೊಳಿಸುವ ಮತ್ತು ಬಲಗೊಳಿಸುವ ಈ ಭಂಗಿಯು ಕೆಳೆ ಹೊಟ್ಟೆಯೊಳಗಿನ ಅಂಗಗಳಿಗೆ ಹೆಚ್ಚು ಹುರುಪು ಕೊಡುತ್ತದೆ. ಮತ್ತು ಅವುಗಳಲ್ಲಿ ರೂಢವಾಗಿರುವ ಮಾಧ್ಯವನ್ನು ತೊಲಗಿಸಲು ಈ ಆಸನಾಭ್ಯಾಸವು ಸಹಕಾರಿಯಾಗಿದೆ. ಅಲ್ಲದೆ ಇದು ಮೂತ್ರಪಿಂಡಗಳ ಕಾರ್ಯಗಳನ್ನು ಕ್ರಮಪಡಿಸುವುದಲ್ಲದೆ ಬೆನ್ನು ಮೂಳೆಯಲ್ಲಿ ತಾರುಣ್ಯವನ್ನು ಮೂಡಿಸುತ್ತದೆ.ಪವನಶಕ್ತಿಯನ್ನು ಹೆಚ್ಚಿಸುತ್ತದೆ ಪಕ್ಕಗಳಿಗೆ ಮುಂಡವನ್ನು ತಿರುಚುವುದರಿಂದ ಬೆನ್ನಮೂಳೆಯ ಭಾಗಗಳಲ್ಲಿ ರಕ್ತ ಪರಿಚಲನೆಯು ಚೆನ್ನಾಗಿ ನಡೆಯು ವಂತಗಿ,ಆ ಮೂಲಕ ಬೆನ್ನುನೋವನ್ನು ಕಳೆಯುತ್ತದೆ. ಇದರ ಜೊತೆಗೆ ವಸ್ತಿಕುಹಲದ ಭಾಗವು ಸೆಳೆತಕ್ಕೆ ಒಳಪಡುವುದರಿಂದ ಆಮ್ಲಜನಕವನ್ನು ಹೊತ್ತುತಂದು ರಕ್ತವುಈ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಹರಿದು, ಅಲ್ಲಿರುವ ಅಂಡರೇತ್ರ  ಗ್ರಂಥಿಗಳು ಅತ್ಯಾವಶ್ಯಕವಾದ ಪೌಷ್ಟಿಕ ವಸ್ತುಗಳನ್ನು ಹೀರಲು ಈ ಆಸನವು ನೆರವಾಗುತ್ತದೆ. ಅಲ್ಲದೆ ಇದು ಪ್ರಾಣಧಾರಣಶಕ್ತಿಯನ್ನು ಹೆಚ್ಚಿಸುತ್ತದೆ, ನಪುಂಸಕತ್ವವನ್ನು ದೂಡುತ್ತದೆ ಮತ್ತು ಇಂದ್ರಿಯಸ್ಖಲನಕ್ಕೆ ತಡೆಯೊಡ್ಡುತ್ತದೆ.