ಮನೆ Uncategorized ಕರ್ನಾಟಕದ 56 ಕಡೆ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ

ಕರ್ನಾಟಕದ 56 ಕಡೆ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ

0

ಬೆಂಗಳೂರು: ಕರ್ನಾಟಕದಾದ್ಯಂತ ಗುರುವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Join Our Whatsapp Group

56 ಕಡೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ. ​​11 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಕೋಲಾರ ತಹಶೀಲ್ದಾರ್​ ವಿಜಿಣ್ಣ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ. ಅತ್ತ ಹಾಸನದಲ್ಲಿ ಗ್ರೇಡ್-1 ಕಾರ್ಯದರ್ಶಿ ಜಗದೀಶ್​ ಮನೆ ಮೇಲೆ ದಾಳಿ ನಡೆದಿದೆ.

ದಾಳಿಯಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಡ್ಯ, ಮೈಸೂರಿನಲ್ಲೂ ಲೋಕಾಯುಕ್ತ ದಾಳಿ

ಮೈಸೂರಿನಲ್ಲಿ ನೀರಾವರಿ ಇಲಾಖೆಯ ಸೂಪರಿಡೆಂಟ್ ಇಂಜಿನಿಯರ್ ಮಹೇಶ್ ಕೆ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಮೈಸೂರಿನ ಜೆಸಿ ನಗರದಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಜತೆಗೆ, ಗೋಕುಲಂ ಕಚೇರಿಯಲ್ಲಿಯೂ ಕಡತಗಳ ಪರಿಶೀಲನೆ ನಡೆಯುತ್ತಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಕಾರ್ಯಾಚರಣೆ ನಡೆದಿದೆ.

ಮಂಡ್ಯದಲ್ಲಿ ನಿವೃತ್ತ ಇಇ ಶಿವರಾಜ್ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ. ಮಂಡ್ಯ ಜಿಲ್ಲೆಯ 3 ಕಡೆ, ಮೈಸೂರಿನ 2 ಕಡೆ ದಾಳಿ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಇಜ್ಜಲಘಟ್ಟದಲ್ಲಿರುವ ಶಿವರಾಜ್​ಗೆ ಸೇರಿದ ಫಾರ್ಮ್​ಹೌಸ್​, ಶಿವರಾಜ್​ ತಂದೆ ಮನೆ, ಜಲ್ಲಿ ಕ್ರಷರ್​​ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಎಸ್​​​ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಹಾಸನದಲ್ಲೂ ಕಾರ್ಯಾಚರಣೆ

ಹಾಸನದಲ್ಲೂ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆ ನಡೆಯುತ್ತಿದೆ. ಗ್ರೇಡ್​​​-1 ಕಾರ್ಯದರ್ಶಿ ಮನೆಗಳ ಮೇಲೆ ದಾಳಿ ನಡೆದಿದೆ. ಗ್ರೇಡ್​​​-1 ಕಾರ್ಯದರ್ಶಿ ಎನ್​ಎಂ ಜಗದೀಶ್​ಗೆ ಸೇರಿದ ಹಾಸನದ ಮನೆ, ಬೆಂಗಳೂರಿನ ಮನೆಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ. ಲೋಕಾಯುಕ್ತ ಡಿವೈಎಸ್​​ಪಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.

ಚಿತ್ರದುರ್ಗದಲ್ಲಿ ನಿವೃತ್ತ ಇಂಜಿನಿಯರ್​​ ಎಂ ರವೀಂದ್ರಗೆ ಸೇರಿದ ಮನೆ, ಫಾರ್ಮ್​ಹೌಸ್​ ಮೇಲೆ ದಾಳಿ ನಡೆದಿದೆ. ಹಿರಿಯೂರು ತಾಲೂಕಿನ ಸೂಗೂರು ಫಾರ್ಮ್​ಹೌಸ್​​ ಮೇಲೆ ದಾಳಿ ನಡೆದಿದೆ. ಜತೆಗೆ, ಐಮಂಗಲ ಬಳಿ ಬಾಟಲಿ ಫ್ಯಾಕ್ಟರಿ ಮೇಲೂ ಲೋಕಾಯುಕ್ತ ಎಸ್ ​ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ನಡೆದಿದೆ.