ಮನೆ ರಾಷ್ಟ್ರೀಯ ದೆಹಲಿ ಅಬಕಾರಿ ನೀತಿ ಹಗರಣ: ಲಂಚದ ಹಣವನ್ನು ಅರವಿಂದ ಕೇಜ್ರಿವಾಲ್‌ ನೇರವಾಗಿ ಬಳಸಿದ್ದಾರೆ- ಇ.ಡಿ

ದೆಹಲಿ ಅಬಕಾರಿ ನೀತಿ ಹಗರಣ: ಲಂಚದ ಹಣವನ್ನು ಅರವಿಂದ ಕೇಜ್ರಿವಾಲ್‌ ನೇರವಾಗಿ ಬಳಸಿದ್ದಾರೆ- ಇ.ಡಿ

0

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಲಂಚದ ರೂಪದಲ್ಲಿ ಪಡೆದ ₹ 100 ಕೋಟಿಯಲ್ಲಿ ಕೆಲ ಭಾಗವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ನೇರವಾಗಿ ಬಳಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಪಟ್ಟಿಯಲ್ಲಿ ತಿಳಿಸಿದೆ.

Join Our Whatsapp Group

ಕೇಜ್ರಿವಾಲ್‌ ಅವರು ಗೋವಾದ ಐಷಾರಾಮಿ ಹೋಟೆಲ್‌ನಲ್ಲಿ ತಂಗಲು ಈ ಹಣ ಬಳಸಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಿದೆ.

ಅಬಕಾರಿ ನೀತಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರವು ‘ಸಚಿವರ ಗುಂಪು’ ರಚಿಸಿದ್ದೇ ಒಂದು ವಂಚನೆಯಾಗಿದೆ. ಅರವಿಂದ ಕೇಜ್ರಿವಾಲ್ ಅವರೇ ಈ ಹಗರಣದ ಮುಖ್ಯ ಸಂಚುಕೋರ. ಸಚಿವರು ಹಾಗೂ ಆಮ್‌ ಆದ್ಮಿ ಪಕ್ಷದ ಮುಖಂಡರು ಹಾಗೂ ಇತರ ಕೆಲವೊಂದಿಗೆ ಕೈಜೋಡಿಸಿ ಈ ಅಕ್ರಮ ಎಸಗಿದ್ದಾರೆ ಎಂದು ಇ.ಡಿ ಸಲ್ಲಿಸಿರುವ 209 ಪುಟಗಳ ಆರೋಪಪಟ್ಟಿಯಲ್ಲಿ ಹೇಳಿದೆ.

ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಕುರಿತ ವಿಶೇಷ ನ್ಯಾಯಾಲಯವು ಪ್ರಾಸಿಕ್ಯೂಷನ್‌ ಮೇ 17ರಂದು ಸಲ್ಲಿಸಿರುವ ದೂರನ್ನು ಮಂಗಳವಾರ ಪರಿಗಣನೆಗೆ ತೆಗೆದುಕೊಂಡಿದ್ದು, ಕೇಜ್ರಿವಾಲ್‌ ಅವರನ್ನು ಜುಲೈ 12ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ವಾರಂಟ್‌ ಜಾರಿ ಮಾಡಿದೆ