ಮನೆ ಕಾನೂನು ವಾಲ್ಮೀಕಿ ಹಗರಣ: ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣನನ್ನು ವಶಕ್ಕೆ ಪಡೆದ ಇಡಿ

ವಾಲ್ಮೀಕಿ ಹಗರಣ: ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣನನ್ನು ವಶಕ್ಕೆ ಪಡೆದ ಇಡಿ

0

ರಾಯಚೂರು: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣ ಸಂಬಂಧ ಕಾಂಗ್ರೆಸ್​ ಶಾಸಕನ ಮಾಜಿ ಆಪ್ತ ಸಹಾಯಕನನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. 

Join Our Whatsapp Group

ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ,  ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಬಸಗೌಡ ದದ್ದಲ್​ ಮಾಜಿ ಆಪ್ತ ಸಹಾಯಕ(ಪಿಎ) ಪಂಪಣ್ಣನನ್ನು ಇಡಿ ಅಧಿಕಾರಿಗಳು ಇಂದು (ಜುಲೈ 11) ವಶಕ್ಕೆ ಪಡೆದುಕೊಂಡಿದ್ದಾರೆ.

ಬಸನಗೌಡ ದದ್ದಲ್​ ನಿವಾಸದ ಮೇಲೆ ದಾಳಿ ಮಾಡಿದ ಬಳಿಕ ಅವರ ಮಾಜಿ ಆಪ್ತ ಸಹಾಯಕರಾಗಿದ್ದ ಪಂಪಣ್ಣ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ನಿನ್ನೆಯಿಂದಲೇ ಪಂಪಣ್ಣ ನಿವಾಸದಲ್ಲಿ ದಾಖಲೆಗಳನ್ನು ಪರಿಶೀನಲೆ ನಡೆಸಿದ್ದಾರೆ.

ಆದರೆ ಬೇರೆ ದಾಖಲೆಗಳು ಪತ್ತೆಯಾಗಿದ್ದರಿಂದ ಸುದೀರ್ಘ 24 ಗಂಟೆಗಳ ಪರಿಶೀಲನೆ ನಂತರ ರಾಯಚೂರಿನ ರಾಯಲ್​ ಫೋರ್ಟ್ ಅಪಾರ್ಟ್ ​ಮೆಂಟ್ ​ನಲ್ಲಿ ಪಂಪಣ್ಣನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ 2 ಬ್ಯಾಗ್ ದಾಖಲೆ ಸಮೇತ ಪಂಪಣ್ಣನನ್ನು ರಾಯಚೂರಿನ ಆಶಾಪುರ ರಸ್ತೆಯಲ್ಲಿರುವ ಬಸನಗೌಡ ದದ್ದಲ್ ನಿವಾಸಕ್ಕೆ ಕರೆದೊಯ್ದಿದ್ದಾರೆ.

ನಿನ್ನೆಯಿಂದಲೇ (ಜುಲೈ 10) ಇಡೀ ಅಧಿಕಾರಿಗಳು, ರಾಯಚೂರು ಮತ್ತು ಬೆಂಗಳೂರಿನಲ್ಲಿರುವ ಬಸನಗೌಡ ದದ್ದಲ್​ ನಿವಾಸದಲ್ಲಿ ದಾಖಲೆಗಳನ್ನು ಪರಿಶೀನಲೆ ನಡೆಸಿದ್ದಾರೆ. ಈ ವೇಳೆ ಒಂದೊಂದೆ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಪಂಪಣ್ಣನನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇಡಿ ಅಧಿಕಾರಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಕ್ಕೆ ಇಡಿ ಅಧಿಕಾರಗಿಳು ಪಂಪಣ್ಣನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಕ್ಷಾಧಾರಗಳನ್ನ ಮುಂದಿಟ್ಟು ಪ್ರಶ್ನಿಸಿದರೂ ನನಗೆ ಗೊತ್ತಿಲ್ಲ ಎನ್ನುವ ಮಾತನೇ ಹೇಳುತ್ತಿದ್ದಾರೆ. ದದ್ದಲ್ ನಿವಾಸದಲ್ಲಿನ ಕೆಲ‌ ದಾಖಲೆಗಳು ಹಾಗೂ ಪಂಪಣ್ಣ ನಿವಾಸದಲ್ಲಿನ ಕೆಲ ದಾಖಲೆಗಳ ಕುರಿತು ಇಡೀ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆದ್ರೆ, ಪಂಪಣ್ಣ ಮಾತ್ರ ಯಾವುದಕ್ಕೂ ಸರಿಯಾಗಿ ಉತ್ತರ ನೀಡುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ದದ್ದಲ್ ನಿವಾಸದಲ್ಲಿ ಇಡಿ ಅಧಿಕಾರಿಗಳು ಪಂಪಣ್ಣಗೆ ಮತ್ತೊಂದು ಸುತ್ತಿನ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.