ಮನೆ ಮನೆ ಮದ್ದು ನೂತಿ ಫಿಶ್ಚುಲಾ

ನೂತಿ ಫಿಶ್ಚುಲಾ

0

1. ವಿಷಮ ದಾರಿ ಸೊಪ್ಪಿನ ಬತ್ತಿ ಹಾಕಬೇಕು.

2. ತಿಗಟಗೇರಿ ಸೊಪ್ಪನ್ನು ಮಜ್ಜಿಗೆಯಲ್ಲಿ ಅರೆದು ಬತ್ತಿ ಹಾಕಬೇಕು.

3. ಈಶ್ವರಿ ಸೊಪ್ಪನ್ನುರಸ ಕರ್ಪೂರದಲ್ಲಿ ಮಿಶ್ರ ಮಾಡಿ ಹೆಚ್ಚಬೇಕು.

 4.ಚಿತ್ರಮೂಲದ ಸೊಪ್ಪನ್ನು ಅರೆದು,ರಸ ಕರ್ಪೂರ, ಆರಕೆ ಕರ್ಪೂರ,ಪಚ್ಚ ಕರ್ಪೂರ, ಇಂಗಳೀಕ,  ತಾಳಕದೊಡನೆ ಬತ್ತಿ ಹಾಕಲು ಗುಣವಾಗುತ್ತದೆ.

5. ಕಣಗಿಲು ಬೇರಿನ ರಸ ಹಚ್ಚುತ್ತಿದ್ದರೆ ನೂತಿ ಹಾರವಾಗುವುದು.

 ಪ್ರದರ ಕುಸುಮರೋಗ:-

1. ವಸಂತ ಕುಸುಮಾಕರ,ಅಭ್ರಕ ಸಿಂಧೂರಗಳನ್ನು ಜೇನಿ ನೋಡನೆ  ಸೇವಿಸುವುದರಿಂದ ಗುಣ ಕಂಡುಬರುವುದು.

2. ಒಂದೆ ಲಗದ ಸ್ವರಸ ಒಂದು ಮಂಡಲ ಸೇವಿಸಿದರೆ ಗುಣ ಕಾಣುವುದು

3. ಶತಾವರಿಯನ್ನು ಹಾಲಿನಲ್ಲಿ ಅರೆದು ಪ್ರತಿದಿನವೂ ಸೇವಿಸುತ್ತಾ ಬರಲು ಬಿಳುಪು, ಕುಸುಮ ರೋಗ ನಿವಾರಣೆ

4. ಗರಿಕೆಯ ಸ್ವರಸವನ್ನು ಜೇನು  ಬೆರೆಸಿ ಸೇವಿಸುತ್ತಾ ಬರಲು ಬಿಳಿ ಸೆರೆಗು ರೋಗ ಗುಣವಾಗುವುದು.

5. ಶಿವಾಜಿ ತುವನ್ನು ಪ್ರತಿದಿನ ಅರ್ಧ ತುಲದಂತೆ  ಜೇನು ತುಪ್ಪದಲ್ಲಿ ಸೇವಿಸುತ್ತಾ ಬರಲು ಕಸುಮ ರೋಗ ಹರ.

6. ಹೆಂಗಸರ ಹೊಟ್ಟೆನೋವಿಗೆ ಬಾಳೆಎಲೆ ಸುಟ್ಟು ಬಸ್ಮ ಕೊಟ್ಟರೆ ಪದರ ರೋಗ ಗುಣವಾಗುವುದು.

7. ಕೆಂಪು ತಂಗಿನ ಹೊಂಬಾಳೆಯ ರಸವನ್ನು ತೆಗೆದು ಹಾಲಿನಲ್ಲಿ ಸೇವಿಸಲು ಬಿಳಿ ಸೆರಗು ಗುಣವಾಗುವುದು.

8. ಪಟಿಕದ ಭಸ್ಮವನ್ನು ಎಳನೀರಿನಲ್ಲಿ ಸೇವಿಸುತ್ತಾ ಬರಲು ಬಿಳಿ ಸೆರಗು ನಿಲ್ಲುವುದು.

9. ಬಿಳಿಗಾರ ಬಸ್ಮವನ್ನು ಎಳ ನೀರಿನಲ್ಲಿ ಸೇವಿಸಲು ಶ್ವೇತ ಪದರ ಗುಣವಾಗುವುದು.

10. ಉತ್ತರಣಿ ಸೊಪ್ಪಿನ ಸ್ಪರಸವನ್ನು ಕಲ್ನಾರು ಕಲ್ಲು ಸಕ್ಕರೆ, ಏಲಕ್ಕಿಯ ಸಂಗಡ ಬೆಳಿಗ್ಗೆ ಸೇವಿಸಲು ಪ್ರದರ ಗುಣವಾಗುವುದು. 

11. ಕರಿಯ ಹತ್ತಿ ಸೊಪ್ಪಿನ ರಸವನ್ನು ಹಾಲಿನಲ್ಲಿ ಹಾಕಿ ಸಕ್ಕರೆ ಬೆರೆಸಿ ಸೇವಿಸುತ್ತಾ ಬರಲು ಶ್ವೇತ ಪ್ರದರ ಮಾಣುವುದು