ಮನೆ ರಾಜ್ಯ ಕರಾಮುವಿಯಲ್ಲಿ ದಲಿತ ನೌಕರರನ್ನು ವಿರೋಧಿಸುತ್ತಿರುವ ಡಿ.ರವಿಶಂಕರ್ ಅವರ ವ್ಯವಸ್ಥಾಪನಾ ಮಂಡಳಿ ಸದಸ್ಯತ್ವ ರದ್ದು ಕೋರಿ ಉನ್ನತ...

ಕರಾಮುವಿಯಲ್ಲಿ ದಲಿತ ನೌಕರರನ್ನು ವಿರೋಧಿಸುತ್ತಿರುವ ಡಿ.ರವಿಶಂಕರ್ ಅವರ ವ್ಯವಸ್ಥಾಪನಾ ಮಂಡಳಿ ಸದಸ್ಯತ್ವ ರದ್ದು ಕೋರಿ ಉನ್ನತ ಶಿಕ್ಷಣ ಸಚಿವರಿಗೆ ಪತ್ರ

0

ಮೈಸೂರು: ಕೆ.ಆರ್ ನಗರ ಶಾಸಕರು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರೂ ಆದ ಡಿ.ರವಿಶಂಕರ್ ಅವರು ಎಸ್ ಸಿ, ಎಸ್ ಟಿ ದಲಿತ ನೌಕರರನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಪತ್ರ ಬರೆಯಲಾಗಿದೆ.

Join Our Whatsapp Group

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ದಿನದಿಂದಲೂ ಇದುವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸ್ವ-ಜಾತಿಯ 150 ಕ್ಕೂ ಹೆಚ್ಚು ಕೆ.ಆರ್ ನಗರ ಕ್ಷೇತ್ರದವರನ್ನು ವಿಶ್ವವಿದ್ಯಾನಿಲಯದ ನೌಕರರಾಗಿ ನೇಮಕ ಮಾಡಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2005-06ನೇ ಸಾಲಿನಿಂದ 2010-11ನೇ ಸಾಲಿನವರೆಗೆ ಕೆಲಸ ಮಾಡಿ 2011-12ನೇ ಸಾಲಿನಿಂದ ವಿವಿಗೆ ಮನವಿ ಹಾಗೂ ನ್ಯಾಯಾಲಯದ ಆದೇಶದಲ್ಲಿ ದಲಿತರು ಹೆಚ್ಚಾಗಿ ಇರುವುದರಿಂದ ದಲಿತರಿಗೆ ಯಾವುದೇ
ಅವಕಾಶ ನೀಡಬಾರದೆಂಬ ಕಾರಣದಿಂದ ಉಚ್ಛ ನ್ಯಾಯಾಲಯ W.P.No 39006/2015 ರ ದಿನಾಂಕ 03-02-2023 ರ ಆದೇಶದಲ್ಲಿ 56 ಮಂದಿಯಲ್ಲಿ 41 ಮಂದಿ ಎಸ್ ಸಿ ಎಸ್ ಸಿ ಇರುವುದರಿಂದ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ.
ಆದೇಶವನ್ನು ಮರುಪರಿಶೀಲನೆ ಮಾಡಲು ಉಚ್ಛ ನ್ಯಾಯಾಲಯದಲ್ಲಿ R P No. 547/2023 ರ ದಿನಾಂಕ:19-06-2024 ರಲ್ಲಿ ಮರುಪರಿಶೀಲನಾ ಅರ್ಜಿ ವಜಾ ಮಾಡಿ 24 ಮಂದಿಗೆ 98,000 ರೂ.ಗಳನ್ನು ತಲಾ 4000 ರೂ.ಗಳನ್ನು ವಿವಿ ನೀಡಬೇಕೆಂದು ಆದೇಶವಾಗಿದ್ದರೂ ಅದನ್ನು ಗಾಳಿಗೆ ತೂರಲಾಗಿದೆ.
ಡಿ.ರವಿಶಂಕರ್ ಅವರ ಅಧಿಕಾರದ ಭಯಕ್ಕೆ ಉಪ ಕುಲಪತಿಗಳಾದ ಶರಣಪ್ಪ ವಿ ಹಲಸೆ ಅವರು ಯಾವುದೇ ಕ್ರಮ ಕೈಗೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ.

ದಲಿತರಿಗೆ ಅನ್ಯಾಯ ಮಾಡುವ ದುರುದ್ದೇಶದಿಂದ ಹಾಗೂ ಸ್ವಜಾತಿಯನ್ನು ವಿವಿಯಲ್ಲಿ ಹೆಚ್ಚು ನೌಕರಿ ಕೊಡಿಸಬೇಕೆಂಬ ಗುರಿ ಹೊಂದಿರುವ ಶಾಸಕ ಡಿ.ರವಿಶಂಕರ್ ಅವರ ವ್ಯವಸ್ಥಾಪನಾ ಮಂಡಳಿ ಸದಸ್ಯತ್ವವನ್ನು ವಜಾ ಮಾಡಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಲಾಗಿದೆ.

ಶಾಸಕರಾಗಿ ಸಂವಿಧಾನ ಸಮಾನತೆಯ ಹಕ್ಕು 14, 15, 16, 17 ಮತ್ತು 18ನೇ ವಿಧಿಗಳನ್ನು ಗಾಳಿಗೆ ತೂರಿ ದಲಿತರ ವಿರೋಧಿ ಕೆಲಸ ಮಾಡುತ್ತಿರುವುದರಿಂದ ಇವರ ಸದಸ್ಯತ್ವ ವಜಾಗೊಳಿಸಬೇಕೆಂದು ಕೋರಲಾಗಿದ್ದು, ಇಲ್ಲವಾದಲ್ಲಿ ರಾಜ್ಯಾದ್ಯಂತ ದಲಿತ ಒಕ್ಕೂಟದಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.