ಮನೆ ಮಾನಸಿಕ ಆರೋಗ್ಯ ಖಿನ್ನತೆ

ಖಿನ್ನತೆ

0

40 ವರ್ಷದ ಲಲಿತಮ್ಮನನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು.ಆಕೆ ಆತ್ಮಹತ್ಯೆ ಮಾಡಿಕೊಳ್ಳಲು 34 ಹೆಚ್ಚು ನಿದ್ರಾ ಗುಳಿಗೆಗಳನ್ನು ನುಂಗಿಬಿಟ್ಟಿದ್ದರು.

Join Our Whatsapp Group

ಆಕೆಯ ಮಗನ ಸೊಸೆಯನ್ನು ವೈದ್ಯರ ವಿಚಾರಿಸಿದಾಗ ಲಲಿತಮ್ಮ ಇತ್ತೀಚೆಗೆ   ಮಂಕಾಗಿ ಯಾವ ಕಾರಣವೂ ಇಲ್ಲದೆ ತಮ್ಮೊಂದಿಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾರೆ ಒಂದೂವರೆ ತಿಂಗಳ ಹಿಂದೆ ಚೆನ್ನಾಗಿದ್ದಕೆ ಕ್ರಮೇಣ ಸರಿಯಾಗಿ ಊಟ ಮಾಡುತ್ತಿಲ್ಲ ಯಾವುದೂ ಬಾಯಿಗೆ ರುಚಿಯಿಲ್ಲ ಎನ್ನುತ್ತಾರೆ ಬೆಳಗಿನ ಜಾವದಲ್ಲೇ ಎದ್ದು ಕುಳಿತು ಅಳುತ್ತಿರುತ್ತಾರೆ. ಮಗಳ ಮನೆಗೆ ಹೋಗುವುದೆಂದರೆ ಬಹಳ ಇಷ್ಟುಪಡುತ್ತಿದ್ದ ಅವರು ಈಗ ಹೋಗಿ ಬನ್ನಿ ಎಂದರೆ ಬೇಡ ವೆನ್ನುತ್ತಾರೆ. ದಿನಕ್ಕೆ ಅನೇಕ ಬಾರಿ ನಾನು ಏನೋ ಪಾಪ ಮಾಡಿದ್ದೇನೆ  ನನಗೆ ಶಿಕ್ಷೆಯಾಗ ಬೇಕು ಎನ್ನುತ್ತಿರುತ್ತಾರೆ ಎಂದು ತಿಳಿಯಿತು.

    ಮಿದುಳಿನಲ್ಲಿ ಆಗುವ ಕೆಲವು ರಾಸಾಯನಿಕ ಬದಲಾವಣೆಗಳಿಂದ ಬರುವ ಈ ಖಿನ್ನತೆಯಿಂದ ವ್ಯಕ್ತಿ ತೀವ್ರವಾಗಿ ನರಳುತ್ತಾನೆ. ಯಾವುದೇ ಹೊರಗಿನ ಕಾರಣವಿಲ್ಲದೆ ಬರುವ ಈ ಖಾಯಿಲೆಯಿಂದ ರೋಗಿಯ ನಳವಳಿಕೆ ಬದಲಾದಾಗ ಮನೆಯವರಿಗೆ ಏಕೆ ಹೀಗೆ ಎನ್ನಿಸುತ್ತದೆ.ಖಿನ್ಯತೆ ನಿರೋಧಕ ಔಷಧಿಗಳಿಂದ,ವಿದ್ಯುತ್ ಕಂಪನ ಚಿಕಿತ್ಸೆಯಿಂದ ಖಿನ್ನತೆ ವಾಸಿಯಾಗುತ್ತದೆ ವೈದ್ಯರ ಸಲಹೆಯಂತೆ ಮಾತ್ರೆಯನ್ನು ಸರಿಯಾಗಿ ಕೊಡಬೇಕು ರೋಗಿಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.