ಮನೆ ಆರೋಗ್ಯ ಡಯಾಬಿಟಿಸ್ : ಭಾಗ ಏಳು

ಡಯಾಬಿಟಿಸ್ : ಭಾಗ ಏಳು

0

ವ್ಯಾಯಾಮದ ಬಗ್ಗೆ ಕೆಲವು ಎಚ್ಚರಿಕೆಗಳು:-

Join Our Whatsapp Group

★ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬಾರದು.

 ★ವ್ಯಾಯಾಮವನ್ನು ಒಂದೇ ಬಾರಿಗೆ ಹೆಚ್ಚು ಸಮಯ ಮಾಡಬಾರದು ನಿಧಾನವಾಗಿ ಹೆಚ್ಚಿಸುತ್ತಾ ಹೋಗಬೇಕು.

 ★ಇಷ್ಟ ಬಂದಾಗಲೆಲ್ಲ ಮಾಡದೆ ಕ್ರಮಬದ್ಧವಾಗಿ ವ್ಯಾಯಾಮ ಮಾಡಬೇಕು.

 ★ಎಲ್ಲಕ್ಕಿಂತಲೂ ಉತ್ತಮವಾದ ವ್ಯಾಯಾಮ ವೇಗದ ನಡಿಗೆ.

 ★ತೂಕ  ಎತ್ತುವಂತಹ ವ್ಯಾಯಾಮ ಮಾಡಬಾರದು.

 ★ಇನ್ಸುಲಿನ್ ಬಳಸುತ್ತಿದ್ದಲ್ಲಿ ಡಾಕ್ಟರ್ ಸಲಹೆಯ ಮೇರೆಗೆ ಮಾತ್ರವೇ ವ್ಯಾಯಾಮ ಮಾಡಬೇಕು .

 ಹೆಚ್ಚಾಗಿ ತೆಗೆದುಕೊಳ್ಳಬಹುದು ತರಕಾರಿಗಳು

    ಕುಂಬಳ, ತೊಂಡೆಕಾಯಿ,ಬದನೆಕಾಯಿ, ಪಾರಂಗಿ,ಕೋಸು ಬೆಂಗಳೂರು ಬದನೆ, ಸೋರೆಕಾಯಿ ಆಲೂಗಡ್ಡೆ, ಸೊಪ್ಪು ತರಕಾರಿಗಳು, ಹಾಗಲ, ಪಡವಳ, ಬೆಂಡೆ, ಈರುಳ್ಳಿ,ಟೊಮೇಟೊ, ಬಿಳಿ ಮೂಲಂಗಿ, ಕಾಲಿ ಫ್ಲವರ್, ಹೀರೆ, ಬೆಳ್ಳುಳ್ಳಿ ಮೊದಲಾದವನ್ನು ಹೆಚ್ಚಾಗಿ ತೆಗೆದುಕೊಳ್ಳಬಹುದು.

 ಪೂರ್ತಿಯಾಗಿ ನಿಲ್ಲಿಸಬೇಕಾದ ಆಹಾರಗಳು 

 ಸಕ್ಕರೆ,ಜೇನು  ಗ್ಲುಕೋಸ್  ಸಿಹಿ ತಿಂಡಿಗಳು.  ಗೋಡಂಬಿ, ಬಾದಾಮಿ, ಪಿಸ್ತಾ ಒಣ ದ್ರಾಕ್ಷಿ , ಎಳನೀರು, ಎಳತಂಗಿನಕಾಯಿ.   ತಂಪು ಪಾನೀಯಗಳು, ಆಲ್ಕೋಹಾಲ್ ಮಾದಕ ಪಾನೀಯಗಳು ಹಾರ್ಲಿಕ್ಸ್,ಬೂಸ್ಟ್,ಕಂಪ್ಲಾನ್ ತರಹದವು.  ಬಾಳೆಹಣ್ಣು, ಮಾವು, ಹಲಸು, ಸಪೋಟಾ, ದ್ರಾಕ್ಷಿ,ಸೀತಾಫಲ, ಮೈದಾ ಕೇಕ್ ಗಳು, ಗ್ಲುಕೋಸ್ ಬಿಸ್ಕತ್ತುಗಳಂತಹವು.   ಸಿಹಿಗೆಣಸಿನಂತಹ ಕಂದ ಗಡ್ಡೆ ತರಕಾರಿಗಳು.  ತುಪ್ಪ ಬೆಣ್ಣೆ ಕೊಬ್ಬರಿ ಎಣ್ಣೆ, ಪಾಮೋಲಿನ್ ಇತ್ಯಾದಿ.