ಮನೆ ರಾಜ್ಯ ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ: ಹೆಚ್​ ಡಿ ರೇವಣ್ಣ

ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ: ಹೆಚ್​ ಡಿ ರೇವಣ್ಣ

0

ಬೆಂಗಳೂರು: ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ. ನಾನು ವಹಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ ಎಂದು ವಿಧಾನಸಭೆಯಲ್ಲಿ ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.

Join Our Whatsapp Group

ನನ್ನ ಮೇಲೆ ಯಾರೋ ಆರೋಪ ಮಾಡ್ತಿದ್ದಾರೆ. ಹೆಣ್ಣು ಮಗಳನ್ನು ಕರೆದುಕೊಂಡು ಬಂದು ಡಿಜಿ ಕಚೇರಿಯಲ್ಲಿ ಡಿಜಿ ದೂರು ಬರೆಸಿಕೊಳ್ಳುತ್ತಾನೆ ಅಂದರೆ ಅವನು ಡಿಜಿ ಆಗಲು ಲಾಯಕ್ಕಾ? ಎಂದು ಸದನದಲ್ಲಿ ಗದ್ಗದಿತರಾದಂತಾಗಿ ಏರುಧ್ವನಿಯಲ್ಲಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಬಹಳ ಅನ್ಯಾಯ ಆಗಿದ್ದರೆ ನೊಟೀಸ್ ಕೊಡಿಸಿ ಚರ್ಚೆ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ವಿಧಾನಸಭೆಯುಲ್ಲಿ ಪ್ರಸ್ತಾಪ ಮಾಡಿದ ವಿರೋಧ ಪಕ್ಷದ ನಾಯಕ ಅಶೋಕ್, ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಬಗ್ಗೆ ಉಲ್ಲೇಖಿಸಿದರು. ವಾಲ್ಮೀಕಿ ನಿಗಮ ಕೇಸ್​ನಲ್ಲಿ ನೋಟಿಸ್ ಕೊಟ್ಟು ಕರೆದೇ ಇಲ್ಲ. ರೇವಣ್ಣ, ಭವಾನಿ ಪ್ರಕರಣದಲ್ಲಿ ಎಸ್​ಐಟಿ ತುಂಬಾ ಸ್ಟ್ರಾಂಗ್​ ಇದ್ರು. ಎಷ್ಟು ಸ್ಟ್ರಾಂಗ್ ಅಂದರೆ ಎರಡೇ ದಿನದಲ್ಲಿ ಅರೆಸ್ಟ್​ ಮಾಡಿದರು. ಮಾಜಿ ಶಾಸಕ ಪ್ರೀತಂಗೌಡ ಕೇಸ್​ನಲ್ಲೂ ಹಾಗೆ ಆಯಿತು. ವಾಲ್ಮೀಕಿ ನಿಗಮ ಕೇಸ್​ನಲ್ಲಿ ಇನ್ನೂ ನೋಟಿಸ್ ಸಹ ಕೊಟ್ಟಿಲ್ಲ. ಎಸ್​ಐಟಿ ಕಚೇರಿಯಲ್ಲಿ 8 ಗಂಟೆಗಳ ಕಾಲ ಕೂರಿಸಿದ್ದರು. ಏನು ವಾಲ್ಮೀಕಿ ರಾಮಾಯಣ ಓದಲು ಕೂರಿಸಿದ್ದರಾ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಪ್ರಶ್ನೆ ಮಾಡಿದರು.

ಇದೇ ವೇಳೆ ಮಾತನಾಡಿದ ಶಾಸಕ ಹೆಚ್.ಡಿ.ರೇವಣ್ಣ ಬಂಧನದ ಬಗ್ಗೆ ಉಲ್ಲೇಖಿಸಿದ ಅಶೋಕ್, ಹಾಗಾದರೆ ರೇವಣ್ಣ ಪ್ರಕರಣ ಇದಕ್ಕಿಂತ ಕಡಿಮೆಯಾ? ಎಂದು ಪ್ರಶ್ನೆ ಮಾಡಿದರು. ಈ ಪ್ರಕರಣ ಇಡೀ ಪ್ರಪಂಚಕ್ಕೆ ಮುಜುಗರ ಆಗಿದೆ ಎಂದು ಸದನದಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹೇಳಿದರು.