ಮನೆ ಆರೋಗ್ಯ ಕೀಟೋ ಅಸಿಡೋಸಿಸ್

ಕೀಟೋ ಅಸಿಡೋಸಿಸ್

0

ಶರೀರದಲ್ಲಿ ಸಾಕಷ್ಟು ಇನ್ಸುಲಿನ್  ಇರದಿರುವುದು, ಇಲ್ಲವೇ ಶರೀರ ತನ್ನಲ್ಲಿರುವ ಇನ್ಸುಲಿನನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾರದೆ ಹೋಗುವುದು ಇವೆರಡರಲ್ಲಿ ಯಾವುದು ಸಂಭವಿಸಿದರೂ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತದೆ.

Join Our Whatsapp Group

ಹೀಗೆ ಗ್ಲೂಕೋಸ್ ಅಧಿಕ ಪ್ರಮಾಣದಲ್ಲಿ ರಕ್ತದ ಮೂಲಕ, ಇಡೀ ಶರೀರದಲ್ಲಿ ಎಲ್ಲ ಅವಯವಗಳಿಗೂ ಹರಿಯುತ್ತದೆ.

ಯಾವ ಕಾರಣದಿಂದಲಾದರೂ, ಗ್ಲೂಕೋಸ್ ಪ್ರಮಾಣ ರಕ್ತದಲ್ಲಿ ಹುಟ್ಟಿದಾಗ, ಮುತ್ರ ಪಿಂಡಗಳು ಹೆಚ್ಚುವರಿ ಗ್ಲೂಕೋಸನ್ನು   ಮೂತ್ರದ ಮೂಲಕ ಹೊರ ಹಾಕುತ್ತವೆ.ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾದಷ್ಟು ಮೂತ್ರಪಿಂಡಗಳು ಕೂಡಾ ಅಷ್ಟೇ ಚೆನ್ನಾಗಿ ಮೂತ್ರವನ್ನು ಉತ್ಪಾದಿಸುತ್ತವೆ.

 ರಕ್ತ ಮತ್ತು ಮೂತ್ರದಿಂದ ಕೀಟೋನ್ಸ್

ರಕ್ತದಲ್ಲಿನ ಗ್ಲೂಕೋಸನ್ನು ಶರೀರ   ಬಳಸಿಕೊಳ್ಳಲಾರದೇ ಹೋದಾಗ, ತನಗೆ ಅಗತ್ಯವಾದ ಶಕ್ತಿ Energy ಗಾಗಿ ಶರೀರ ಬೇರೆ ದಾರಿಗಳನ್ನು ಹುಡುಕುತ್ತದೆ.ಆಗ ಅದಕ್ಕೆ ಶರೀರದ ಕಣಗಳಲ್ಲಿರುವ ಕೊಬ್ಬು Fat ನೆನಪಾಗುತ್ತದೆ.

   ★ನಾವು ತಿಂದ ಆಹಾರದಲ್ಲಿನ Fat, Fatt Acids ಮೀಸಲು ಇಂಧನವಾಗಿ ಮಾರ್ಪಟ್ಟು,  ಶರೀರ ಕಣಗಳಲ್ಲಿ ಸಂಗ್ರಹವಾಗುತ್ತದೆ.

     ★  ಶರೀರ ಕಣಗಳಲ್ಲಿನ ಈ ಕೊಬ್ಬನ್ನು ಶಕ್ತಿಯಾಗಿ ಉಪಯೋಗಿಸಿಕೊಳ್ಳುವ ಸಂದರ್ಭಗಳಲ್ಲಿ ಪದಾರ್ಥಗಳು ಕೀಟೋನ್ಸ್ Ketones ಎಂಬ ಪದಾರ್ಥಗಳು ತಯಾರಾಗಿ, ಅವು  ರಕ್ತದಲ್ಲಿ ಹರಡಿ, ನಂತರ ಮೂತ್ರದೊಳಕ್ಕೆ ಹರಿಯುತ್ತವೆ.

    ★ ರಕ್ತದಲ್ಲಿ ಗ್ಲೂಕೋಸ್ ಅಧಿಕವಾದಂತೆಯೇ ಮೂತ್ರದಲ್ಲಿನ ಕೀಟೋನ್ಸ್ ಅಧಿಕವಾದಾಗ ಕೂಡಾ, ಮೂತ್ರ ವಿಸರ್ಜನೆ ಹೆಚ್ಚಾಗಿ ನಡೆದು,ಶರೀರದಲ್ಲಿ ನೀರಿನ ಕೊರತೆ Loss of Body Fluids ಉಂಟಾಗುತ್ತದೆ.ಇದರಿಂದ ರಕ್ತ ಆಮ್ಲಪೂರಿತವಾಗುತ್ತದೆ. ಈ ಪರಿಸ್ಥಿತಿಯನ್ನು ಕೀಟೋ ಅಸಿಡೋಸಿಸ್  Keto Acidosis ಎನ್ನುವರು.

    ★ ರಕ್ತದಲ್ಲಿ ಏರ್ಪಡಿಸುವ ಈ, ketones ಎಂಬ ಪದಾರ್ಥಗಳು ಬಹಳ ವಿಷಪೂರಿತವಾದವು. ಇವುಗಳು ಪ್ರಭಾವದಿಂದ ಮಿದುಳು ಕಣಗಳಲ್ಲಿ ಊತ ಪ್ರಜ್ಞೆ ಕಳೆದುಕೊಳ್ಳುವುದೂ, ಕೋಮದಂಥ ಪರಿಣಾಮಗಳಾಗಬಹುದು.

      ★ಕೀಟೋ ಅಶೋ ಅಸಿಡೋಸಿಸ್ಟ್ ನ್ನು ಅನುಕೂಲಕ್ಕಾಗಿ ಸರಳವಾಗಿ ಅಸಿಡೋಸಿಸ್ ಎಂದೂ ಸಹ ಕರೆಯುತ್ತಾರೆ. ಪರಿಸ್ಥಿತಿಯ ಕಾರಣದಿಂದಾಗಿ ಕೋಮಾಗೆ ಹೋಗುವುದನ್ನು ಡಯಾಬಿಟಿಕ್ ಕೋಮಾ Diabetic Coma ಎನ್ನುತ್ತಾರೆ.

      ★ಡಯಾಬಿಟಿಕ್ ಕೋಮಾಗೆ  ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೆ ಹೋದರೆ,ಆ ಮನುಷ್ಯ ಸಾಯಲೂಬಹುದು. ಡಯಾಬಿಟೀಸ್ ನ್ನು ಆಗಿಂದಾಗ ನಿಯಂತ್ರಣದಲ್ಲಿ ಇಟ್ಟುಕೊಳ್ಳುವವರಿಗೆ ಅಪಾಯ ಅಷ್ಟಗಿ ಇರದು.