ಮನೆ ಉದ್ಯೋಗ ಜರ್ಮನಿಯಲ್ಲಿ ನರ್ಸಿಂಗ್ ಉದ್ಯೋಗಾವಕಾಶ: ಶಿವಮೊಗ್ಗ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಅವಕಾಶ

ಜರ್ಮನಿಯಲ್ಲಿ ನರ್ಸಿಂಗ್ ಉದ್ಯೋಗಾವಕಾಶ: ಶಿವಮೊಗ್ಗ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಅವಕಾಶ

0

ಶಿವಮೊಗ್ಗ: ಜರ್ಮನಿ ದೇಶದಲ್ಲಿ ನರ್ಸ್​ ಆಗಿ ಕಾರ್ಯ ನಿರ್ವಹಿಸಿ, ಅಲ್ಲಿಯೇ ಉದ್ಯೋಗ ಕಂಡುಕೊಳ್ಳುವ ಅವಕಾಶವನ್ನು ಮೇ. ಟ್ಯಾಲೆಂಟ್​ ಆರಂಜ್​ ಸಂಸ್ಥೆ ನೀಡಿದೆ.

Join Our Whatsapp Group

ಜರ್ಮನಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಿವಮೊಗ್ಗದಲ್ಲಿರುವ ಮೇ. ಟ್ಯಾಲೆಂಟ್ ಆರಂಜ್ ಸಂಸ್ಥೆಯು ಬಿಎಸ್ಸಿ/ ಜಿಎನ್‍ಎಂ ವಿದ್ಯಾರ್ಹತೆ ಹೊಂದಿರುವ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಯ್ಕೆಗೊಂಡ ಅಭ್ಯರ್ಥಿಗಳು ಜರ್ಮನಿಯಲ್ಲಿ ಉದ್ಯೋಗ ಕಲ್ಪಿಸಲು ಮುಂದಾಗಿದೆ. ಈ ಹುದ್ದೆಯಲ್ಲಿ ಆಸಕ್ತ ಅಭ್ಯರ್ಥಿಗಳು ಜಿಲ್ಲೆಯ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಮೇ. ಟ್ಯಾಲೆಂಟ್ ಆರಂಜ್ ಸಂಸ್ಥೆಯು ಕರ್ನಾಟಕ ರಾಜ್ಯದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಸಂಪರ್ಕಿಸಿದ್ದು, ಸೂಕ್ತ ವಿದ್ಯಾರ್ಹತೆ ಹೊಂದಿರುವ ನರ್ಸಿಂಗ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಉದ್ಯೋಗಕ್ಕೆ ಆಯ್ಕೆಗೊಂಡ ಅಭ್ಯರ್ಥಿಗಳು ಜರ್ಮನಿಯಲ್ಲಿ ಸಂವಹನ ಸಮಸ್ಯೆ ಎದುರಾಗದಂತೆ ಇರಲು ಕೇರಳ ರಾಜ್ಯದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ಜರ್ಮನ್ ಭಾಷೆಯ ಬಗ್ಗೆ ತರಬೇತಿ ನೀಡಲಿದೆ. ಈ ಸಂದರ್ಭದಲ್ಲಿ ಉಚಿತ ಊಟ, ವಸತಿ ಸೌಲಭ್ಯ ನೀಡುವುದರ ಜೊತೆ ಪ್ರಯಾಣ ವ್ಯವಸ್ಥೆಯನ್ನು ಒದಗಿಸಲಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತೀಯ ನರ್ಸಿಂಗ್ ಲೈಸೆನ್ಸ್ ಹೊಂದಿದ್ದು, ಹೊಸಬರು/ ಅನುಭವವುಳ್ಳ 38 ವರ್ಷದೊಳಗಿನ ಮಹಿಳೆಯರು/ಪುರುಷರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಆಯ್ಕೆಗೊಂಡವರಲ್ಲಿ ಚಿಕ್ಕ ಮಕ್ಕಳ ಪೋಷಕರು ಅವರನ್ನು ಜರ್ಮನಿಗೆ ಕರೆದೊಯ್ಯುವ ಸೌಲಭ್ಯ ಹೊಂದಿಲ್ಲ.

ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕಾರ್ಮಿಕ ಅಧಿಕಾರಿಗಳ ಕಚೇರಿ, ಉಪವಿಭಾಗ, 2ನೇ ಮಹಡಿ, ವಾಣಿಜ್ಯ ಸಂಕೀರ್ಣ, ಸೂಡಾ ಕಾಂಪ್ಲೇಕ್ಸ್, ಪೊಲೀಸ್ ಚೌಕಿ, ವಿನೋಬನಗರ, ಶಿವಮೊಗ್ಗ. ಇಲ್ಲಿ ನೋಂದಾಯಿಸಿಕೊಳ್ಳುವಂತೆ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :08182-248940 ನ್ನು ಸಂಪರ್ಕಿಸಬಹುದು.