ಮನೆ ಸ್ಥಳೀಯ ನಂಜನಗೂಡು 16 ಕಾಲು ಮಂಟಪ ಮುಳುಗಡೆ: ಸ್ಥಾನ ಘಟ್ಟಕ್ಕೆ ಇಳಿಯದಂತೆ ಸೂಚನೆ

ನಂಜನಗೂಡು 16 ಕಾಲು ಮಂಟಪ ಮುಳುಗಡೆ: ಸ್ಥಾನ ಘಟ್ಟಕ್ಕೆ ಇಳಿಯದಂತೆ ಸೂಚನೆ

0

ನಂಜನಗೂಡು : ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನೀರು ಕಬಿನಿ ಜಲಾಶಯಕ್ಕೆ ಬರುತ್ತಿರುವುದರಿಂದ ಜಲಾಶಯ ತುಂಬಿ ಹೆಚ್ಚಿನ ನೀರನ್ನು ಕಪಿಲಾ ನದಿಗೆ ಬಿಡಲಾಗುತ್ತಿದೆ.
ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಕಪಿಲಾ ನದಿಯ ಸ್ಥಾನಘಟ್ಟಕ್ಕೆ ತೆರಳದಂತೆ ತಾಲೂಕು ಆಡಳಿತ ಆದೇಶದ ಮೇರೆಗೆ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

Join Our Whatsapp Group

ದೇವಾಲಯ ವತಿಯಿಂದ ಬೆಳಗ್ಗೆಯಿಂದ ಸಂಜೆವರೆಗೂ ಧ್ವನಿ ವರ್ಧಕದ ಮೂಲಕ ಯಾರು ಕೂಡ ಕಪಿಲಾ ನದಿಯಲ್ಲಿ ಸ್ಥಾನ ಮಾಡದಂತೆ ಹಾಗೂ ಕಪಿಲಾ ನದಿಯ ಹತ್ತಿರ ತೆರಳದಂತೆ ಮಾಹಿತಿ ನೀಡುತ್ತಿದ್ದಾರೆ. ನದಿ ಬಳಿ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಸ್ಥಳದಲ್ಲಿ ಸೆಕ್ಯೂರಿಟಿ ಗಾರ್ಡ್ ಕೂಡ ನೇಮಿಸಲಾಗಿದೆ. ಮೈಸೂರು-ನಂಜನಗೂಡು ಮುಖ್ಯ ರಸ್ತೆಯ ೧೦೦ ವರ್ಷಗಳ ಹಳೆಯ ದೇವರಾಜ ಅರಸು ಸೇತುವೆ ತುತ್ತ ತುದಿಯಲ್ಲಿ ಭಾರಿ ಪ್ರಮಾಣದ ಪ್ರವಾದ ನೀರು ಹರಿಯತೊಡಗಿದೆ.

ಈಗಾಗಲೇ ಕಬಿನಿ ನಾಲೆಯಿಂದ ಕಪಿಲ ನದಿಗೆ ಒಟ್ಟಾರೆಯಾಗಿ ೩೬,೦೦೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗಿದೆ. ನಂಜನಗೂಡು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯ, ನಂಜುಂಡೇಶ್ವರ ದೇವಾಲಯದ ಸ್ಥಾನದ ಘಟ್ಟ, ೧೬ ಕಾಲು ಮಂಟಪ ಶೇಕಡ ೯೦ರಷ್ಟು ಮುಳುಗಡೆಯಾಗಿದೆ.

ದೇವಾಲಯದ ಹಿಂಬದಿಯಲ್ಲಿರುವ ತಗ್ಗು ಪ್ರದೇಶಗಳಾದ ತೋಪಿನ ಬೀದಿ, ಒಕ್ಕಲಗೇರಿ, ಹಳ್ಳದ ಕೇರಿ, ರಾಯರ ಮಠ ಸೇರಿದಂತೆ ಸಾಕಷ್ಟು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ ನಂಜನಗೂಡಿನ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತಗ್ಗು ಪ್ರದೇಶದ ಜನವಸತಿ ಪ್ರದೇಶಕ್ಕೆ ತೆರಳಿ ಈಗಾಗಲೇ ಎಚ್ಚರಿಕೆಯ ಸಂದೇಶಗಳನ್ನು ನೀಡಿದ್ದಾರೆ.