ಮನೆ ಮನೆ ಮದ್ದು ಬಾಯಿ ಹುಣ್ಣು

ಬಾಯಿ ಹುಣ್ಣು

0

1. ಮಾಚಿಕಾಯಿ ಗಂಧ ತೇಯ್ದು ನಾಲಿಗೆಗೆ ಸವರಿದರೆ ಬಾಯಿಯಿಂದ ಕೆಟ್ಟ ನೀರು ಸುರಿದು ಬಾಯಿಹುಣ್ಣು ಮಾಯವುದು.ಹೀಗೆ ಮೂರು ನಾಲ್ಕು ಸಾರಿ ಮಾಡಬೇಕು.

Join Our Whatsapp Group

2. ಗ್ಲಿಸರಿನ್ ಬಾಯಿಗೆ ಹಚ್ಚುವುದರಿಂದ ಬಾಯಿ ಹುಣ್ಣು ಗುಣವಾಗುವುದು. ಹೀಗೆ ಒಂದು ದಿನಕ್ಕೆ ಐದು ಸಾರಿ ಮಾಡಬೇಕು.

3. ಬಾಯಿ ಹುಣ್ಣಿಗೆ ಜೇನುತುಪ್ಪವನ್ನು ದಿನಕ್ಕೆ 4 5 ಸಾರಿ ಸವರುತ್ತಾ ಇದ್ದರೆ ಬಾಯಿ ಹುಣ್ಣು ಗುಣವಾಗುವುದು.

4. ಹುಚ್ಚ ಕೊತ್ತಂಬರಿ ಸೊಪ್ಪನ್ನು ತೊಳೆದು, ಬಾಯಿಯಲ್ಲಿ ಹಾಕಿಕೊಂಡು ಆಗಿಯುತ್ತಾ ಐದು ನಿಮಿಷ ಕಾಲ ಕಳೆದರೆ ಬಾಯಿ ಹುಣ್ಣು, ಹಲ್ಲು ನೋವು ಬಾಯಿ ವಾಸನೆ ನಿವಾರಣೆಯಾಗುವುದು.

5. ಪುದೀನಾ ಸೊಪ್ಪುನ್ನು ತೊಳೆದು ಬಾಯಿಗೆ ಹಾಕಿಕೊಂಡು ಅಗಿಯುತ್ತಾ ರಸವನ್ನು ನುಂಗುತ್ತಿದ್ದರೆ ಬಾಯಿ ಹುಣ್ಣು ಬಾಯಿ ವಾಸನೆ ಹಲ್ಲುನೋವು ವಸಡು ನೋವು ನಿವಾರಣೆ ಆಗುವುದು.

6. ಕೊತ್ತಂಬರಿ ಸೊಪ್ಪನ್ನು ಬಾಯಿಗೆ ಹಾಕಿಕೊಂಡು ಆಗಿದು. ಸೇವಿಸುತ್ತಿದ್ದರೆ ಬಾಯಿಹುಣ್ಣು, ಹಲ್ಲುನೋವು, ಬಾಯಿ ವಾಸನೆ ಗುಣವಾಗುವುದು.

7. ಬಸಳೇಸೊಪ್ಪನ್ನು ತೊಳೆದು, ತಿನ್ನುವುದರಿಂದ ಬಾಯಿ ಹುಣ್ಣು ಗುಣವಾಗುವುದು.

8. ಶಾವಂತಿಗೆ ಸೊಪ್ಪನ್ನು ಆಗಿದು, ಉಗುಳುವುದರಿಂದ ಬಾಯಿ ಹುಣ್ಣು ಗುಣವಾಗುವುದು.

9. ಮುರುಗವನ್ನು ಕುಡಿ ಕುಡಿಯಾಗಿ ಸಂಗ್ರಹಿಸಿ, ಬಾಯಿಗೆ ಹಾಕಿಕೊಂಡು ಅಗಿಯುತ್ತಾ  ನಂತರ ಉಗುಳಿದರೆ ಬಾಯಿಹುಣ್ಣು ಗುಣವಾಗುವುದು.

10. ಪ್ರತಿದಿನವೂ ಮೇಕೆ ಹಾಲನ್ನು ಕುಡಿಯುತ್ತಾ ಬಂದರೆ ಅಥವಾ ನೊರೆ ಹಾಲನ್ನು ಕುಡಿದರೆ ಬಾಯಿಹುಣ್ಣು ಗುಣವಾಗುವುದು

11. ಕೆಂಪು ಗಣಿಕೆ ಸೊಪ್ಪಿನ್ನಾಗಲಿ ಕರಿಗಣಿಕೆ ಸೊಪ್ಪಿನ್ನಾಗಲಿ ಬೇಯಿಸಿ,ತಿನ್ನುತ್ತಿದ್ದರೆ ಬಾಯಿ ಹುಣ್ಣು ಗುಣವಾಗುವುದು

12. ಸಬ್ಬಸ್ಸಿಗೆ ಸೊಪ್ಪಿನ ಹುಳಿ ಮಾಡಿಸಿ ಸೇವಿಸುತ್ತಿದ್ದರೆ ಬಾಯಿ ಹುಣ್ಣು ಮಾಯುವುದು.

13. ಗಸಗಸೆ, ಒಣಕೊಬ್ಬರಿ ಸೇರಿಸಿ ಪಾಯಸ ಮಾಡಿ ಕುಡಿದರೆ ಬಾಯಿ ಹುಣ್ಣುಗುಣವಾಗುವುದು.

14. ಹೆಸರುಕಾಳಿನ ಪಾಯಸ ಮಾಡಿ, ಕುಡಿದರೆ ಬಾಯಿ ಹುಣ್ಣು ಗುಣವಾಗುವುದು.

15. ಮೊಳಕೆ ಬಂದ ಕಾಳನ್ನು ಕೋಸಂಬರಿ ಮಾಡಿ ಸೇವಿಸುವುದರಿಂದ ಬಾಯಿ ಹುಣ್ಣು ಗುಣವಾಗುವುದು.

16. ಈರುಳ್ಳಿಯನ್ನು ಅರೆದು ವಸಡಿಗೆ ಲೇಪಿಸುವುದರಿಂದ ವಸಡಿನಲ್ಲಿ ಆಗುವ ರಕ್ತಸ್ರಾವ ನಿಂತುಹೋಗುವುದು.ಪ್ರತಿ ದಿವಸ ಟೆಮೋಟೋ ಹಣ್ಣನ್ನು ಸೇವಿಸುವುದರಿಂದ ಬಾಯಿ ಹುಣ್ಣು ಗುಣವಾಗುವುದು

17. ದಾಳಿಂಬೆ ಹಣ್ಣಿನ ಮೇಲಿನ ಸಿಪ್ಪೆಯ ಕಷಾಯ ಮಾಡಿ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿ ಹುಣ್ಣು ಗುಣವಾಗುವುದು

18. ಸೇಬು, ಕಿತ್ತಲೆ,ಮೋಸಂಬಿ, ಅನಾನಸ್, ಮಾವಿನ ಹಣ್ಣು, ಬಾಳೆಹಣ್ಣು ಮುಂತಾದ ಎಲ್ಲಾ ಹಣ್ಣುಗಳ ರಸವನ್ನು ಪ್ರತ್ಯೇಕವಾಗಿ ತಯಾರಿಸಿ ಸೇವಿಸುವುದರಿಂದ ಅಥವಾ ಹಣ್ಣುಗಳನ್ನು ತಿನ್ನುವುದರಿಂದ ಬಾಯಿ ಹುಣ್ಣು ಮಾಯುವುದು.

19. ಅನ್ನದ ಗಂಜಿಗೆ ಸಕ್ಕರೆ ಬೆರೆಸಿ,ಕುಡಿಯಲು ಬಾಯಿ ಹುಣ್ಣು ಗುಣವಾಗುವುದು.

20. ರಾಗಿ ಹಿಟ್ಟನ್ನು ನೀರಿನಲ್ಲಿ ಕದಡಿ ಕಂಜಿ ಮಾಡಿ ಕುಡಿದರೆ ಬಾಯಿ ಹುಣ್ಣು ನಿವಾರಣೆಯಾಗುವುದು.