ಮನೆ ರಾಜಕೀಯ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಸಿಎಂ, ಡಿಸಿಎಂ ಹೆಸರು ಹೇಳುವಂತೆ ಇಡಿ ಒತ್ತಡ- ಐವರು ಸಚಿವರ...

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಸಿಎಂ, ಡಿಸಿಎಂ ಹೆಸರು ಹೇಳುವಂತೆ ಇಡಿ ಒತ್ತಡ- ಐವರು ಸಚಿವರ ಆರೋಪ

0

ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಿಎಂ, ಡಿಸಿಎಂ ಸೇರಿದಂತೆ ಸಚಿವರುಗಳ ಹೆಸರು ಹೇಳುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಐವರು ಸಚಿವರು ಗಂಭೀರ ಆರೋಪ ಮಾಡಿದ್ದಾರೆ.

Join Our Whatsapp Group

ವಿಧಾನಸೌಧದಲ್ಲಿ ಇಂದು ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ, ದಿನೇಶ್​​ ಗುಂಡೂರಾವ್​​, ಪ್ರಿಯಾಂಕ್ ಖರ್ಗೆ ಮತ್ತು ಸಂತೋಷ್​ ಲಾಡ್​ ಸುದ್ದಿಗೋಷ್ಟಿ ಉದ್ದೇಶಿಸಿ ಕೇಂದ್ರ ಸರ್ಕಾರ ಹಾಗು ಇಡಿ ವಿರುದ್ಧ ವಾಗ್ದಾಳಿ ನಡೆಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ, ಡಿಸಿಎಂ, ಸಚಿವರುಗಳ ಹೆಸರನ್ನು ಹೇಳಿ. ನಾವು ನಿಮ್ಮನ್ನು ಕಾನೂನಾತ್ಮಕವಾಗಿ ರಕ್ಷಿಸುತ್ತೇವೆ ಎಂದು ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

ಭೋವಿ ಅಭಿವೃದ್ಧಿ ನಿಗಮ, ಅಂಬೇಡ್ಕರ್​ ನಿಗಮದಲ್ಲಿ ನಡೆದ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಆಗಿದೆ. ಕೋವಿಡ್​ ಅಕ್ರಮದ ಬಗ್ಗೆ ಏಕೆ ತನಿಖೆ ಮಾಡಿಲ್ಲ?. ವಿರೋಧ ಪಕ್ಷದಲ್ಲಿದ್ದಾಗ ಕೇಸ್ ಹಾಕುತ್ತಾರೆ. ಬಿಜೆಪಿಗೆ ಬಂದರೆ ಅವರಿಗೆ ಕ್ಲೀನ್‌ಚಿಟ್ ನೀಡಲಾಗುತ್ತದೆ. ಐಟಿ, ಇಡಿ, ಸಿಬಿಐ ಬಳಸಿಕೊಂಡು ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ವಿರೋಧ ಪಕ್ಷದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇಡಿಯನ್ನು ಬಳಸಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ‌ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ವಾಲ್ಮೀಕಿ ನಿಗಮ ಹಗರಣದ ತನಿಖೆ ನಡೆಸಲಾಗುತ್ತದೆ. ತನಿಖೆಗೆ ಒಳಪಟ್ಟವರ ಮೇಲೆ ಒತ್ತಡ ತಂದು ಸರ್ಕಾರದ ಉನ್ನತ ಮಟ್ಟದಲ್ಲಿ ಇರುವವರ ಹೆಸರು ಹೇಳಬೇಕು ಎಂದು ಇಡಿ ಒತ್ತಡ ಹೇರುತ್ತಿದೆ. ಈ ಮೂಲಕ ಚುನಾಯಿತ ಸರ್ಕಾರವನ್ನು ಉರುಳಿಸುಲ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ತನಿಖೆಯ ಅಂಶಗಳು ಸೆಲೆಕ್ಟಿವ್​ ಆಗಿ ಸೋರಿಕೆ ಆಗುತ್ತಿದೆ. ಇಡಿ‌‌ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮುನ್ನವೇ ಮಾಹಿತಿ ಹೇಗೆ ಸೋರಿಕೆಯಾಯಿತು?. ಮಾಹಿತಿ ನೀಡುವುದು ಇಡಿ ಕೆಲಸ, ಮಾಡಲಿ. ತನಿಖೆ ಮಾಡಿ ಕೋರ್ಟ್​ನಲ್ಲಿ ಆರೋಪಪಟ್ಟಿ ಸಲ್ಲಿಸಲಿ. ರಾಜಕೀಯ ಉದ್ದೇಶಕ್ಕಾಗಿ ಅವರು ತನಿಖಾ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

ಇದು ಬಿಜೆಪಿಯವರ ಎಸ್ಒ​ಪಿ ಆಗಿದೆ.‌ ಕಳೆದ 10 ವರ್ಷದಲ್ಲಿ ಎಷ್ಟು ಸರ್ಕಾರವನ್ನು ಕೇಂದ್ರ ಇಡಿ, ಐಟಿ, ಸಿಬಿಐ ಮೂಲಕ ಬೀಳಿಸಿದೆ. ಗೋವಾ, ಮಣಿಪುರ, ಉತ್ತರಾಖಾಂಡ್, ಕರ್ನಾಟಕ, ಮಧ್ಯಪ್ರದೇಶದಲ್ಲಿ ಸರ್ಕಾರ ಪತನ ಮಾಡಿದ್ದಾರೆ. 444 ಶಾಸಕರನ್ನು ಖರೀದಿಸಲಾಗಿದೆ‌‌. ಬಿಜೆಪಿಯವರ ಮೇಲೆಯೂ ಐಟಿ, ಇಡಿ ಕೇಸ್‌ಗಳಿವೆ. ಅವರ ಮೇಲೆ ಎಲ್ಲಾ ಕೇಸುಗಳು ಏಕೆ ಸ್ಥಗಿತವಾಗಿವೆ?

ಬಿಜೆಪಿ ಸೇರಿದರೆ ಆರೋಪಿ ರಾಜಕೀಯ ನಾಯಕರು ಕಾನೂನು ಕುಣಿಕೆಯಿಂದ ಪಾರಾಗುತ್ತಾರೆ. 121 ರಾಜಕೀಯ ನಾಯಕರ ಮೇಲೆ ದಾಳಿ ಮಾಡಿದೆ. ಈ ಪೈಕಿ 115 ವಿಪಕ್ಷಗಳ ಮೇಲೆ ದಾಳಿ ಮಾಡಿದೆ. 3,000 ಇ.ಡಿ, ಐಟಿ, ಸಿಬಿಐ ದಾಳಿಗಳಾಗಿವೆ. ಅದರಲ್ಲಿ ಶೇ 25ರಷ್ಟು ಮಾತ್ರ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಮೇಲೆ ಅಕ್ರಮ ಆಸ್ತಿ ಪ್ರಕರಣ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಪದೇ ಪದೇ ದುಬೈಗೆ ಹೋಗುತ್ತಾರೆ ಎಂದು ಅವರ ಪಕ್ಷದ ಹಾಲಿ ಶಾಸಕರೇ ಆರೋಪಿಸುತ್ತಿದ್ದಾರೆ. ಈ ಕುರಿತು ಏಕೆ ತನಿಖೆ ಮಾಡುತ್ತಿಲ್ಲ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದರು.