ಮನೆ ರಾಜ್ಯ ಜನ ಕಲ್ಯಾಣೋತ್ಸವ: ರಾಜ್ಯ ಮಟ್ಟದ ಕಥಾ ಸ್ಪರ್ಧೆ

ಜನ ಕಲ್ಯಾಣೋತ್ಸವ: ರಾಜ್ಯ ಮಟ್ಟದ ಕಥಾ ಸ್ಪರ್ಧೆ

0

ಬೆಂಗಳೂರು (Bengaluru)-ಹಸಿರು ಕ್ರಾಂತಿಯ ಹರಿಕಾರರಾಗಿ ಹೋರಾಟದ ಹಾದಿಯಲ್ಲಿ ಮುಂಚೂಣಿಯಲ್ಲಿದ್ದ  ಪತ್ರಕರ್ತ ದಿ. ಕಲ್ಯಾಣರಾವ್ ಮುಚಳಂಬಿಯವರ ನೆನಪಿನಂಗಳದ ಕಾರ್ಯಕ್ರಮ ಜನ ಕಲ್ಯಾಣೋತ್ಸವ ನಿಮಿತ್ತ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಆಯ್ಕೆಯಾಗುವ ಮೂರು ಅತ್ಯುತ್ತಮ ಕಥೆಗಳಿಗೆ ಕ್ರಮವಾಗಿ ಪ್ರಥಮ 5,000 ರೂ., ದ್ವಿತೀಯ 3,000 ರೂ. ಮತ್ತು ತೃತೀಯ 2,000 ರೂ.ಗಳ ನಗದು ಬಹುಮಾನದೊಂದಿಗೆ ಪುರಸ್ಕರಿಸಲಾಗುವುದು.

ಟೈಪ್ ಮಾಡಿದ ಕಥೆ ಡಿಟಿಪಿಯಲ್ಲಿ ಐದು ಪುಟಗಳನ್ನು ಮೀರದಂತಿರಬೇಕು. ಕಥೆ ಈ ಹಿಂದೆ ಎಲ್ಲೂ ಯಾವುದೇ ಮಾಧ್ಯಮದಲ್ಲಿ ಯಾವುದೇ ರೀತಿಯಲ್ಲಿ ಪ್ರಸಾರವಾಗಿರಬಾರದು, ಪ್ರಕಟವಾಗಿರಬಾರದು, ಸಾಮಾಜಿಕ ಮಾಧ್ಯಮದಲ್ಲೂ ಬಂದಿರಬಾರದು. ಹೊಚ್ಚ ಹೊಸ ಕಥೆಯಾಗಿರಬೇಕು. ಕಥೆಯ ಹಾಳೆಯಲ್ಲಿ ಎಲ್ಲೂ ನಿಮ್ಮ ಹೆಸರು, ಮೊಬೈಲ್ ನಂಬರ್ ಬರೆಯಬಾರದು.

ಕಥೆಗಾರರು ತಮ್ಮ ಹೆಸರು, ಮೊಬೈಲ್ ನಂಬರ್, ಅಂಚೆ ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಪಾಸ್ ಪೋರ್ಟ್ ಅಳತೆಯ ಫೋಟೋದೊಂದಿಗೆ ಕಥೆಗೆ ಲಗತ್ತಿಸಿ ಕಳಿಸಬೇಕು. ಒಬ್ಬರು ಒಂದೇ ಕಥೆ ಕಳಿಸಲು ಅವಕಾಶವಿದೆ. ಕಥಾ ಸ್ಪರ್ಧೆಯ ತೀರ್ಪುಗಾರರ ತೀರ್ಮಾನವೇ ಅಂತಿಮ. ಈ ಕುರಿತು ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.

ಕಥೆಗಳನ್ನು ಜೂನ್ 30‌ ರೊಳಗೆ # ರಾಜೇಂದ್ರ ಪಾಟೀಲ, ನಂ. 101, ಮೊದಲ ಮಹಡಿ, ಶ್ರೀಗುರೂಜಿ ಅಪಾರ್ಟ್ಮೆಂಟ್, ಗ್ರೀನ್ ಪಾರ್ಕ್ ಲೇಔಟ್, ಸರಸ್ವತಿಪುರಂ, ಕುಸುಗಲ್ಲ ರಸ್ತೆ, ಕೇಶ್ವಾಪುರ,  ಹುಬ್ಬಳ್ಳಿ-580023 ಇಲ್ಲಿಗೆ ಕಳುಹಿಸಬೇಕು. ಈ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಮೂಲಕ ಕಳಿಸುವಂತೆ ಕಥಾ ಸ್ಪರ್ಧೆಯ ಆಯೋಜಕರ ಪರವಾಗಿ ಸಂಯೋಜಕ ರಾಜೇಂದ್ರ ಪಾಟೀಲ ಕೋರಿದ್ದಾರೆ.