ಮನೆ ಆರೋಗ್ಯ ಮೂತ್ರಪಿಂಡಗಳು : ಭಾಗ ಎರಡು

ಮೂತ್ರಪಿಂಡಗಳು : ಭಾಗ ಎರಡು

0

 ಮೂತ್ರಪಿಂಡಗಳ ವೈಫಲ್ಯ

     ಮೂತ್ರಪಿಂಡಗಳು ರಕ್ತದಲ್ಲಿನ ವ್ಯರ್ಥ ಪದಾರ್ಥಗಳನ್ನು ಸರಿಯಾಗಿ ಹೊರಹಾಕಲಾರದೇ ಹೋದಾಗ ವ್ಯರ್ಥ ಪದಾರ್ಥಗಳನ್ನು ಮೂತ್ರದ ಮೂಲಕ ಸರಿಯಾಗಿ ವಿಸರ್ಜಿಸಲಾರದಾಗ ಶರೀರದಲ್ಲಿ ಉಪ್ಪು ನೀರನ್ನು ಸರಿಯಾಗಿ  ಸಮತೋಲನದಲ್ಲಿ ಇಡಲಾರದೇ ಹೋದಾಗ ಶರೀರದಲ್ಲಿ ರಕ್ತದೊತ್ತಡವನ್ನು ಕ್ರಮಗೊಳಿಸಲಾರದೇ ಹೋದಾಗ ಮೂತ್ರಪಿಂಡಗಳು ಸೂಕ್ತವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದುಕೊಳ್ಳಬಹುದು.ಇದನ್ನೇ ಮೂತ್ರಪಿಂಡಗಳ ವೈಫಲ್ಯ ಎನ್ನುತ್ತಾರೆ.

Join Our Whatsapp Group

★ ಕಿಡ್ನಿ ಫೇಲ್ಯೂರ್ ನಲ್ಲಿ ಎರಡು ಪ್ರಕಾರಗಳಿವೆ:

1. ಆಕ್ಯೂಟ್ ಕಿಡ್ನಿ ಫೇಲ್ಯೂರ್ (ಆಗಿಂದಾಗ ಹಠಾತ್ತಾಗಿ ಕಾಣಿಸಿಕೊಳ್ಳುವುದು )

2. ಕ್ರಾನಿಕ್ ಕಿಡ್ನಿ ಫೇಲ್ಯೂರ್ (ಎಂದೋ ಪ್ರಾರಂಭವಾಗಿ ಈಗ ತೀವ್ರ ಸ್ಥಿತಿಗೆ ಬಂದಿರುವುದು.)

 ★ಆಕ್ಯೂಟ್ ಕಿಡ್ನಿ ಫೇಲ್ಯೂರ್ ಗೆ ಮೂಲಕಾರಣವನ್ನು ಕಂಡುಹಿಡಿದು,ಅದಕ್ಕೆ ತಕ್ಕ ಚಿಕಿತ್ಸೆ ಮಾಡಿದರೆ ಕಿಡ್ನಿಗಳು ಪುನಃ ಸಾಮಾನ್ಯವಾಗಿ ಕೆಲಸ ಮಾಡುತ್ತವೆ.

       ★ಕ್ರಾನಿಕ್ ಕಿಡ್ನಿ ಫೇಲ್ಯೂರ್  ನಲ್ಲಿ ಕಿಡ್ನಿಗಳು ಪುನಃ ಮಾಮೂಲು ಸ್ಥಿತಿಗೆ ಬರಲಾರದಷ್ಟು ಕೆಟ್ಟು ಹೋಗಿರುತ್ತವೆ.

 ಆಕ್ಯೂಟ್ ಕಿಡ್ನಿ ಫೇಲ್ಯೂರ್

      ತಿವ್ರವಾಗಿ ಗಾಯಗೊಳ್ಳುವುದಾಗಲಿ, ಗಂಭೀರ ಕಾಯಿಲೆಯ ಮೂಲಕವಾಗಲಿ, ಶರೀರದಲ್ಲಿ ಸೋಂಕು ಸೇರಿದರಾಗಲಿ, ದೇಹಕ್ಕೆ ಸುಟ್ಟು ಗಾಯಗಳಾದರಾಗಲಿ ಅಕ್ಯೂಟ್  ಫೆಲ್ಯೂರ್ ಉಂಟಾಗುವ ಸಂಭವವಿದೆ.

★ ತೀವ್ರವಾಗಿ ರಕ್ತಸ್ರಾವವಾದ,ಶರೀರದ ತೀವ್ರವಾಗಿ ಸುಟ್ಟು ಸಂದರ್ಭಗಳಲ್ಲಿ ಕಿಡ್ನಿಗಳಿಗೆ ಹೋಗುವ ರಕ್ತ ಪ್ರಮಾಣದ ಒತ್ತಡ ಬಹಳ ಕಡಿಮೆ ಯಾಗುತ್ತದೆ.ಹೃದಯಘಾತ,ಅಕ್ಯೂಟ್ ತರಹ ಸಂದರ್ಭಗಳಲ್ಲಿ ಕೂಡಾ ಹೀಗೆ ಆಗುತ್ತದೆ.

★ ಕಿಡ್ನಿಗಳಿಗೆ ಹೋಗುವ ರಕ್ತ ಪೂರೈಕೆ ಬಹಳ ಕಡಿಮೆಯಾದಾಗ ಕಿಡ್ನಿಗಳಲ್ಲಿರುವ ಫಿಲ್ಟರಿಂಗ್ ಯೂನಿಟ್ ಗಳಿಗೆ ಹನಿಯುಂಟಾಗುತ್ತದೆ.

★ ಕಿಡ್ನಿಗಳಗೆ ಕಲ್ಲುಗಳನ್ನು ಏರ್ಪ ಡುವ ಮೂಲಕ ಮೂತ್ರ ಹರಿಯುವಿಕೆಗೆ ಅಡಚಣೆಯಾದಾಗ ಸಹ, ಆಕ್ಯೂಟ್ ಕಿಡ್ನಿ ಫೇಲ್ಯೂರ್ ಸಂಭವಿಸುವುದು.

 ಆಕ್ಯಟ್ ಕಿಡ್ನಿ ಫೇಲ್ಯೂರ್ ಲಕ್ಷಣಗಳು

 ★ಆಕ್ಯೂಟ್  ಕಿಡ್ನಿ ಫೇಲ್ಯೂರ್ ನಲ್ಲಿ ಸ್ಪಷ್ಟವಾಗಿ ಕಾಣುವ ಲಕ್ಷಣ ಮೂತ್ರ ಪ್ರಮಾಣ ಬಹಳ ಕಡಿಮೆಯಾಗುವುದು

★ ದಿನಕ್ಕೆ 400 ಮಿ.ಲಿ. ಗಿಂತ ಕಡಿಮೆ ಮೂತ್ರ  ವಿಸರ್ಜನೆ ಯಾಗುವುದನ್ನು ಮೂತ್ರದ ಕೊರತೆ ಎನ್ನುತ್ತಾರೆ. ಇದರ ಅರ್ಥ ರಕ್ತದಲ್ಲಿನ ತ್ಯಾಜ್ಯ ವಸ್ತುಗಳನ್ನು ಮೂತ್ರಪಿಂಡಗಳನ್ನು ಸರಿಯಾಗಿ ಹೊರಹಾಕುತ್ತಿಲ್ಲವೆಂದು.

★ ಮೂತ್ರ ವಿಸರ್ಜನೆ ಪೂರ್ತಿಯಾಗಿ ನಿಂತು ಹೋಗುವುದನ್ನು Anuria ಎನ್ನುತ್ತಾರೆ. ಇದರಿಂದ  ಶರೀರದಲ್ಲಿ ಮಲೀನ ಪದಾರ್ಥಗಳು ಅಧಿಕ ಸಂಗ್ರಹವಾಗುತ್ತವೆ

★ ಕೆಲವರಿಗೆ ಕಿಡ್ನಿಯಲ್ಲಿನ ಫಿಲ್ಟರಿಂಗ್ ಯೂನಿಟ್ ಗಳು  ಶುದೀಕರಿಸುವ ಕೆಲಸವನ್ನು ಮಾಡದೇ ಹೋದರೂ. ಸಾಮಾನ್ಯ ಪ್ರಮಾಣದಲ್ಲಿಯೇ ಮೂತ್ರ ವಿಸರ್ಜಿಸುತ್ತಿರುತ್ತಾರೆ ಈ ಪರಿಸ್ಥಿತಿಯನ್ನುNonoliguricn Acute Kidney Failure  ಎನ್ನುತ್ತಾರೆ

★ ಆಕ್ಯೂಟ್ ಕಿಡ್ನಿ ಫೇಲ್ಯೂರ್ ಪ್ರಾರಂಭವಾದ ಸ್ವಲ್ಪ ಕಾಲದಲ್ಲಿಯೇ ಮತ್ತೇರಿದಂತಿರುವುದು, ಹೊಟ್ಟೆ ತೊಳೆಸುವುದು. ವಾಂತಿಯಾಗುವುದು, ಏದುಸಿರು ಮುಂತಾದ ಕೆಲವು ಲಕ್ಷಣಗಳು ಕಾಣಿಸುತ್ತವೆ.