ಮನೆ ರಾಜ್ಯ ಮಹಾರಾಜ ಟ್ರೋಫಿ 2024 ಗಾಗಿ ಮೈಸೂರಿನಲ್ಲಿ ಟ್ಯಾಲೆಂಟ್ ಹಂಟ್

ಮಹಾರಾಜ ಟ್ರೋಫಿ 2024 ಗಾಗಿ ಮೈಸೂರಿನಲ್ಲಿ ಟ್ಯಾಲೆಂಟ್ ಹಂಟ್

0

ಮೈಸೂರು: ಭಾರತದ ಪ್ರಮುಖ ಅಗರಬತ್ತಿ ತಯಾರಕರು ಮತ್ತು ಮೈಸೂರು ವಾರಿಯರ್ಸ್‌ ಮಾಲೀಕರಾಗಿರುವ ಎನ್‌ಆರ್ ಗ್ರೂಪ್. ಮಹಾರಾಜ ಟ್ರೋಫಿ ಕೆಎಸ್‌ಎ ಟಿ20 2024ರಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸುವ ಯುವ ಆಟಗಾರರನ್ನು ಆಯ್ಕೆ ಮಾಡಲು ಮೈಸೂರಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ.

Join Our Whatsapp Group

ಈ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ 55 ಮಧ್ಯಮ ವೇಗದ ಬೌಲರ್‌ ಗಳು, 50 ಸ್ಪಿನ್ನರ್‌ಗಳು, 40 ಬ್ಯಾಟ್ಸ್ ಮನ್‌ಗಳು, 40 ಅಲ್‌ರೌಂಡರ್‌ಗಳು ಮತ್ತು 40 ವಿಕೆಟ್ ಕೀಪರ್‌ಗಳು ಸೇರಿದಂತೆ ಒಟ್ಟು 200 ಯುವ ಕ್ರಿಕೆಟಿಗರು ಭಾಗವಹಿಸಿದ್ದರು.

ಆಯ್ಕೆಯಾದ 2 ಆಟಗಾರರು 15 ದಿನಗಳು ಕಠಿಣ ತರಬೇತಿಗೆ ಒಳಗಾಗಲಿದ್ದಾರೆ. ಆ ಬಳಿಕ ಆಗಸ್ಟ್ 15ರಿಂದ ಸೆಪ್ಟೆಂಬರ್ 1 ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.

ಈ ಪಂದ್ಯಾವಳಿಯಿ ಮೈಸೂರು ವಾರಿಯರ್ಸ್ ತಂಡದ ಜೊತೆಗೆ ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಶಿವಮೊಗ್ಗ ಲಯನ್ಸ್ ಒಳಗೊಂಡು ಕರ್ನಾಟಕದ ಒಟ್ಟು ಆರು ತಂಡಗಳು ಸ್ಪರ್ಧಿಸಲಿವೆ.