ಮನೆ ರಾಷ್ಟ್ರೀಯ RSS ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆ ಮೇಲೆ ಹೇರಿದ್ದ ನಿಷೇಧ ಕೇಂದ್ರದಿಂದ ತೆರವು

RSS ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆ ಮೇಲೆ ಹೇರಿದ್ದ ನಿಷೇಧ ಕೇಂದ್ರದಿಂದ ತೆರವು

0

ನವದೆಹಲಿ: ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಹೇರಿದ್ದ ನಿಷೇಧವನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ಸೋಮವಾರ (ಜುಲೈ22) ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

Join Our Whatsapp Group

ಸರ್ಕಾರಿ ನೌಕರರು RSS ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಕೇಂದ್ರ ಹೇಳಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ವಾಗತಿಸಿದೆ.

ಈ ಹಿಂದಿನ ಸರ್ಕಾರ (ಕಾಂಗ್ರೆಸ್)‌ ರಾಜಕೀಯ ಲಾಭಕ್ಕಾಗಿ ನಿಷೇಧ ಹೇರಿತ್ತು ಎಂದು ಕೇಂದ್ರ ಆರೋಪಿಸಿದೆ. ಐತಿಹಾಸಿಕವಾಗಿ ಸರ್ಕಾರಿ ನೌಕರರು ಆರ್‌ ಎಸ್‌ ಎಸ್‌ ಜತೆ ಸಹಭಾಗಿತ್ವ ಹೊಂದುವುದಕ್ಕೆ ಕೇಂದ್ರ ಸರ್ಕಾರ ಈ ಹಿಂದೆ ನಿಷೇಧ ಹೇರಿತ್ತು.

ನಿಷೇಧವನ್ನು ತೆರವುಗೊಳಿಸಿರುವ ಆದೇಶವನ್ನು ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸಿದ ನಂತರ ಹಲವಾರು ವಿಪಕ್ಷಗಳು, ಆಕ್ರೋಶ ವ್ಯಕ್ತಪಡಿಸಿದ್ದವು. ಪ್ರಸಕ್ತ ಕೇಂದ್ರ ಸರ್ಕಾರದ ನಿರ್ಧಾರ ಸೂಕ್ತವಾಗಿದ್ದು, ಇದರಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುತ್ತದೆ ಎಂದು ಆರ್‌ ಎಸ್‌ ಎಸ್‌ ವಕ್ತಾರ ಸುನೀಲ್‌ ಅಂಬೇಕರ್‌ ತಿಳಿಸಿದ್ದಾರೆ.

ಕಳೆದ 99ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿತ್ತು. ಸಂಘದ ಪಾತ್ರದ ಬಗ್ಗೆ ದೇಶದ ವಿವಿಧ ಮುಖಂಡರು ಶ್ಲಾಘನೆ ವ್ಯಕ್ತಪಡಿಸಿದ್ದರು ಎಂದು ಅಂಬೇಕರ್‌ ಹೇಳಿದರು.