ಮನೆ ರಾಷ್ಟ್ರೀಯ ಕೇಂದ್ರ ಬಜೆಟ್: ಉದ್ಯೋಗ, ಶಿಕ್ಷಣ, ಕೌಶಲ್ಯಾಭಿವೃದ್ದಿಗೆ 1.48 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಬಜೆಟ್: ಉದ್ಯೋಗ, ಶಿಕ್ಷಣ, ಕೌಶಲ್ಯಾಭಿವೃದ್ದಿಗೆ 1.48 ಲಕ್ಷ ಕೋಟಿ ರೂ. ಮೀಸಲು

0

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ (ಜು.23) ಲೋಕಸಭೆಯಲ್ಲಿ ತಮ್ಮ 7ನೇ ಬಜೆಟ್‌ ಮಂಡಿಸಿದ್ದು, ಈ ಬಾರಿ ಬಡವರು, ಮಹಿಳೆಯರು, ಕೃಷಿಕರು, ರೈತರು ಕಾರ್ಮಿಕರಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

Join Our Whatsapp Group

ಭವಿಷ್ಯದ ಹಿತದೃಷ್ಟಿಯಿಂದ 9 ವಿಷಯಗಳಿಗೆ ಆದ್ಯತೆ ನೀಡುವ ಮೂಲಕ ಭವಿಷ್ಯದ ಬಜೆಟ್‌ ಅನ್ನು ರೂಪಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು. ಕೃಷಿ, ಉದ್ಯೋಗ, ಕೌಶಲ್ಯ, ಮಾನವ ಸಂಪನ್ಮೂಲದ ಸುಧಾರಣೆ, ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ, ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಸೀತಾರಾಮನ್‌ ಬಜೆಟ್‌ ನಲ್ಲಿ ತಿಳಿಸಿದ್ದಾರೆ.

ಭವಿಷ್ಯದ ಬಜೆಟ್‌ ನಲ್ಲಿ 9 ಅಂಶಗಳಿಗೆ ಒತ್ತು ನೀಡುವ ಮೂಲಕ ಎಲ್ಲರಿಗೂ ಸಮಾನ ಆದ್ಯತೆ ನೀಡಲಾಗಿದೆ. 2024ರ ಬಜೆಟ್‌ ನಲ್ಲಿ ನಾಲ್ಕು ಪ್ರಾಥಮಿಕ ಅಂಶಕ್ಕೆ ಒತ್ತು ನೀಡಿದ್ದು, ಅದರಲ್ಲಿ ಉದ್ಯೋಗ, ಕೌಶಲ್ಯ, ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮ ಮತ್ತು ಮಧ್ಯಮ ವರ್ಗಕ್ಕೆ ಆದ್ಯತೆ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

ಈ ಯೋಜನೆಗಳಿಂದ ಐದು ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಲಾಭವಾಗಲಿದೆ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಐದು ಸ್ಕೀಮ್‌ ಗಳ ಪ್ಯಾಕೇಜ್‌ ಅನ್ನು ನಾನು ಸಂತೋಷದಿಂದ ಘೋಷಿಸುತ್ತಿದ್ದೇನೆ ಎಂದರು.