ಮನೆ ರಾಷ್ಟ್ರೀಯ ಬಜೆಟ್: ಉದ್ಯೋಗಸ್ಥ ಮಹಿಳೆಯರ ನೆರವಿಗೆ ಹಾಸ್ಟೆಲ್‌, ಇಂಟರ್ನ್‌ ಶಿಪ್ ವೇಳೆ 5 ಸಾವಿರ ರೂ.

ಬಜೆಟ್: ಉದ್ಯೋಗಸ್ಥ ಮಹಿಳೆಯರ ನೆರವಿಗೆ ಹಾಸ್ಟೆಲ್‌, ಇಂಟರ್ನ್‌ ಶಿಪ್ ವೇಳೆ 5 ಸಾವಿರ ರೂ.

0

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬಜೆಟ್ ಮಂಡಿಸುತ್ತಿದ್ದು’”ಕಾರ್ಯನಿರತ ಮಹಿಳಾ ಹಾಸ್ಟೆಲ್‌ ಗಳನ್ನು ಸ್ಥಾಪಿಸಲಾಗುವುದು. ಉದ್ಯೋಗಿಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ಹಾಸ್ಟೆಲ್‌ ಗಳು ಮತ್ತು ಕ್ರೆಚ್‌ಗಳ(ಸಣ್ಣ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ) ಮೂಲಕ ಪ್ರೋತ್ಸಾಹ ನೀಡಲಾಗುವುದು” ಎಂದು ಘೋಷಿಸಿದ್ದಾರೆ.

Join Our Whatsapp Group

ನಮ್ಮ ಸರ್ಕಾರವು ಒಟ್ಟಾರೆ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಹಕಾರ ನೀತಿಯನ್ನು ತರಲಿದ್ದು. ನಮ್ಮ ಸರ್ಕಾರವು ಸಾಲಗಳಿಗೆ ಆರ್ಥಿಕ ನೆರವು ನೀಡುತ್ತದೆ. ದೇಶೀಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷದವರೆಗೆ ನೆರವು ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

“ಸರ್ಕಾರ 500 ಉನ್ನತ ಕಂಪನಿಗಳಲ್ಲಿ 1 ಕೋಟಿ ಯುವಕ-ಯುವತಿಯರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಯೋಜನೆ. ತಿಂಗಳಿಗೆ 5000 ರೂ. ಇಂಟರ್ನ್‌ಶಿಪ್ ಭತ್ಯೆ ಮತ್ತು ಒಂದು-ಬಾರಿ 6000 ರೂ.ಗಳ ಸಹಾಯ ಧನದೊಂದಿಗೆ ಪ್ರಾರಂಭಿಸಲಿದೆ” ಎಂದು ತಿಳಿಸಿದ್ದಾರೆ.