ಮನೆ ಯೋಗಾಸನ ಪಾರ್ಶ್ವ ಶೀರ್ಷಾಸನ

ಪಾರ್ಶ್ವ ಶೀರ್ಷಾಸನ

0

ಪಾಶ್ವ’ವೆಂದರೆ ಪಕ್ಕ ಇಲ್ಲವೇ ಬದಿ ‘ಶ್ರೀರ್ಷಾಸನ’ದ ಈ ವ್ಯತ್ಯಾಸ ಭಂಗಿಯಲ್ಲಿ  ತಲೆಯ ಮತ್ತು ಕೈಗಳ ಸ್ಥಾನಗಳನ್ನು ಸ್ವಲ್ಪವೂ ಬಿಟ್ಟು ಕದಲಿಸದೆ ಸಮತೋಲನ ಸ್ಥಿತಿಯಲ್ಲಿ ನೆಲೆಸಿದಾಗ, ಮುಂಡ ಮತ್ತು ಕಾಲುಗಳನ್ನು ಎರಡೂ ಪಕ್ಕಗಳಿಗೆ ತಿರುಗಿಸಿಡಬೇಕಾಗಿದೆ.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ತೋರಿಸಿರುವಂತೆ ನೇರವಾಗಿ ನಿಲ್ಲಿಸಲಿರುವ ಸಾಲಂಬ ಶ್ರೀರ್ಷಾಸನ  ಒಂದು ಭಂಗಿಯಿಂದ ಮುಂದುವರಿಸಿ, ಉಸಿರನ್ನು ಹೊರಬಿಟ್ಟು,ಬೆನ್ನು ಮೂಳೆಯನ್ನು ಬಲಪಕ್ಕಕ್ಕೆ ತಿರುಚಿಡುವುದಲ್ಲದೆ ತಲೆ ಮತ್ತು ಕೈಗಳ ಬಿಟ್ಟು ಉಳಿದ ದೇಹ ಭಾಗಗಳೆಲ್ಲವನ್ನೂ ಪಕ್ಕಕ್ಕೆ ತಿರುಗಿಸಿಡಬೇಕು.

2. ಬಳಿಕ ಭಂಗಿಯಲ್ಲಿ ಕಾಲುಗಳನ್ನೂ ಮತ್ತು ನಾಭಿ ಪ್ರದೇಶವನ್ನೂ ಚಿತ್ರಗಳಲ್ಲಿ ತೋರಿಸಿರುವಂತೆ ತಮ್ಮ ಮೂಲಸ್ಥಾನದಿಂದ ಪಕ್ಕಗಳಿಗೆ 90 ಡಿಗ್ರಿಗಳಷ್ಟು ತಿರುಗಿಸಬೇಕು. ಆಗ ತೇಲುವ ಪಕ್ಕೆಲುಬುಗಳ ಪ್ರದೇಶಗಳ ಬಳಿ ಸೆಳೆತದ  ಪರಿಣಾಮವಾಗುವಂತೆ ಇರಬೇಕು.

3. ಈ ಭಂಗಿಯಲ್ಲಿ 20 ರಿಂದ 30 ಸೆಕೆಂಡುಗಳ ಕಾಲ,ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು.

4. ಆಮೇಲೆ ಉಸಿರನ್ನು ಹೊರಬಿಟ್ಟು ಮತ್ತೆ ಸಲಾಂಬ ಶ್ರೀರ್ಷಾಸನ ಒಂದು ಭಂಗಿಗೆ ಬಂದು, ಬಳಿಕ ಉಸಿರನ್ನು ಒಳಕ್ಕೆಳೆದು,ಮತ್ತೆ ಉಸಿರನ್ನು ಹೊರಹೋಗಿಸಿ,ಎಡ ಪಕ್ಕದಲ್ಲಿಯೂ ಇದೇ ಬಗೆಯಾದ ಭಂಗಿಯನ್ನಭ್ಯಸಿಸಿ ಅಷ್ಟೇ ಕಾಲ ಅದೇ ರೀತಿಯಲ್ಲಿ ಆ ಭಂಗಿಯಲ್ಲಿ  ನೆಲೆಸಬೇಕು. ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು ಮತ್ತೆ ನೇರವಾದ ಸಲಂಭ  ಶ್ರೀರ್ಷಾಸನ  ಒಂದರ ಭಂಗಿಗೆ ಹಿಂದಿರಗ ಬೇಕು.

ಪರಿಣಾಮಗಳು

 ಈ ಆಸನದ ಭಂಗಿಗಳು ಬೆನ್ನು ಮೂಳೆಯನ್ನು ಬಲಗೊಳಿಸಿ,ಅದರಲ್ಲಿ ಸ್ಥಿತಿಸ್ಥಾಪಕತ್ವವನ್ನು  ನೆಲೆಗೊಳಿಸುತ್ತದೆ.