ಶ್ರಾವಣ ಬಹುಳ ಬಿದಿಗೆಯ ದಿನದಿ
ಶ್ರೀ ಗುರುರಾಜರ ಆರಾಧನಾ ||
ಶಶರಿಗಾರಾಗಿ ಬೃಂದವನವನು ||
ರಾಯರು ಸೇರಿದ ಪುಣ್ಯದಿನ || ಶ್ರವಣ ||
ಭೂಮಿಯ ಮೇಲೆ ಧರ್ಮವ ಸ್ಥಾಪಿಸೆ
ಬಂದಂತವರ ಆರಾಧನ ||
ಸುಧಾ ಪರಿಮಳ ಭಾಷ್ಯವರಚಿಸಿದ |
ಮಹಾ ಮಹಿಮರ ಪುಣ್ಯ ದಿನ || ಶ್ರಾವಣ||
ಲೆಕ್ಕವಿಲ್ಲದ ಪವಾಡಗಳು
ತೋರಿದ ಮುನಿಯ ಆರಾಧನ |
ಮೂಲರಾಮ ಕೃಷ್ಣ ನರಹರಿಯಚನೆ ||
ಮಾಡಿದ ಗುರುವಿನ ಪುಣ್ಯ ದಿನ || ಶ್ರಾವಣ||
ರಾಮ ಲಕ್ಷ್ಮಣರು ವಿಶ್ರಾಂತಿ ಪಡೆದ
ಶಿಲೆಯಲಿ ರಾಯರ ಬೃಂದಾವನ ||
ಪ್ರಹ್ಲಾದ ರಾಯರು ಯಾಗವ ಗೈದ |
ಮಂತ್ರಾಲಯದಲಿ ನೀವೇಶಣ |
ಏಳು ಶತಕಗಳ ವರ್ಷದ ಕಾಲದ
ರಾಯರ ಮಹಿಮೆಯ ಪ್ರದರ್ಶನ ||
ಮನುಜರ ಕಷ್ಟವ ತೀರಿಸಿ ಕಾಯುವ |
ಗುರುಗಳ ಕರುಣೆಯೆ ನಿರ್ದರ್ಶನ ||ಶ್ರಾವಣ ||