ಮನೆ ವ್ಯಕ್ತಿತ್ವ ವಿಕಸನ ದೃಢಸಂಕಲ್ಪದವರಾಗಿ

ದೃಢಸಂಕಲ್ಪದವರಾಗಿ

0

ಪಿಲಿಡೆಲ್ಫಿಯಾದ ಒಬ್ಬ ಶ್ರೀಮಂತ ನಾಸ್ತಿಕರಾದ ಗೀರಾರ್ಡ್ ಒಂದು ಶನಿವಾರ ತಮ್ಮ ಎಲ್ಲಾ ಗುಮಾಸ್ತರು ಮರುದಿನ ಆಫೀಸಿಗೆ  ಬಂದು ಹೊಸದಾಗಿ ಬಂದ ಆರ್ಡರಿನ ಕೆಲಸ ಮಾಡಬೇಕೆಂದು ಹೇಳಿದರು.

     ಆಗ ಒಬ್ಬ ಯುವಕ ಮೆಲ್ಲನೆ  ಹೇಳಿದ “ಗಿರಾರ್ಡ್ ರವರೇ, ನನಗೆ ಭಾನುವಾರ ಕೆಲಸ ಮಾಡಲಾಗುವುದಿಲ್ಲ.”

     ನಿನಗೆ ಕಂಪನಿ ನಿಯಮ ಗೊತ್ತಿದೆಯಷ್ಟೇ? ಎಂದು ಗಿರಾರ್ಡ್ ಕೇಳಿದರು.

    “ಹೌದು, ಗೊತ್ತು. ಆದರೆ ನಾನು ಭಾನುವಾರ ಕೆಲಸ ಮಾಡಲಾರೆ”ಎಂದವನು ಹೇಳಿದ.

    “ಹಾಗಾದರೆ ಕ್ಯಾಷಿಯರ್ ನಿಮ್ಮ ಸಂಬಳದ ಇತ್ಯರ್ಥ ಮಾಡುತ್ತಾರೆ” ಎಂದು ಗಿರಾರ್ಡಾ ಎಂದರು.

    ಒಂದು ದಿನ ಒಬ್ಬ ಬ್ಯಾಂಕರ್ ಗಿರಾರ್ಡರ  ಬಳಿಗೆ ಬಂದು ತಮ್ಮ ಬ್ಯಾಂಕಿಗೆ ಉತ್ತಮ ಕ್ಯಾಷಿಯರ್  ಬೇಕು.ನಿಮಗೆ ಯಾರಾದರೂ ತಿಳಿದಿದ್ದರೆ ಅವರನ್ನು ಶಿಫಾರಸ್ಸು ಮಾಡಿರೆಂದರು. ಆಗ ಗಿರಾರ್ಡಾ ಒಬ್ಬ ವ್ಯಕ್ತಿಯನ್ನು  ಬಲವಾಗಿ ಶಿಫಾರಸ್ಸು  ಮಾಡಿದರು.

 ಪ್ರಶ್ನೆಗಳು

1. ಬ್ಯಾಂಕಿನ ಕ್ಯಾಷಿಯರ್ ಹುದ್ದೆಗೆ ಗಿರಾರ್ಡ ಯಾರುನ್ನು ಶಿಫಾರಸ್ಸು  ಮಾಡಿದರು?

2. ಈ ಕಥೆಯ ನೀತಿಯೇನು

 ಉತ್ತರಗಳು

1. ತಾವು ವಜಾ ಮಾಡಿದ ಯುವಕನನ್ನು ಬ್ಯಾಂಕಿನ ಕ್ಯಾಷಿಯರ್ ಹುದ್ದೆಗೆ ಗಿರಾರ್ಡ್ ಬಲವಾಗಿ ಶಿಫಾರಸ್ಸು ಮಾಡಿದರು.

2. ಗಿರಾರ್ಡ್ ಈ ವ್ಯಕ್ತಿಯನ್ನು ವಾಜಾ ಮಾಡಿದರೂ ಆತನ ಉಜ್ವಲ ಗುಣವನ್ನು ಗುರುತಿಸಿದರು. ತಾನು ಸರಿಯೆಂದು ಭಾವಿಸಿದ್ದನ್ನು ಸಾಧಿಸಲು ತನ್ನ ಸ್ವಂತ ಹಿತಾಶಕ್ತಿಯನ್ನು ಬದಿಗಿಡುವ ವ್ಯಕ್ತಿ ಒಬ್ಬ ಪ್ರಾಮಾಣಿಕ, ನಿಷ್ಠ ಕ್ಯಾಷಿಯರ್ ಆಗಬಲ್ಲನು.