ಮನೆ ಸ್ಥಳೀಯ ಹೆಚ್ ಡಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಮುಡಾದಿಂದ ನಿವೇಶನ ಪಡೆದಿಲ್ಲ: ಲಕ್ಷ್ಮಣ್ ಆರೋಪ ನಿರಾಧಾರ...

ಹೆಚ್ ಡಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಮುಡಾದಿಂದ ನಿವೇಶನ ಪಡೆದಿಲ್ಲ: ಲಕ್ಷ್ಮಣ್ ಆರೋಪ ನಿರಾಧಾರ ಎಂದ ಸಾ ರಾ ಮಹೇಶ್

0

ಮೈಸೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರು ನಿವೇಶನಗಳನ್ನು ಪಡೆದಿದ್ದಾರೆಂಬ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ ನಿರಾಧಾರ. ಮುಡಾದಲ್ಲಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಯಾವುದೇ ನಿವೇಶನ ಪಡೆದಿಲ್ಲ‌ ಎಂದು ಮಾಜಿ ಸಚಿವ ಸಾ ರಾ ಮಹೇಶ್ ಸ್ಪಷ್ಟನೆ ನೀಡಿದ್ದಾರೆ.

Join Our Whatsapp Group

ಮುಡಾ ಬಹುಕೋಟಿ ಹಗರಣ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1985ರಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದರೂ ಮಂಜೂರಾಗಿಲ್ಲ. ಅವರು ಸಿಎಂ ಆಗಿದ್ದಾಗಲೂ ಅಧಿಕಾರ, ಪ್ರಭಾವ ಬಳಸಿಕೊಂಡು ನಿವೇಶನ ಪಡೆದಿಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಮುಡಾದಲ್ಲಿ ಬಹುಕೋಟಿ ಹಗರಣ ಬೆಳಕಿಗೆ ಬಂದ ಬಳಿಕ ರಾಜ್ಯ ಸರ್ಕಾರ ಮಾಡಿರುವ ಆದೇಶಕ್ಕೆ ಸಾ ರಾ ಮಹೇಶ್ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದಿಂದ ಮುಂದಿನ ಆದೇಶದವರೆಗೆ ಮುಡಾದಲ್ಲಿ ಯಾವುದೇ ಕೆಲಸ‌ ಕಾರ್ಯಗಳು ನಡೆಯದಂತೆ ತಡೆಯೊಡ್ಡಲಾಗಿದೆ. ಪರಿಣಾಮ ಮುಡಾದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದ ಮುಡಾಗೆ ಬರುವ ಜನರು ತೊಂದರೆ ಅನುಭವಿಸುವಂತಾಗಿದೆ. ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ತೊಂದರೆ ಪಡುವಂತಾಗಿದೆ. ಸರ್ಕಾರದ ಆದೇಶ ಎತ್ತಿಗೆ ಜ್ವರ ಬಂದರೇ ಎಮ್ಮೆಗೆ ಬರೆ ಹಾಕಿದಂತಾಗಿದೆ ಎಂದು ಹರಿಹಾಯ್ದಿದ್ದಾರೆ.

ನಾಲೆ ನೀರು ಕದ್ದರೆ 2 ವರ್ಷ ಜೈಲು, 2 ಲಕ್ಷ ದಂಡ ವಿಧೇಯಕ ವಿಚಾರವಾಗಿ ಮಾತನಾಡಿ, ಈ ವಿಧೇಯಕ ಮಂಡನೆ ಮಾಡಬೇಡಿ. ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ. ನಾಲೆಗೆ ಕಾನೂನು ಬಾಹಿರವಾಗಿ ನೀರಿನ ಪೈಪ್ ಲೈನ್ ಹಾಕುವುದು ತಡೆ ಎಂದಿದ್ದಾರೆ. ಜಮೀನು ಪಕ್ಕದಲ್ಲಿರುವ ನಾಲೆಯಿಂದ ನೀರು ತೆಗೆದುಕೊಂಡರೆ ತಪ್ಪೇನು?  ಬರ, ಅತಿವೃಷ್ಠಿಯಿಂದ ಬಳಲಿರುವ ರೈತರಿಗೆ  ಗಾಯದ ಮೇಲೆ ಬರೆ ಹಾಕುವ ಕೆಲ್ಸ ಮಾಡ್ಬೇಡಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಚಿವ ಸಾರಾ ಮಹೇಶ್ ಮನವಿ ಮಾಡಿದ್ದಾರೆ.