ಮನೆ ಸ್ಥಳೀಯ ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರ ವಜಾ: ಮರುನೇಮಕಕ್ಕೆ ಒತ್ತಾಯ

ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರ ವಜಾ: ಮರುನೇಮಕಕ್ಕೆ ಒತ್ತಾಯ

0

ಮೈಸೂರು: ರಾಜ್ಯವ್ಯಾಪಿ 13 ವೃತ್ತಗಳ ವ್ಯಾಪ್ತಿಯಲ್ಲಿ ಬರುವ ವಿಭಾಗ, ಉಪ-ವಿಭಾಗ ಹಾಗೂ ವಲಯಗಳ ಕಛೇರಿಗಳಲ್ಲಿ ಮತ್ತು ನೆಡುತೋಪುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ನೌಕರರನ್ನು ನೆಡುತೋಪುಗಳ ಅವಧಿ ಮುಗಿದಿದೆ ಕೆಲಸದಿಂದ ವಜಾಗೊಳಿಸಿದ್ದು, ಅವರನ್ನು ಮರು ನೇಮಕ ಮಾಡಿಕೊಳ್ಳಬೇಕೆಂದು  ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಸರ್ಕಾರಿ ದಿನಗೂಲಿ/ಪಿ.ಸಿ.ಪಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರ್ಗಗಳ ನೌಕರರ ಸಂಘ(ರಿ) ಒತ್ತಾಯಿಸಿದೆ.

Join Our Whatsapp Group

ಅರಣ್ಯ ಇಲಾಖೆಯ 13 ವೃತ್ತಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಾದೇಶಿಕ | ಸಾಮಾಜಿಕ/ವನ್ಯಜೀವಿ/ಸಂಶೋಧನೆ ವಿಭಾಗ/ಉಪವಿಭಾಗ/ವಲಯಗಳ ಕಛೇರಿಗಳಲ್ಲಿ, ವಲಯಗಳ ವ್ಯಾಪ್ತಿಯ ನೆಡುತೋಪುಗಳಲ್ಲಿ ದಿನಗೂಲಿಯಿಂದ ಪಿಸಿಪಿ ಆಗಿ ಪಿಸಿಪಿ ಯಿಂದ ಪ್ರಸ್ತುತ ಹೊರಗುತ್ತಿಗೆ ಅಡಿಯಲ್ಲಿ ಅರಣ್ಯ ವೀಕ್ಷಕರು/ಕಾವಲುಗಾರರು, ಕಛೇರಿ/ಸಸ್ಯಕ್ಷೇತ್ರ ರಾತ್ರಿ ಪಾಳಿ ಕಾವಲುಗಾರರು, ಎ.ಪಿ.ಸಿ. ಕ್ಯಾಂಪ್ ವಾಚರ್‌ಗಳು, ಆರ್.ಆರ್.ಟಿ. ಮತ್ತು ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು, ಲಿಪಿಕ/ಅಕ್ಷರಸ್ಥ ಸಹಾಯಕರು, ಕಛೇರಿ ಸೇವಕರು, ಸ್ವೀಪರ್, ಜವಾನರು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳು 07-07-2017ಕ್ಕಿಂತ ಹಿಂದೆಯೇ ಕೆಲಸಕ್ಕೆ ಸೇರಿ ಸುಮಾರು 10-15 ವರ್ಷಗಳಿಗೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವ ನೌಕರರುಗಳಿಗೆ ಉದ್ಯೋಗದಲ್ಲಿ ಭದ್ರತೆ ಇರುವುದಿಲ್ಲ.

ಸದರಿ ನೌಕರನ್ನು ಕೆಲವು ಅಧಿಕಾರಿಗಳು ನೆಡುತೋಪುಗಳ ಅವಧಿ ಮುಗಿದಿದೆ ಎಂದು ಅನುದಾನ ನೆಪಹೇಳಿ ಕೆಲಸದಿಂದ ತೆಗೆಯುತ್ತಿರುತ್ತಾರೆ. ಹಲವಾರು ವರ್ಷಗಳಿಂದ ಇದೇ ವೃತ್ತಿಯನ್ನು ನಂಬಿ ದುಡಿಯುತ್ತಿರುವ ನೌಕರರುಗಳ ಜೀಪನ ಹಾಗೂ ಕುಟುಂಬ ತುಂಬಾ ಅತಂತ್ರ ಸ್ಥಿತಿಯಲ್ಲಿರುತ್ತದೆ.

ಮೈಸೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಬಸವರಾಜು, ಸಣ್ಣಸ್ವಾಮಿ, ಮಹದೇವಸ್ವಾಮಿ ಇವರುಗಳನ್ನು ಕೆಲಸದಿಂದ ತೆಗೆದಿರುತ್ತಾರೆ.

ಗುಂಡ್ಲುಪೇಟೆ ಪ್ರಾದೇಶಿಕ ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಶಿವಣ್ಣ, ಗೋಪಾಲಯ್ಯ, ರಾಜಪ್ಪ,ಮಹದೇವಯ್ಯ, ಪ್ರಕಾಶ ಇವರುಗಳನ್ನೂ ಸಹ ಕೆಲಸದಿಂದ ತೆಗೆದಿರುತ್ತಾರೆ.

 ಹೆಚ್.ಡಿ.ಕೋಟೆ ಪ್ರಾದೇಶಿಕ ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ನಾಗಯ್ಯ ಇವರನ್ನು ಕೆಲಸದಿಂದ ತೆಗೆದಿರುತ್ತಾರೆ. ಇವರುಗಳನ್ನು ಪುನ‌ರ್ ನೇಮಕ ಮಾಡಿಕೊಂಡು ಬಾಕಿ ವೇತನ ಪಾವತಿಸಬೇಕೆಂದು ವಜಾಗೊಂಡಿರುವ ನೌಕರರು ಅಗ್ರಹಿಸಿದ್ದಾರೆ.