ಮನೆ ಆರೋಗ್ಯ ಮೂತ್ರದಲ್ಲಿ ಉರಿ : ಭಾಗ ಒಂದು

ಮೂತ್ರದಲ್ಲಿ ಉರಿ : ಭಾಗ ಒಂದು

0

       ಮೂತ್ರವಿಸರ್ಜನೆ  ಮಾಡುತ್ತಿರುವಾಗ ಉರಿಯಾಗುವುದು (Burning Sensation)ಸ್ತ್ರೀಯರಲ್ಲಿ ಕಾಣಿಸುವ ಒಂದು ಸರವೇ ಸಾಧಾರಣ ಸಮಸ್ಯೆ. ಮೂತ್ರ ಸಾಗುವ ಮಾರ್ಗ (Urinary Tract) ಸೋಂಕಿಗೆ ಈಡಾಗುವುದು ಇದಕ್ಕೆ ಕಾರಣ.

Join Our Whatsapp Group

        ಮೂತ್ರ ಮಾರ್ಗ ಸೋಂಕು ಎರಡು ವಿಧಗಳಲ್ಲಾಗುತ್ತದೆ.

      ★ ಮೂತ್ರ ಮಾರ್ಗ ಮೇಲಿನ ಭಾಗ (Upper Urinary Tract) ಸೋಂಕಿಗೆ ಗುರಿಯಾಗುವುದು. ಕಿಡ್ನಿಗಳು,ಕಿಡ್ನಿಗಳಿಂದ ಮೂತ್ರ ಕೋಶಕ್ಕೆ ಮೂತ್ರವನ್ನು ಸಾಗಿಸುವ Ureters ಮೂತ್ರಕೋಶ  (Urinary   Bladder)ಸೋಂಕಿಗೆ ಗುರಿಯಾಗುವುದು.

     ★ ಮೂತ್ರದ ಮಾರ್ಗದ ಕೆಳಭಾಗ (Lower Urinary Tract) ಸೋಂಕಿಗೆ ಗುರಿಯಾಗುವುದು. ಮೂತ್ರಕೋಶದಿಂದ ಮೂತ್ರ ದ್ವಾರದ ತನಕ ಇರುವ ಮೂತ್ರ  ವಿಸರ್ಜನ ನಾಳ (Urethra)ಇನ್ಫೆಫೆಕ್ಷನ್ ಗೆ ಗುರಿಯಾಗುವುದು.

      ★ಸ್ತ್ರೀಯರಲ್ಲಿ ಈ ಎರಡನೆಯ ಮೂತ್ರ ವಿಸರ್ಜನಾ ನಾಳ ಸೊಂಕಿಗೆ ಗುರಿಯಾಗುವುದೇ ಹೆಚ್ಚಾಗಿರುತ್ತದೆ. ಸ್ತ್ರೀಯರಲ್ಲಿ ಮೂತ್ರ ವಿಸರ್ಜನಾ  ನಾಳದ ಉದ್ದ ಬಹಳ ಕಡಿಮೆ ಯಾಗಿರುವುದೇ ಇದಕ್ಕೆ ಕಾರಣ.

      ★ಮೂತ್ರ ವಿಸರ್ಜನಾನಾಳದ  ಉದ್ದ ಕಡಿಮೆಯಾಗಿರುವುದರಿಂದ ಜನನೇಂದ್ರಿಯದ ಸುತ್ತಮುತ್ತಲಿಂದ ಮಲಧ್ವಾರ ಹತ್ತಿರದಿಂದ ಅನೇಕಾ ನೇಕ ಸೂಕ್ಷ್ಮ ಜೀವಾಣುಗಳು ಬಹಳ ಸುಲಭವಾಗಿ ಸ್ತ್ರೀಯರ ಮೂತ್ರ ವಿಸರ್ಜನಾ ನಾಳದೊಂದಿಗೆ ಪ್ರವೇಶಿಸಿ, ಅಲ್ಲಿಂದ ಮೂತ್ರಕೋಶದವರೆಗೆ ವ್ಯಾಪಿಸಿ,ಆಯಾ ಭಾಗಗಳನ್ನು ಪದೇ ಪದೇ ಸೋಂಕುಗೀಡು ಮಾಡುತ್ತವೆ.

ಯೋನಿಯ ಸೋಂಕುಗಳು

     ★ಸ್ತ್ರಿಜನೇಂದ್ರಿಯದಲ್ಲಿ ಉಂಟಾಗುವ ಸೋಂಕುಗಳ ಬಹಳ ಸುಲಭವಾಗಿ ಪಕ್ಕದಲ್ಲೇ ಇರುವ ಮೂತ್ರ ವಿಸರ್ಜನಾ  ನಾಳಕ್ಕೆ ವ್ಯಾಪಿಸಿ, ಆ ಭಾಗವನ್ನು ಊರಿಯೂತಕ್ಕೊಳಗಾಗಿಸುವುದು ಮೂತ್ರ ಮಾಡುತ್ತಿರುವಾಗ ಉರಿಯುಂಟು ಮಾಡಲೂ  ಕಾರಣವಾಗುತ್ತಿರುತ್ತವೆ.

      ★ಅಂತಹ ಸಂದರ್ಭಗಳಲ್ಲಿ ಆಕೆಗೆ ಪದೇ ಪದೇ  ಮೂತ್ರಕ್ಕೆ  ಹೋಗಬೇಕೆನಿಸುವುದೂ ಮೂತ್ರಕ್ಕೆ ಹೋದಾಗ ಸ್ವಲ್ಪ ಮೂತ್ರ ವಿಸರ್ಜನೆ ಆಗುವುದು ನಡೆಯುತ್ತದೆ.

       ★ಲೈಂಗಿಕ ಕ್ರಿಯೆಯ ಸಮಯದಲ್ಲಾಗುವ ಘರ್ಷಣೆಯ ಕಾರಣವಾಗಿ,,ಈ ಸೋಂಕು ತಗಲುತ್ತದೆ.ಹೊಸದಾಗಿ ಮದುವೆಯಾದ ಯುವತಿಯರಿಗೆ ದಾಂಪತ್ಯ ಜೀವನದಿಂದ ಬರಬಹುದು.

   ಸಿಲೀದ್ರ ಸೋಂಕು ಸೋಂಕು

ಜನೇಂದ್ರಿಯದ ಸುತ್ತ ತುರಿಕೆಯಾಗಿಲಿ ಗುಳ್ಳೆಗಳಾಗಲಿ ಇದ್ದು ಜನೇಂದ್ರಿಯದಿಂದ ಸಾಂದ್ರವಾದ ಬಿಡುಪು  ಬಿಡುಗಡೆಯೂ ಆಗುತ್ತಿದ್ದರೆ, ಅದು (Fungla Opening)ಕಾರಣದಿಂದಾಗಿರುತ್ತದೆ.

      ★ಶಿಲೀಂದ್ರ ಸೋಕಿನ ಜೊತೆಗೆ,ಬ್ಯಾಕ್ಟೀರಿಯಾ ಸೋಂಕು ಕೂಡಾ ಇರಬಹುದು. ಜನನೆಂದ್ರಿಯದಿಂದ ಬರುವ ಬಿಳಿ ಸ್ರಾವ ಮೂತ್ರ ದ್ವಾರವನ್ನು ಊತಕ್ಕೆ ಗುರಿಮಾಡುತ್ತದೆ

      ★ಶಿಲೀಂದ್ರ  ಸೋಂಕಿನ ತೊಂದರೆಯಲ್ಲಿದ್ದ ಡಾಕ್ಟರನ್ನು ತಪ್ಪದೆ ಸಂಪರ್ಕಿಸಬೇಕು. ಸೋಂಕು ತಗುಲಿದೆ ಎಂದು ತಿಳಿದರೆ. ಆೄಂಟಿ ಫಂಗಲ್ ಮಾತ್ರೆಗಳನ್ನು  ಬರೆದುಕೊಡುತ್ತಾರೆ. ಮಾತೆಗಳೇ ಅಲ್ಲದೆ ಕೆಲವು ಮುಲಾಮುಗಳು ಕೂಡಾ ಸಿಗುತ್ತವೆ. ಈ ಮುಲಾಮನ್ನು ಜನನೆಂದ್ರಿಯದೊಳಕ್ಕೆ ಮೂಲಕ ಕಳಿಸಬೇಕಾಗುತ್ತದೆ.

       ★ಶಿಲೀಂದ್ರ ವಿರೋಧಕ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿರುವ ವೇಳೆ,ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು. ಹಾಗೆ ಪಾಲ್ಗೊಂಡರೆ ಸೋಂಕು ಆಕೆಯ ಪತಿಗೂ ಅಂಟುತ್ತದೆ.ಒಮ್ಮೆ ಕಡಿಮೆಯಾದ ಮೇಲೆ ಪುನಃ ಆಕೆಗೆ ಗಂಡನಿಂದ ಬರುವ ಅಪಾಯವಿದೆ.